*ಗೋಣಿಕೊಪ್ಪ, ಏ. ೧: ಪ್ರತಿ ವರ್ಷದಂತೆ ಈ ವರ್ಷವೂ ಜಾನುವಾರು ಕಳ್ಳತನ ಪ್ರಕರಣಕ್ಕೆ ಹೊಸೂರು ಗ್ರಾಮ ಸದ್ದು ಮಾಡುತ್ತಿದೆ. ಕೊಟ್ಟಿಗೆಯಲ್ಲಿ ಕಟ್ಟಿದ ಹಸುಗಳು, ಮೇಯಲು ಬಿಟ್ಟಿದ್ದ ಕರುಗಳು ಸದ್ದೆ ಇಲ್ಲದೆ ಮಾಯ ವಾಗುತ್ತಿವೆ. ಜಾನುವಾರುಗಳನ್ನು ಸೆರೆ ಹಿಡಿಯಲು ಉರುಳಿನ ತಂತ್ರ ಉಪಯೋಗಿಸು ತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಹೊಸೂರು, ಕಾರೆಕಾಡು, ಅತ್ತೂರು ಗಡಿಭಾಗದಲ್ಲಿ ಜಾನುವಾರು ಕಳ್ಳತನ ಆತಂಕವಿಲ್ಲದೆ ನಡೆಯುತ್ತಿದೆ. ಮೇಯಲು ಬಿಟ್ಟ ಹಸುಗಳು ನೀರು ಕುಡಿಯಲು ತೋಡಿಗೆ ಬರುವಾಗ ಜಾನುವಾರುಗಳನ್ನು ಹಗ್ಗದ ದಳೆ ಹಾಕಿ ಹಿಡಿದು ಕಳ್ಳಸಾಗಣೆ ಮಾಡುತ್ತಿದ್ದಾರೆ.
ನಂತರ ಅವುಗಳನ್ನು ಮಾಂಸಕ್ಕಾಗಿ ಮಾರಾಟ ಮಾಡುವ ದೊಡ್ಡ ಜಾಲವೊಂದು ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಪಾಲಿಬೆಟ್ಟ, ಹೊಸೂರು ಭಾಗದ ಕಾಫಿ ತೋಟಗಳಲ್ಲಿ ಸಾಕಷ್ಟು ಜಾನುವಾರು ಗಳ ಕಳೇಬರ ಪತ್ತೆಯಾಗಿದೆ. ಸಿದ್ದಾಫುರ ಪೊಲೀಸ್ ಠಾಣೆಯಲ್ಲಿ ಘಟನೆಗೆ ಸಂಬAಧಿಸಿದAತೆ, ದೂರುಗಳು ದಾಖಲಾಗಿವೆ.
ಎರಡು ಮೂರು ದಿನದ ಹಿಂದೆ ಗಿರ್ ತಳಿಯ ಗೂಳಿ ಕಾಣೆ ಯಾಗಿದೆ ಎಂದು ಹೊಸೂರು ಗ್ರಾಮದ ಪಟ್ಟಡ ಟಿ. ಉತ್ತಯ್ಯ ತಿಳಿಸಿದ್ದು, ಹುಡುಕುತ್ತಾ ಹೋದಾಗ ಹಗ್ಗದ ದಳೆಗಳು ತೋಟದಲ್ಲಿ ಕಂಡು ಬಂದಿದ್ದು, ದನ ಹಿಡಿದ ಪುರಾವೆಗಳು ಗೋಚರಿಸಿವೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಜತೆಗೆ ಚೇಂದAಡ ತಿಮ್ಮಯ್ಯ ಅವರಿಗೆ ಸೇರಿದ ಒಂದು ಹಸು ದಳೆಗೆ ಸಿಕ್ಕಿ ತಪ್ಪಿಸಿಕೊಂಡು ಮನೆಗೆ ಮರಳಿ ಬಂದಿದೆ. ಬಿದ್ದಂಡ ವಸಂತಿ ಅವರ ಮೂರು ಎಮ್ಮೆಗಳು, ಚೆಪುö್ಪಡೀರ ಸುಭಾಷ್ ಅವರ ೬ ಹಸುಗಳು ಎರಡು ತಿಂಗಳಿನಲ್ಲಿ ಕಾಣೆಯಾಗಿವೆ ಎಂಬ ದೂರುಗಳಿವೆ.
-ಎನ್.ಎನ್. ದಿನೇಶ್