ಮಡಿಕೇರಿ, ಏ. ೧: ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ರಾಜ್ಯದಲ್ಲಿ ವಿದ್ಯುತ್ ದರ ಬರೋಬ್ಬರಿ ೧೫ ವರ್ಷ ಬಳಿಕ ಇಳಿಕೆ ಕಂಡಿದ್ದು, ವಿವಿಧ ವಲಯಗಳ ಶುಲ್ಕದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪರಿಷ್ಕೃತಗೊಳಿಸಿದೆ. ಏಪ್ರಿಲ್ ೧ ರಿಂದ ಈ ನಿಯಮ ಜಾರಿಯಾಗಿದ್ದು, ಮುಂದಿನ ತಿಂಗಳ ಬಿಲ್‌ಗೆ ದರ ಅನ್ವಯವಾಗಲಿದೆ.
೨೦೨೪-೨೫ನೇ ಸಾಲಿನ ದರವನ್ನು ಆಯೋಗ ಪರಿಷ್ಕೃತ ಮಾಡಿದೆ. ವಾಣಿಜ್ಯ, ಕೈಗಾರಿಕಾ ಮತ್ತು ಗೃಹ ಬಳಕೆ ಗ್ರಾಹಕರ ವಿದ್ಯುತ್ ದರದಲ್ಲಿ ಇಳಿಕೆ ಮಾಡಿದ್ದು, ಪ್ರತಿ ತಿಂಗಳು ೧೦೦ ಯೂನಿಟ್‌ಗಳಿಗಿಂತ ಹೆಚ್ಚಿನ ಬಳಕೆಗೆ ಮಾತ್ರ ಈ ದರ ಅನ್ವಯಿಸಲಿದೆ. ರಾಜ್ಯದಲ್ಲಿ ಈಗಾಗಲೇ ಗೃಹಜ್ಯೋತಿ ಯೋಜನೆ ಚಾಲ್ತಿಯಲ್ಲಿದ್ದು, ಅದರ ಫಲಾನುಭವಿಗಳಲ್ಲದವರಿಗೆ ಹಾಗೂ ಕೈಗಾರಿಕೆ, ವಾಣಿಜ್ಯ ವಲಯಕ್ಕೆ ಪರಿಷ್ಕೃತ ದರ ಸಹಕಾರಿಯಾಗಲಿದೆ.
(ಮೊದಲ ಪುಟದಿಂದ)
ಎಷ್ಟು ಇಳಿಕೆ.?
ಗೃಹ ಬಳಕೆ ವಿದ್ಯುತ್ ದೀಪ ೧೦೦ ಯೂನಿಟ್‌ಗಳಿಗಿಂತ ಹೆಚ್ಚಿನ ಬಳಕೆಗೆ ಪ್ರತಿ ಯೂನಿಟ್‌ಗೆ ರೂ. ೧.೧೦ ಪೈಸೆ ಇಳಿಕೆ ಮಾಡಲಾಗಿದೆ. ಹೈಟೆನ್ಷನ್ ಸಂಪರ್ಕದ (ಹೆಚ್.ಟಿ) ವಾಣಿಜ್ಯ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ ರೂ. ೧.೨೫ ಪೈಸೆ, ಡಿಮಾಂಡ್ ಶುಲ್ಕ ಪ್ರತಿ ಕೆವಿಎಗೆ ರೂ. ೧೦, ಕೈಗಾರಿಕೆ ಕ್ಷೇತ್ರದ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ ೫೦ ಪೈಸೆ, ಡಿಮಾಂಡ್ ಶುಲ್ಕ ಪ್ರತಿ ಕೆವಿಎಗೆ ರೂ. ೧೦ ಇಳಿಕೆ ಮಾಡಲಾಗಿದೆ.
ಹೈಟೆನ್ಷನ್ (ಹೆಚ್.ಟಿ.) ವಿಭಾಗದ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ ೪೦ ಪೈಸೆ, ಡಿಮಾಂಡ್ ಶುಲ್ಕ ಪ್ರತಿ ಕೆವಿಎಗೆ ರೂ. ೧೦, ಖಾಸಗಿ ಏತ ನೀರಾವರಿ ಶುಲ್ಕ ಪ್ರತಿ ಯೂನಿಟ್‌ಗೆ ರೂ. ೨, ಅಪಾರ್ಟ್ಮೆಂಟ್‌ಗಳು ಬಳಕೆ ಶುಲ್ಕ ಪ್ರತಿ ಕೆವಿಎಗೆ ಡಿಮಾಂಡ್ ಶುಲ್ಕವನ್ನು ರೂ ೧೦ರಷ್ಟು ಇಳಿಕೆ ಮಾಡಲಾಗಿದೆ. ಲೋಟೆನ್ಷನ್ (ಎಲ್.ಟಿ.) ವಿಭಾಗದ ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ ೫೦, ಎಲ್.ಟಿ. ಕೈಗಾರಿಕಾ ಸ್ಥಾವರಗಳು ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ ರೂ. ೧, ಎಲ್.ಟಿ. ವಾಣಿಜ್ಯ ಸ್ಥಾವರಗಳ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‌ಗೆ ರೂ. ೫೦ ಪೈಸೆ ಇಳಿಸಲಾಗಿದೆ.