ಕುಂಡ್ಯೋಳAಡ ಕಪ್ ಹಾಕಿ : ಕಡೇಮಾಡ ತಂಡಕ್ಕೆ ಭರ್ಜರಿ ಜಯನಾಪೋಕ್ಲು, ಏ. ೨: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕುಂಡ್ಯೋಳAಡ ಕಪ್ಹಾಕಿ ನಮ್ಮೆಯ ನಾಲ್ಕನೇ ದಿನದ ಪಂದ್ಯಾಟದಲ್ಲಿ ಕಡೇಮಾಡ ತಂಡ ೬-೦ ಗೋಲುಗಳ ಅಂತರದಿAದ ಭರ್ಜರಿ ಜಯಗಳಿಸಿ ಮುಂದಿನ ಸುತ್ತು ಪ್ರವೇಶಿಸಿದೆ.
ಕಡೇಮಾಡ ತಂಡ ಪೊನ್ನಿಮಾಡ ತಂಡದ ವಿರುದ್ಧ ೬-೦ ಗೋಲುಗಳ ಅಂತರದಿAದ ಜಯಭೇರಿ ಭಾರಿಸಿತು. ಕಡೇಮಾಡ ತಂಡದ ಪರ ಅನುಷ್ ಕರುಂಬಯ್ಯ ೩, ಕಾವೇರಪ್ಪ, ರಚನ್ ಚರ್ಮಣ್ಣ, ಮಂದಣ್ಣ ತಲಾ ಒಂದೊAದು ಗೋಲು ದಾಖಲಿಸಿದರು. ಬಲ್ಟಿಕಾಳಂಡ ಮತ್ತು ನೆರ್ಪಂಡ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ನೆರ್ಪಂಡ ತಂಡವು ಬಲ್ಟಿಕಾಳಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಅಪ್ಪಾರಂಡ ಮತ್ತು ಮುಂಡಚಾಡಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಂಡಚಾಡಿರ ತಂಡವು ಅಪ್ಪಾರಂಡ ತಂಡವನ್ನು ಟ್ರೆöÊಬ್ರೇಕರ್ನಲ್ಲಿ ೫-೪ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು.
ಮಾರ್ಚಂಡ ಮತ್ತು ಚೋಳಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೋಳಂಡ ತಂಡವು ಮಾರ್ಚಂಡ ತಂಡವನ್ನು ೨-೧ ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಅಯ್ಯನೆರವಂಡ ಮತ್ತು ಕೀತಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಯ್ಯನೆರವಂಡ ತಂಡವು ಕೀತಿಯಂಡ ತಂಡವನ್ನು ೨-೦ ಗೋಲುಗಳಿಂದ ಪರಾಭವಗೊಳಿಸಿತು. ಮುಂಡ್ಯೋಳAಡ ಮತ್ತು ಐಚೆಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಐಚೆಟ್ಟಿರ ತಂಡವು ಮುಂಡ್ಯೋಳAಡ ತಂಡವನ್ನು ೩-೦ ಗೋಲುಗಳಿಂದ ಪರಾಭವಗೊಳಿಸಿತು. ನಂದೇಟಿರ ಮತ್ತು ತೀತರಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತೀತರಮಾಡ ತಂಡವು ನಂದೇಟಿರ ತಂಡವನ್ನು ೨-೧ ಗೋಲುಗಳಿಂದ ಸೋಲಿಸಿತು.
ಪೋರಂಗಡ ಮತ್ತು ಆದೆಂಗಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯ ಆದೇಂಗಡ ತಂಡದ ಗೈರುಹಾಜರಿನ ಹಿನ್ನಲೆಯಲ್ಲಿ ಪೋರಂಗಡ ತಂಡ ಮುಂದಿನ ಸುತ್ತು ಪ್ರವೇಶಿಸಿತು. ಅಪ್ಪುಮಣಿಯಂಡ ಮತ್ತು ಆಟ್ರಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಆಟ್ರಂಗಡ ತಂಡವು ಅಪ್ಪುಮಣಿಯಂಡ ತಂಡವನ್ನು ೨-೧ ಗೋಲಿನಿಂದ ಸೋಲಿಸಿತು. ಬಿದ್ದಾಟಂಡ ಮತ್ತು ಅಲ್ಲುಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಿದ್ದಾಟಂಡ ತಂಡವು ಅಲ್ಲುಮಾಡ ತಂಡವನ್ನು ೧-೦ ಗೋಲಿನಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.
ಮಲ್ಚಿರ ಮತ್ತು ತಂಡ ಪೇರಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಲ್ಚಿರ ತಂಡವು ಪೇರಿಯಂಡ ತಂಡದ ವಿರುದ್ಧ ೫-೦ ಗೋಲುಗಳ ಅಂತರದಿAದ ಜಯಗಳಿಸಿತು. ಮಲ್ಚಿರ ತಂಡದ ಪರ ಹರ್ಷ ೨, ಶ್ರವಣ್, ಶಾನ್, ಪೊನ್ನಣ್ಣ ತಲಾ ಒಂದೊAದು ಗೋಲು ದಾಖಲಿಸಿದರು. ಚೀಕಂಡ ಮತ್ತು ಬಟ್ಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಟ್ಯಂಡ ತಂಡವು ಚೀಕಂಡ ತಂಡವನ್ನು ೨-೧ ಗೋಲಿನಿಂದ ಪರಾಭವಗೊಳಿಸಿತು. ಚಪ್ಪಂಡ ಮತ್ತು ಪಾಲಂದಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಾಲಂದಿರ ತಂಡವು ಚಪ್ಪಂಡ ತಂಡವನ್ನು ೫-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕೈಪಟ್ಟಿರ ಮತ್ತು ಚೆಟ್ಟಿಯಾರಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಟ್ಟಿಯಾರಂಡ ತಂಡವು ಕೈಪಟ್ಟಿರ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿತು.
ತಾತಂಡ ಮತ್ತು ನಾಪನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತಾತಂಡ ತಂಡವು ನಾಪನೆರವಂಡ ತಂಡವನ್ನು ೩-೧ ಗೋಲಿನ ಅಂತರದಿAದ ಸೋಲಿಸಿತು. ಮೈಂದಪAಡ ಮತ್ತು ಅಯ್ಯಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೈಂದಪAಡ ತಂಡವು ಅಯ್ಯಮಂಡ ತಂಡವನ್ನು ಪೆನಾಲ್ಟಿ ಸ್ಟೊçÃಕ್ನಲ್ಲಿ ೪-೩ ಗೋಲಿನಿಂದ ಮಣಿಸಿತು. ವiಂಡೇಡ ಮತ್ತು ಪೊನ್ನಚೆಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಪೊನ್ನಚ್ಚೆಟ್ಟಿರ ತಂಡವು ಮಂಡೇಡ ತಂಡವನ್ನು ೧-೦ ಗೋಲಿನಿಂದ ಪರಾಭವಗೊಳಿಸಿತು. ಕಾಂಗೀರ ಮತ್ತು ಕುಂಡ್ರAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಂಗೀರ ತಂಡವು ಕುಂಡ್ರAಡ ತಂಡವನ್ನು ೧-೦ ಗೋಲಿನಿಂದ ಸೋಲಿಸಿತು. ಕಾಚಪನೆರ ಮತ್ತು ಅಯ್ಯಲಪಂಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯವು ಅಯ್ಯಳಪಂಡ ತಂಡದ ಗೈರುಹಾಜರಿನ ಹಿನ್ನೆಲೆಯಲ್ಲಿ ಕಾಚಪನೆರ ತಂಡ ಮುಂದಿನ ಸುತ್ತು ಪ್ರವೇಶಿಸಿತು.
- ಪಿ.ವಿ.ಪ್ರಭಾಕರ್