ಗೋಣಿಕೊಪ್ಪಲು, ಏ.೨ : ಪ್ರತಿಷ್ಠಿತ ಕೊಡಗಿನ ಬೋಂಡಿAಗ್ ಬ್ಲೂಮ್ಸ್ ನರ್ಚರಿಂಗ್ ನೇಚರ್ ವತಿಯಿಂದ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಗೋಣಿಕೊಪ್ಪಲುವಿನಲ್ಲಿ ಜರುಗಿತು. ಸಂಸ್ಥೆ ಮುಖ್ಯಸ್ಥೆ ಲಿಜೆಟ್ ಬಾಚಮಾಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಮಹಿಳೆಯು ತನ್ನೊಳಗೆ ಅಡಗಿರುವ ಪ್ರತಿಭೆಯ ಕಿಚ್ಚನ್ನು ಹೊತ್ತಿ ಉರಿಸುವಂತಾಗಬೇಕು. ಭತ್ತ ನಾಟಿ ಕೆಲಸದಲ್ಲಿ ನಮ್ಮ ನಾರಿಯರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಾಕೃತಿಕ ನೀರಿನ ಮಟ್ಟವನ್ನು ಹೆಚ್ಚಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಗ್ರೀಷ್ಮಾ ಬೋಜಮ್ಮ, ತಡಿಯಂಗಡ ಗಾನ ಸೋಮಣ್ಣ ಹಾಗೂ ಕೊಂಗAಡ ನಳಿನ ಅಪ್ಪಯ್ಯನವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಗ್ರೀಷ್ಮ ಬೋಜಮ್ಮ, ಮಹಿಳೆಯರು ತಮಗೆ ಆಸಕ್ತಿಯುಳ್ಳ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು. ಸಾಧಕಿ ತಡಿಯಂಗಡ ಗಾನ ಸೋಮಣ್ಣ ಮಾತನಾಡಿ, ಮಹಿಳೆಯರ ಏಳಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂಬ ಸಂದೇಶ ನೀಡಿದರು.
ನಳಿನ ಅಪ್ಪಯ್ಯ ಅವರು ಸನ್ಮಾನದ ಬಗ್ಗೆ ಹರ್ಷ ವ್ಯಕ್ತಪಡಿಸಿ ಪ್ರಕೃತಿ ಪ್ರೇಮಿ ಸಂಘಟನೆಯ ಸದಸ್ಯರಾಗಿರುವುದು ಹೆಮ್ಮೆ, ಸಂತೋಷ ತಂದಿದೆ ಎಂದರು. ಕಾರ್ಯಕ್ರಮ ಅಂಗವಾಗಿ ನೂರಾರು ಬಗೆಯ ವಿವಿಧ ರೀತಿಯ ಗಿಡಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಅಪ್ಪುಮಣಿಯಂಡ ಶೈಲಾ ಭೀಮಯ್ಯ ಪ್ರಾರ್ಥಿಸಿ, ಆದೆಂಗಡ ತನುಜಾ ಅಚ್ಚ್ಚಯ್ಯ ನಿರೂಪಿಸಿ, ತಡಿಯಂಗಡ ಸೌಮ್ಯ ಕರುಂಬಯ್ಯ ವಂದಿಸಿದರು.