ಸೋಮವಾರಪೇಟೆ, ಏ. ೨ : ಇಲ್ಲಿನ ವೀರಶೈವ ಸಮಾಜ ಹಾಗೂ ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ಪಟ್ಟಣದ ಮಹದೇಶ್ವರ ಬ್ಲಾಕ್ನಲ್ಲಿರುವ ಮಳೆ ಮಹದೇಶ್ವರ ಬನದಲ್ಲಿ ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು.
ಅನಾದಿ ಕಾಲದಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದಿರುವ ಪದ್ಧತಿಯಂತೆ ವೀರಶೈವ ಸಮಾಜ ಬಾಂಧವರು ಮಹದೇಶ್ವರ ಬನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ, ವಿಶೇಷ ಪೂಜೆ ಸಲ್ಲಿಸಿದರು. ಪೂಜಾ ಕೈಂಕರ್ಯಗಳು ವಿರಕ್ತ ಮಠಾ ಧೀಶರಾದ ನಿಶ್ಚಲದೇಶೀಕೇಂದ್ರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು. ಅರ್ಚಕರಾದ ಮೋಹನ್ ಮೂರ್ತಿ ಶಾಸ್ತಿç, ವಿರೂಪಾಕ್ಷ ಅವರುಗಳು ಪೂಜೆ ನೆರವೇರಿಸಿದರು. ವೀರಶೈವ ಸಮಾಜದ ಯಜಮಾನ ಬಿ.ಪಿ. ಶಿವಕುಮಾರ್, ಶೆಟ್ರು ಬಿ.ಆರ್. ಮೃತ್ಯುಂಜಯ, ಮುಖಂಡರಾದ ಕೆ.ಎನ್. ಶಿವಕುಮಾರ್, ಕೆ.ಎನ್. ತೇಜಸ್ವಿ, ಎ.ಎಸ್. ಮಲ್ಲೇಶ್, ಹೆಚ್.ಎಸ್. ಯುವರಾಜ್, ಯೋಗೇಶ್ ಸೇರಿದಂತೆ ಸಮಾಜ ಬಾಂಧವರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.