ಪೊನ್ನಂಪೇಟೆ, ಏ. ೨: ದಕ್ಷಿಣ ಕೊಡಗಿನ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಗೋಣಿಕೊಪ್ಪಲುವಿನ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ೩ನೇ ವರ್ಷದ ಮೀನ್ಯಾರ್ ನಮ್ಮೆ ಕಾರ್ಯಕ್ರಮ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಸಂಭ್ರಮದಿAದ ಜರುಗಿತು.
ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಮಹಿಳೆ ಯರು ಇದರಲ್ಲಿ ಸಂಭ್ರಮೋಲ್ಲಾಸ ದೊಂದಿಗೆ ದಿನವಿಡೀ ಪಾಲ್ಗೊಂಡಿದ್ದರು. ಆಹಾರ ಮೇಳ ಹಾಗೂ ವಾಣಿಜ್ಯ ಮಳಿಗೆ ಗಳೊಂದಿಗೆ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಮಹಿಳೆಯರ ಕಾರ್ಯಕ್ರಮವಾದರೂ ಮಹಿಳೆಯರ ತಂಡದೊAದಿಗೆ ಪುರುಷರ ತಂಡ, ಮಕ್ಕಳ ತಂಡದಿAದಲೂ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸ ಲಾಗಿತ್ತು.
ಮಹಿಳೆಯರ ಪಾತ್ರ ಮುಖ್ಯ
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಒಂದು ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಮಹಿಳೆಯ ಪಾತ್ರ ಬಹುಮುಖ್ಯ ವಾಗಿದ್ದು, ಮಕ್ಕಳಿಗೆ ಕೊಡವ ಭಾಷೆಯನ್ನು ಮನೆಯಲ್ಲಿ ಕಲಿಸುವ ಮೂಲಕ ಮಹಿಳೆಯರು ಭಾಷಾ ಬೆಳವಣಿಗೆಗೆ ಒತ್ತು ನೀಡಬೇಕು ಎಂದರು.
ಕೊಡವ ಪದ್ಧತಿ, ಪರಂಪರೆ, ಆಚಾರ, ವಿಚಾರಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಮೂಲಕ ನಮ್ಮ ಸಂಸ್ಕೃತಿಯ ಪೋಷಣೆಗೆ ಮುಂದಾಗಬೇಕು.
ಮಕ್ಕಳಿಗೆ ಇಂತಹ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಒತ್ತಡ ಹೇರುವ ಬದಲು, ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪ್ರೋತ್ಸಾಹ ನೀಡಬೇಕು. ಮಹಿಳೆಯರು ಸರ್ಕಾರದ ಸಾಲ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಪ್ರಗತಿ ಸಾಧಿಸುವ ಮೂಲಕ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಸಕ ಎ.ಎಸ್. ಪೊನ್ನಣ್ಣ ಅವರ ಪತ್ನಿ ಅಜ್ಜಿಕುಟ್ಟಿರ ಕಾಂಚನ್ ಪೊನ್ನಣ್ಣ ಮಾತನಾಡಿ, ಗೋಣಿಕೊಪ್ಪಲು ಕಾವೇರಿ ಪೊಮ್ಮಕ್ಕಡ ಕೂಟದ ಕಾರ್ಯವೈಖರಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ ಮಾತನಾಡಿ, ಮಕ್ಕಳು ಓದುವ ವಯಸ್ಸಿನಲ್ಲಿಯೇ ದುಶ್ಚಟಗಳನ್ನು ಮೈಗೂಡಿಸಿಕೊಂಡು ತಮ್ಮ ಬದುಕನ್ನೇ ಕಳೆದುಕೊಳ್ಳುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ವಾಹನಗಳನ್ನು ಓಡಿಸುವ ಕ್ರೇಜ್ ಬೆಳೆಸಿಕೊಂಡಿದ್ದು, ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಚಿಕ್ಕ ವಯಸಿ ್ಸನಿಂದಲೇ ಮಕ್ಕಳನ್ನು ಶಿಸ್ತಿನಿಂದ ಬೆಳೆಸುವ ಮೂಲಕ ಒಳ್ಳೆಯದು ಮತ್ತು ಕೆಟ್ಟದರ ಬಗ್ಗೆ ಪೋಷಕರು ತಿಳುವಳಿಕೆ ನೀಡಬೇಕು ಎಂದರು.
ಕಾAಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಮಾರಾಟ ಮಳಿಗೆ ಗಳನ್ನು ಉದ್ಘಾಟಿಸಿ ಶುಭಕೋರಿದರು.
ಸಾಂಸ್ಕೃತಿಕ ವೈಭವ
ಕೊಟ್ಟಂಗಡ ಕುಟುಂಬದ ಮಹಿಳೆಯರಿಂದ ಉಮ್ಮತ್ತಾಟ್ ಸೇರಿದಂತೆ ನೃತ್ಯ ಪ್ರದರ್ಶನ, ತಲಕಾವೇರಿಕ್ ತಿಂಗಕೋರ್ ಮೊಟ್ಟ್ ತಂಡದಿAದ ಬೊಳಕಾಟ್, ಚೋವಂಡ ಜಮುನ, ಚೇನಂಡ ಸುಮಿ ಸುಬ್ಬಯ್ಯ, ಕಬ್ಬಚ್ಚೀರ ರಶ್ಮಿ ಅವರಿಂದ ಹಾಡುಗಾರಿಕೆ, ಪೊರಾಡ್ ಗ್ರಾಮದ ಮಹಿಳೆಯರಿಂದ ನೃತ್ಯ, ಬಲ್ಯಮೀದೇರಿರ ರೋಷನ್ ತಿಮ್ಮಯ್ಯ ತಂಡದಿAದ ಬಾಳೋಪಾಟ್, ತಾಲಿಪಾಟ್, ಪಯ್ಯಾಡ್ಮಂದ್ ತಂಡದಿAದ ನೃತ್ಯ ವೈಭವ, ನೆಲ್ಲಮಕ್ಕಡ ಪ್ರತಿಷ್ಠ ಮಾದಯ್ಯ ಅವರಿಂದ ರ್ಯಾಂಪ್ವಾಕ್, ಇತರ ಹಲವರಿಂದ ಜನಪದ ಹಾಡಿಗೆ ನೃತ್ಯ, ಮಲ್ಲಪನೆರ ವಿನು ತಂಡದಿAದ ಪುರಾತನ ಕಾಲದಿಂದ ಆಚರಣೆಯಾಗುತ್ತಿದ್ದ ಕೊಡವ ಆಚಾರ, ವಿಚಾರಗಳನ್ನು ಪ್ರತಿಬಿಂಬಿಸುವ ಪ್ರಯತ್ನದ ರ್ಯಾಂಪ್ವಾಕ್ ನಂತಹ ಕಾರ್ಯ ಕ್ರಮಗಳು ಜನಮನ ರಂಜಿಸಿದವು. ವಾಲಗತಾಟ್ ಸ್ಪರ್ಧೆ ಕೂಡ ಸಂಭ್ರಮದಿAದ ನಡೆಯಿತು. ಇದರಲ್ಲಿ ಕೊಣಿಯಂಡ ಕಾವ್ಯ ಸಂಜು ಪ್ರಥಮ, ಬೊಳ್ಳಜೀರ ಸುಶೀಲ ದ್ವಿತೀಯ ಹಾಗೂ ಅಣ್ಣಳಮಾಡ ಮಾನಸ ತೃತೀಯ ಸ್ಥಾನಗಳಿಸಿದರು.
ಕಾರ್ಯಕ್ರಮದಲ್ಲಿ ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಮುಕ್ಕಾಟಿರ ಬೀನ, ನಿರ್ದೇಶಕರುಗಳಾದ ಚೊಟ್ಟೆಕಾಳಪ್ಪಂಡ ಆಶಾ ಪ್ರಕಾಶ್, ಆಪಟ್ಟಿರ ಸೌಮ್ಯ, ಮಲ್ಲೇಂಗಡ ಮಮತ ಪೂಣಚ್ಚ, ಸಣ್ಣುವಂಡ ದಿವ್ಯಾ ಅಯ್ಯಪ್ಪ, ಪರದಂಡ ಸುಮಿ ಇದ್ದರು. ಚೋವಂಡ ಜಮುನ ಪ್ರಾರ್ಥಿಸಿ, ಅಣ್ಣಾಳಮಾಡ ಮಾನಸ ತಿಮ್ಮಯ್ಯ ಮತ್ತು ನೆಲ್ಲಮಕ್ಕಡ ಪ್ರತಿಷ್ಠ ಮಾದಯ್ಯ ನಿರೂಪಿಸಿ, ಮುಕ್ಕಾಟಿರ ಬೀನ ವಂದಿಸಿದರು.