ಸೋಮವಾರಪೇಟೆ,ಏ.೨: ರೈತ ಸಂಘದ ಮುಖಂಡ, ಗಣಗೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರ ಮೇಲೆ ಗುಂಡು ಹಾರಿಸಿರುವ ಘಟನೆ ಮೊನ್ನೆ ರಾತ್ರಿ ನಡೆದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಸರು ಕೂಗಿ ಗುಂಡು ಹಾರಿಸಿರುವ ಹಿನ್ನೆಲೆ ಇದೊಂದು ಪೂರ್ವನಿಯೋಜಿತ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಂಡುಬAದಿದ್ದು, ಕೊಲೆಯತ್ನ ಪ್ರಕರಣ ದಾಖಲಿಸಿ ಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಗಣಗೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ರೈತ ಸಂಘದ ಮುಖಂಡರಾಗಿರುವ ಕೃಷಿಕ ಚಂದ್ರಶೇಖರ್ ಎಂಬವರ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಆದರೆ ಗುಂಡು ಚಂದ್ರಶೇಖರ್ ಅವರ ಬೆರಳಿಗೆ ತಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೊನ್ನೆ ರಾತ್ರಿ ೮.೪೫ರ ಸುಮಾರಿಗೆ ಗಣಗೂರು ಗ್ರಾಮದಲ್ಲಿರುವ ತಮ್ಮ ಮನೆಯಿಂದ ಅನತಿ ದೂರದಲ್ಲಿ ಟಾಟಾ ಏಸ್ ಮಾಹನವನ್ನು ನಿಲ್ಲಿಸಿಕೊಂಡು ಮೊಬೈಲ್ ನೋಡುತ್ತಿದ್ದ ಚಂದ್ರಶೇಖರ್ ಅವರನ್ನು ಹಿಂಬದಿಯಿAದ ‘ಅಣ್ಣಾ’ ಎಂದು ಯಾರೋ ಕೂಗಿದ್ದಾರೆ. ಈ ಸಂದರ್ಭ ಕೆಳಗಿಳಿಯದೇ ಇದ್ದಾಗ ‘ಚಂದ್ರಣ್ಣ’ ಎಂದು ಎರಡು ಬಾರಿ ಕೂಗಿದ್ದಾರೆ. ತಕ್ಷಣ ಚಂದ್ರಶೇಖರ್ ಅವರು ವಾಹನದ ಡೋರ್ ತೆಗೆದು ಕೆಳಗೆ ಇಳಿಯುತ್ತಿದ್ದಂತೆ ಹಿಂಬದಿಯಿAದ ಸುಮಾರು ೬೦ ಮೀಟರ್ ಅಂತರ ದಿಂದ ಗುಂಡು ಹಾರಿಸಲಾಗಿದೆ.
ಘಟನೆಯಿಂದ ಆಘಾತಗೊಂಡ ಚಂದ್ರಶೇಖರ್ ಅವರು, ತಕ್ಷಣ ವಾಹನದ ಡೋರ್ ಹಾಕಿಕೊಂಡು ಮನೆಗೆ ಆಗಮಿಸಿ, ನಂತರ ಸೋಮವಾರಪೇಟೆ ಆಸ್ಪತ್ರೆಗೆ ದಾಖಲಾಗಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ತೆರಳಿದ್ದು, ಬಲಗೈನ ಬೆರಳಿಗೆ ನುಗ್ಗಿದ್ದ ೩ ಚಿಲ್ಲುಗಳನ್ನು ಶಸ್ತç ಚಿಕಿತ್ಸೆಯ ಮೂಲಕ ಹೊರತೆಗೆಯಲಾಗಿದೆ. ಶಸ್ತç ಚಿಕಿತ್ಸೆಯ ನಂತರ ಇಂದು ಮನೆಗೆ ವಾಪಸ್ ಆಗಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯ ಬಗ್ಗೆ ಚಂದ್ರಶೇಖರ್ ಅವರು ನೀಡಿದ ದೂರಿನ ಮೇರೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆಯತ್ನ ಸೇರಿದಂತೆ ಶಶ್ತಾçಸ್ತç ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸ್ ಇನ್ಸ್ಪೆಕ್ಟರ್ ಕೆ.ಎಂ. ವಸಂತ್ ಅವರು ತನಿಖೆ ಮುಂದುವರೆಸಿದ್ದಾರೆ.
ಮನೆಯ ಸಮೀಪ, ‘ಅಣ್ಣಾ..ಚಂದ್ರಣ್ಣಾ’ ಎಂದು ಕರೆದು ಹಿಂಬದಿಯಿAದ ಗುಂಡು ಹಾರಿಸಿರುವ ಹಿನ್ನೆಲೆ ಪರಿಚಿತರ ಕೃತ್ಯವೇ ಇರಬಹುದು ಎಂದು ಸಂಶಯಿಸಲಾಗಿದೆ. ಗಾಯಾಳು ಚಂದ್ರಶೇಖರ್ ಅವರಿಂದ ಹೆಚ್ಚಿನ ಮಾಹಿತಿ ಪಡೆದು ತನಿಖೆ ಚುರುಕುಗೊಳಿಸಿದ ನಂತರವಷ್ಟೇ ಘಟನೆಯ ಹಿಂದಿನ ಸತ್ಯ ಬಯಲಾಗಬೇಕಿದೆ. ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗ ದರ್ಶನದಂತೆ ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.