ಕೊಡವ ಟ್ರೆöÊಬ್ಸ್ ಮುನ್ನಡೆ

ಮಡಿಕೇರಿ, ಮೇ ೬ : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಸೋಮವಾರದ ಮೊದಲ ಪಂದ್ಯದಲ್ಲಿ ಎಂಟಿಬಿ ರಾಯಲ್ಸ್ ತಂಡದ ವಿರುದ್ಧ ಟೀಮ್ ಲಿವರೇಜ್ ೨ ವಿಕೆಟ್‌ಗಳ ಜಯ ಸಾಧಿಸಿದೆ.

ಟಾಸ್ ಗೆದ್ದ ಟೀಮ್ ಲಿವರೇಜ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎಂಟಿಬಿ ರಾಯಲ್ಸ್ ತಂಡ ೨೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೪೨ ರನ್‌ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಟೀಮ್ ಲಿವರೇಜ್ ತಂಡ ೧೯.೨ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೪೫ ರನ್‌ಗಳಿಸಿ ಗೆಲುವು ಸಾಧಿಸಿತು.

ಟೀಮ್ ಲಿವರೇಜ್ ತಂಡದ ಸಂಜು ಬೋಪಯ್ಯ ಅವರು ೧೪ ರನ್‌ಗಳನ್ನು ಗಳಿಸಿ, ೨೯ ರನ್‌ಗಳಿಗೆ ೩ ವಿಕೆಟ್‌ಗಳನ್ನು ಕಬಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಎರಡನೇ ಪಂದ್ಯದಲ್ಲಿ ಅಂಜಿಗೇರಿ ನಾಡ್ ತಂಡದ ವಿರುದ್ಧ ಕೊಡವ ಟ್ರೆöÊಬ್ ತಂಡ ೮೧ ರನ್‌ಗಳ ಜಯ ಸಾಧಿಸಿದೆ.

ಟಾಸ್ ಗೆದ್ದ ಅಂಜಿಗೇರಿ ನಾಡ್ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಕೊಡವ ಟ್ರೆöÊಬ್ ತಂಡ ೨೦ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೧೯೬ ರನ್‌ಗಳನ್ನು ಗಳಿಸಿತು. ಅಂಜಿಗೇರಿ ನಾಡ್ ತಂಡ ೨೦ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ಕೇವಲ ೧೧೫ ರನ್‌ಗಳನ್ನು ಸೇರಿಸಿ ಸೋಲು ಅನುಭವಿಸಿತು.

ಕೊಡವ ಟ್ರೆöÊಬ್ ತಂಡದ ಆಯುಷ್ ಪೊನ್ನಪ್ಪ ೫೪ ರನ್‌ಗಳನ್ನು ದಾಖಲಿಸಿ, ೧ ವಿಕೆಟ್‌ನ್ನು ಪತನಗೊಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಡೆದುಕೊಂಡರು.