ಮಡಿಕೇರಿ, ಮೇ ೬: ಗಾಂಧಿ ಯುವಕ ಸಂಘದಿAದ ಕೊಡಲಾಗುತ್ತಿರುವ "ಮಾದರಿ ಯುವ ನಾಯಕ" ಪ್ರಶಸ್ತಿಗೆ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣಿರ ಅವರು ಆಯ್ಕೆಯಾಗಿದ್ದಾರೆ ಎಂದು ಗಾಂಧಿ ಯುವಕ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ ಅವರು ತಿಳಿಸಿದ್ದಾರೆ.

ಮೈಸಿ ಕತ್ತಣಿರ ಅವರ ರಾಜಕೀಯ ಕ್ಷೇತ್ರದಲ್ಲಿನ ಸೇವೆ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಮಾದರಿ ಯುವ ನಾಯಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.