ಕರಿಕೆ, ಮೇ ೬: ಇಲ್ಲಿಗೆ ಸಮೀಪದ ಚೆತ್ತುಕಾಯ ಅರಣ್ಯ ನಿರೀಕ್ಷಣಾ ಮಂದಿರ ಆವರಣದಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಅರಿವು ಮೂಡಿಸಲಾಯಿತು.

ಬೆಂಗಳೂರಿನ ಸೆಂಟ್ರಲ್ ಫಾರ್ ವೈಲ್ಡ್ಲೈಪ್ ಸಂಸ್ಥೆ ಸಹಯೋಗದೊಂದಿಗೆ ಕರಿಕೆ ಗ್ರಾಮದಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಅರಿವು ಮೂಡಿಸಲಾಯಿತು. ಈ ಸಂದರ್ಭ ಸಂಸ್ಥೆಯ ಮಹೇಶ್ ಹಾಗೂ ತಂಡದವರು, ಭಾಗಮಂಡಲ ವಲಯ ಅರಣ್ಯ ಅಧಿಕಾರಿ ರವೀಂದ್ರ, ಕರಿಕೆ ಉಪ ವಲಯ ಅರಣ್ಯ ಅಧಿಕಾರಿ ಸಚಿನ್ ಬಿರಾದಾರ, ಇಲಾಖೆ ಸಿಬ್ಬಂದಿಗಳು, ಗ್ರಾಮದ ಕರಿಂಬಳಪು, ಪೂಬಳಪು ಸೇರಿದಂತೆ ವಿವಿಧ ಹಾಡಿಗಳ ಗ್ರಾಮಸ್ಥರು ಹಾಜರಿದ್ದರು.