ಮಡಿಕೇರಿ, ಮೇ ೬: ಮೇಕೇರಿಯ ಕಿಜ಼ರ್ ಜುಮಾ ಮಸೀದಿಯ ವತಿಯಿಂದ ತಾ. ೩ ರಿಂದ ಆರಂಭಗೊAಡ ಮಖಾಂ ಉರೂಸ್ ಐದು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆದು ಇಂದು ಕೊನೆಗೊಂಡಿತು.

ತಾ. ೩ ರಂದು ನಾಬ್ ಸಯ್ಯದ್ ಜಂಬ್ರುದ್ದೀನ್ ನೇತೃತ್ವದಲ್ಲಿ ಜುಮಾ ನಮಾಜಿನ ನಂತರ ಧ್ವಜಾರೋಹಣ, ಮಖಾಂ ಝಿಯಾರತ್, ಮೇಕೇರಿ ಉಸ್ತಾದ್ ಅಬ್ದುಲ್ ಸಲಾಂ ಹಳ್‌ರವಿ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಿತು.

ತಾ. ೪ ರಂದು ಕಾಸರಗೋಡಿನ ಮುಹಮ್ಮದ್ ಅಶ್ರಫ್ ಜೌಹರಿ ಮವ್ವಾಲ್ ಅವರಿಂದ ಧಾರ್ಮಿಕ ಉಪನ್ಯಾಸ, ತಾ. ೫ ರಂದು ಮಗ್ರಿಬ್ ನಮಾಜಿನ ನಂತರ ಮಖಾಂ ಅಲಂಕಾರ ನಡೆದು ಕೇರಳದ ಕಲ್ಲಕಟ್ಟೆಯ ಸಯ್ಯಿದ್ ಶರಫುದ್ದೀನ್ ತಂಙಳ್ ಅವರಿಂದ ದಿಕ್ರ್ ದುಳಿ ಮಜ್ಲಿಸ್ ಹಾಗೂ ಉದ್ಭೋಧನೆ ಕೈಗೊಳ್ಳಲಾಯಿತು.

ತಾ. ೬ ರಂದು ಜೊಹರ್ ನಮಾಜಿನ ನಂತರ ಮೌಲೂದ್ ಪಾರಾಯಣ, ಮಧ್ಯಾಹ್ನ ಸಂದಲ್ ಮೆರವಣಿಗೆ ಹಾಗೂ ಸಂಜೆ ಅನ್ನಸಂತರ್ಪಣೆ ನಡೆಯುವ ಮೂಲಕ ಉರೂಸ್‌ಗೆ ತೆರೆ ಎಳೆಯಲಾಯಿತು.