ಮುಳ್ಳೂರು, ಮೇ ೬: ಶನಿವಾರ ಸಂತೆಯ ಲಲಿತ ನಾಟ್ಯಾಲಯ ನೃತ್ಯ ಶಾಲೆಯ ವಾರ್ಷಿಕೋತ್ಸವ -ನೂಪು ರಾರ್ಚನೆ ದಿನದ ಅಂಗವಾಗಿ ಪಟ್ಟ ಣದ ನಂದೀಶ್ವರ ಕಲ್ಯಾಣ ಮಂಟಪ ದಲ್ಲಿ ವಿದ್ಯಾರ್ಥಿಗಳಿಂದ ‘ಗೆಜ್ಜೆಪೂಜೆ’ ಭರತ ನಾಟ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಗೆಜ್ಜೆಪೂಜೆ ಭರತ ನಾಟ್ಯ ಕಾರ್ಯಕ್ರಮವನ್ನು ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಫಾ. ಸೆಬಾಸ್ಟಿನ್ ಮೈಕಲ್, ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಶಿಕ್ಷಕ ಕೆ.ಪಿ. ಜಯಕುಮಾರ್, ಲಲಿತ ನಾಟ್ಯಾಲಯ ನೃತ್ಯ ಶಾಲೆಯ ಗುರು ಬಿ.ಆರ್. ಸುನಿತ ಶೆಟ್ಟಿ ಮತ್ತು ನೃತ್ಯ ಶಾಲೆಯ ವಿದ್ಯಾರ್ಥಿನಿಯರು ಉದ್ಘಾಟಿಸಿದರು. ಕಾರ್ಯಕ್ರಮದ ಕುರಿತು ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿ, ಪ್ರತಿಯೊಂದು ಕಲೆಗೆ ತನ್ನದೆಯಾದ ಮಹತ್ವ ಇದ್ದು, ಕಲೆಯ ಅನೇಕ ಪ್ರಕಾರಗಳಲ್ಲಿ ಭರತನಾಟ್ಯ ಒಂದಾಗಿದೆ. ಇದು ನಮ್ಮ ದೇಶದ ಪುರಾತನ ಶಾಸ್ತಿçÃಯ ನೃತ್ಯವಾಗಿದೆ ಎಂದರು. ಕಾರ್ಯಕ್ರಮದ ಕುರಿತು ಮತ್ತು ನೃತ್ಯ ಶಾಲೆ ನಡೆದು ಬಂದ ಹಾದಿಯ ಕುರಿತಾಗಿ ಲಲಿತ ನಾಟ್ಯಾಲಯ ಸಂಸ್ಥೆಯ ನೃತ್ಯ ಗುರು ಸುನಿತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಸಂತ್, ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಶಿಕ್ಷಕಿಯರಾದ ಶ್ವೇತ, ಆಶಾ, ಯಶೋಧ, ಬಿ.ಪಿ. ರಾಜು ಮುಂತಾದವರಿದ್ದರು.

ಸುನಿತ ಶೆಟ್ಟಿ, ನೃತ್ಯಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.