ಕೋವರ್ ಕೊಲ್ಲಿ ಇಂದ್ರೇಶ್

ಬೆAಗಳೂರು, ಮೇ ೫: ಕಳೆದ ಕೆಲ ತಿಂಗಳುಗಳಿAದ ಏರುಮುಖ ವಾಗಿದ್ದ ಕಾಫಿ ದರವು ಕಳೆದ ಐದು ದಿನಗಳಿಂದ ಇಳಿಮುಖವಾಗಿರುವುದು ಕಾಫಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

ಕಳೆದ ಏಪ್ರಿಲ್ ಕೊನೆ ವಾರದಲ್ಲಿ ಸರ್ವಕಾಲಿಕ ದಾಖಲೆ ಏರಿಕೆ ಆಗಿ ಬೆಳೆಗಾರರಿಗೆ ಸಂತಸ ನೀಡಿದ್ದ ರೋಬಸ್ಟಾ ಕಾಫಿ ದರ ಕಳೆದ ಏಪ್ರಿಲ್ ೨೯ ರಿಂದ ಕುಸಿತ ಕಾಣುತ್ತಿದ್ದು ಆತಂಕದ ಅಲೆ ಸೃಷ್ಟಿಸಿದೆ. ಲಂಡನ್ ಕಾಫಿ ಮಾರುಕಟ್ಟೆಯಲ್ಲಿ ರೊಬಸ್ಟಾ ಪಾರ್ಚ್ಮೆಂಟ್ ಪ್ರತೀ ಟನ್‌ಗೆ ೪೧೬೫ ಅಮೆರಿಕನ್ ಡಾಲರ್‌ಗಳಿಗೆ ವಹಿವಾಟು ಆಗುತ್ತಿದ್ದ ಕಾಫಿ ನಾಲ್ಕು ದಿನಗಳ ಸತತ ಕುಸಿತದ ನಂತರ ಶುಕ್ರವಾರ ಸಂಜೆಯ ವೇಳೆಗೆ ಪುನಃ ಕುಸಿದು ೩೫೫೦ ಡಾಲರ್‌ಗಳಿಗೆ ವಹಿವಾಟು ಮುಗಿಸಿದೆ.

ಭಾರತೀಯ ಕಾಫಿಯು ತನ್ನ ಉತ್ಕೃಷ್ಟ ಗುಣಮಟ್ಟದ ಕಾರಣ ದಿಂದಾಗಿ ಮೊದಲಿನಿಂದಲೂ ಪ್ರೀಮಿಯಂ ಬೆಲೆಗೆ ಮಾರಾಟ ಆಗುತ್ತಿದೆ. ದೇಶದಲ್ಲಿ ಉತ್ಪಾದನೆ ಯಾಗುವ ಬಹುತೇಕ ಕಾಫಿ ರಫ್ತು ಆಗುವುದರಿಂದಾಗಿ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿಯೇ ದರ ನಿಗದಿ ಆಗುತ್ತದೆ.

ಏರುಮುಖವಾಗಿದ್ದ ಕಾಫಿ ದರ ಕುಸಿತಕ್ಕೆ ನಿರ್ದಿರ್ಷ ಕಾರಣಗಳೇನೂ ಇಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಿಸಿದ್ದಾರೆ. ಅಂತರರಾಷ್ಟಿçÃಯ ವಾಗಿ ಸರಕುಗಳ ಮಾರಾಟವು ಆನ್‌ಲೈನ್ ಮತ್ತು ಕಮಾಡಿಟಿ ಫ್ಯೂಚರ್ ಮಾರುಕಟ್ಟೆಯ ಮೂಲಕವೇ ನಡೆಯುವುದರಿಂದ ಮತ್ತು ಇಂದೇ ದರ ನಿಗದಿ ಆಗಿದ್ದರೂ ಭೌತಿಕವಾಗಿ ಸರಕುಗಳನ್ನು ಸರಬರಾಜು ಮಾಡಲು ೧-೨ ತಿಂಗಳ ಸಮಯಾವಕಾಶವೂ ಇರುತ್ತದೆ. ಉದಾಹರಣೆಗೆ ಕಂಪೆನಿ ಯೊಂದು ತಾನು ಭೌತಿಕವಾಗಿ ಕಾಫಿ ಸ್ಟಾಕ್ ಅನ್ನೇ ಹೊಂದಿರದಿದ್ದರೂ ಖರೀದಿದಾರರಿಗೆ ೧೦೦೦ ಟನ್ ಕಾಫಿಯನ್ನು ಸರಬರಾಜು ಮಾಡಲು ಒಪ್ಪಂದ ಮಾಡಿಕೊಳ್ಳುತ್ತದೆ ಎಂದಿಟ್ಟುಕೊಳ್ಳಿ. ಕಂಪೆನಿಯ ಬಳಿ ಕೇವಲ ನೂರು ಟನ್ ಕಾಫಿ ಭೌತಿಕ ದಾಸ್ತಾನು ಇರುತ್ತದೆ. ಉಳಿದ ೯೦೦ ಟನ್‌ಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ಸರಬರಾಜು ಮಾಡ ಬೇಕಾಗುತ್ತದೆ. ಕಂಪೆನಿ ಮಾರಾಟ ಒಪ್ಪಂದದAತೆ ಸರಬರಾಜು ಮಾಡಲೇ ಬೇಕಿರುವುದರಿಂದ ಕೆಲವೊಮ್ಮೆ ನಷ್ಟ ಆದರೂ ಕ್ಯಾಶ್ ಮಾರುಕಟ್ಟೆಯಲ್ಲಿ ಕಾಫಿ ಖರೀದಿಸುತ್ತದೆ. ಇದೇ ರೀತಿ ನೂರಾರು ಮಾರಾಟಗಾರರು ಖರೀದಿಗೆ

(ಮೊದಲ ಪುಟದಿಂದ) ಮುಂದಾದಾಗ ಮಾರುಕಟ್ಟೆಯಲ್ಲಿ ಸತತ ದರ ಏರಿಕೆಗೆ ಕಾರಣವಾಗುತ್ತದೆ. ಇದನ್ನು ಶಾರ್ಟ್ ಬೈಯಿಂಗ್ (shoಡಿಣ buಥಿiಟಿg) ಎನ್ನುತ್ತಾರೆ ಶಾರ್ಟ್ ಸೆಲ್ಲಿಂಗ್ ಕೂಡ ಇರುತ್ತದೆ .ಕೆಲವೊಮ್ಮೆ ಬಳಕೆ ಹೆಚ್ಚಾದಾಗ ಬೇಡಿಕೆಯೂ ಹೆಚ್ಚಿ ದರ ಏರಿಕೆಗೆ ಕಾರಣ ಆಗುತ್ತದೆ.

ಇನ್ನು ದರ ಕುಸಿತವಾಗಲೂ ಇದೇ ರೀತಿಯ ವಹಿವಾಟು ಕಾರಣ ಆಗಬಹುದು. ಬೇಡಿಕೆ ಕಡಿಮೆ ಆಗಿ ಅಥವಾ ಮಾರಾಟಗಾರರು ಸಾಕಷ್ಟು ಭೌತಿಕ ದಾಸ್ತಾನು ಹೊಂದಿದ್ದಾಗ ಖರೀದಿಗೆ ಮುಂದಾಗುವುದಿಲ್ಲ ಆಗ ದರ ಕುಸಿತಕ್ಕೆ ಕಾರಣ ಆಗಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿ ದರ ಕುಸಿತಕ್ಕೂ ಇದೇ ಕಾರಣ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ ಕ್ಯಾಶ್ ಮಾರುಕಟ್ಟೆಯ ಮೂಲಕವೂ ವಹಿವಾಟು ನಡೆಯುತ್ತದೆ. ಒಟ್ಟಿನಲ್ಲಿ ಅಲ್ಲದವರೂ ಕೂಡ ಆನ್ ಲೈನ್‌ನಲ್ಲಿ ಕಾಫಿ ಖರೀದಿ ಅಥವಾ ಮಾರಾಟ ಮಾಡಬಹುದಾಗಿದೆ. ಇದಕ್ಕೂ ಷೇರು ಮಾರುಕಟ್ಟೆಯ ಫ್ಯೂಚರ್ ಮಾರುಕಟ್ಟೆಗೂ ವ್ಯತ್ಯಾಸವೇನೂ ಇಲ್ಲ. ಒಟ್ಟು ಮೌಲ್ಯದ ಶೇಕಡಾ ೧೦-೨೦ ರಷ್ಟು ಹಣ ಹೂಡಿಕೆ ಮಾಡಿದರೆ ವಹಿವಾಟು ಮಾಡಬಹುದಾಗಿದೆ.

ವಿಶ್ವದ ಅತ್ಯಂತ ದೊಡ್ಡ ಕಾಫಿ ಉತ್ಪಾದಕ ದೇಶಗಳಾದ ಬ್ರೆಜಿಲ್ , ವಿಯಟ್ನಾಂ ದೇಶಗಳಲ್ಲಿ ಹವಾಮಾನದ ಕಾರಣದಿಂದಾಗಿ ಕಾಫಿ ಉತ್ಪಾದನೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಮುಂದಿನ ಬೆಳೆ ಬರುವವರೆಗೆ ಕಾಫಿ ದರ ಏರಿಕೆ