ವೀರಾಜಪೇಟೆ, ಮೇ ೬: ಮುಂಬೈಯ ಸೋಮಯ್ಯ ವಿದ್ಯಾ ವಿಹಾರ ವಿಶ್ವವಿದ್ಯಾನಿಲಯದಲ್ಲಿ ನಡೆದ ೪೩ನೇ ಇಂಡಿಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ೨೦೨೪ ರಲ್ಲಿ ಜಿಲ್ಲೆಯ ಕ್ರೀಡಾಪಟು ಗಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಮೂಲತಃ ಕೊಡಗು ಜಿಲ್ಲೆಯವರಾದ ಚೇಮಿರ ಸೀತಮ್ಮ ಸುಬ್ಬಯ್ಯ ಶಾಟ್‌ಪೂಟ್‌ನಲ್ಲಿ ಪ್ರಥಮ, ಡಿಸ್ಕಸ್ ಥ್ರೋನಲ್ಲಿ ಪ್ರಥಮ, ೪x೧೦೦ ಮೀಟರ್ ಜಾವಲಿನ್ ತೃತೀಯ, ಹ್ಯಾಮರ್ ಥ್ರೋನಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಅಂರ‍್ರಾಷ್ಟಿçÃಯ ಅಥ್ಲೆಟಿಕ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.