ಅಮ್ಮತ್ತಿ, ಮೇ ೫: ಅಮ್ಮತ್ತಿ ಫುಟ್ಬಾಲ್ ಕ್ಲಬ್ ವತಿಯಿಂದ ೪೦ ವರ್ಷ ಮೇಲ್ಪಟ್ಟವರಿಗೆ ತಾಲೂಕು ಮಟ್ಟದ ಲೆಜಂಡ್ ಕಪ್ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿರುವುದಾಗಿ ಕ್ಲಬ್ ಅಧ್ಯಕ್ಷ ಹೆರಾಲ್ಡ್ ತಿಳಿಸಿದ್ದಾರೆ.

ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ಮೇ ೧೮ ಹಾಗೂ ೧೯ ರಂದು ಪಂದ್ಯಾಟ ನಡೆಯಲಿದ್ದು, ವೀರಾಜಪೇಟೆ ತಾಲೂಕಿನ ೪೦ ವರ್ಷದ ಮೇಲ್ಟಟ್ಟವರು ಮಾತ್ರ ಪಂದ್ಯಾಟದಲ್ಲಿ ಭಾಗವಹಿಸಬಹುದು. ವಿಜೇತ ತಂಡಗಳಿಗೆ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು. ಹಿರಿಯ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪಂದ್ಯಾವಳಿ ಆಯೋಜಿಸಿದ್ದು, ಹೆಚ್ಚಿನ ಮಾಹಿತಿಗಾಗಿ ೯೪೪೯೭೦೪೨೩೨ ಹಾಗೂ ೯೫೩೫೫೫೩೩೧೫ ಸಂಪರ್ಕಿಸಬಹುದು.