ಗೋಣಿಕೊಪ್ಪ ವರದಿ, ಮೇ ೫: ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯ ಭಾನುವಾರದ ಪಂದ್ಯದಲ್ಲಿ ೧೮ ತಂಡಗಳು ಗೆಲುವು ಪಡೆದುಕೊಂಡವು.

ಪುರುಷರ ವಿಭಾಗ: ಪಂದ್ಯAಡ ಪೆಬ್ಬಟ್ಟಿರ ವಿರುದ್ದ ೧೦೦ ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಪಂದ್ಯAಡ ದಿಲನ್ ಬಾರಿಸಿದ ೮೨ ರನ್‌ಗಳ ನೆರವಿನಿಂದ ೧೩೭ ರನ್ ಗುರಿ ನೀಡಿತು. ಪೆಬ್ಬಟ್ಟಿರ ೭ ವಿಕೆಟ್ ನಷ್ಕಕ್ಕೆ ೩೬ ರನ್ ಗಳಿಸಿತು. ಪಂದ್ಯAಡ ಹರೀಶ್ ೨ ವಿಕೆಟ್, ಪೆಬ್ಬಟ್ಟೀರ ಅರಿಶ್ ೬ ರನ್, ತಿಲಕ್ ೧ ವಿಕೆಟ್ ಪಡೆದರು.

ಪುಡಿಯಂಡ ತೀತಿರ(ಹರಿಹರ) ತಂಡವನ್ನು ೧೦ ವಿಕೆಟ್‌ಗಳಿಂದ ಮಣಿಸಿತು. ತೀತಿರ ೬ ವಿಕೆಟ್‌ಗೆ ೫೯ ರನ್ ಗುರಿ ನೀಡಿತು. ಪುಡಿಯಂಡ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು.

ಹಂಚೆಟ್ಟಿರಕ್ಕೆ ಪಾಲಚಂಡ ವಿರುದ್ಧ ೮ ವಿಕೆಟ್ ಗೆಲುವು ದೊರೆಯಿತು. ಹಂಚೆಟ್ಟಿರ ೭ ವಿಕೆಟ್ ನಷ್ಟಕ್ಕೆ ೬೧ ರನ್, ಪಾಲಚಂಡ ೨ ವಿಕೆಟ್ ಕಳೆದುಕೊಂಡು ೬೩ ರನ್ ದಾಖಲಿಸಿತು.

ಚೇರಂಡ ತಂಡಕ್ಕೆ ಮುಕ್ಕಾಟಿರ (ಬೇತ್ರಿ) ವಿರುದ್ದ ೮ ವಿಕೆಟ್ ಗೆಲುವು ದೊರೆಯಿತು. ಮುಕ್ಕಾಟಿರ ೪ ವಿಕೆಟ್ ಕಳೆದುಕೊಂಡು ೭೩ ರನ್ ಗಳಿಸಿತು. ಚೇರಂಡ ೨ ವಿಕೆಟ್ ಕಳೆದುಕೊಂಡು ೬.೪ ಓವರ್‌ಗಳಲ್ಲಿ ಗುರಿ ಮುಟ್ಟಿತು.

ಅಚ್ಚಕಾಳೆರ ತಂಡವು ಕೂಪದಿರವನ್ನು ೭ ವಿಕೆಟ್‌ಗಳಿಂದ ಸೋಲಿಸಿತು. ಕೂಪದಿರ ೨ ವಿಕೆಟ್ ಕಳೆದುಕೊಂಡು ೯೫ ರನ್ ದಾಖಲಿಸಿತು. ಅಚ್ಚಕಾಳೆರ ೩ ವಿಕೆಟ್ ನಷ್ಟಕ್ಕೆ ೫.೪ ಓವರ್‌ಗಳಲ್ಲಿ ಗೆಲುವು ಪಡೆದುಕೊಂಡಿತು.

ಕಾಣತಂಡವು ಕುಂಡಚ್ಚಿರವನ್ನು ೮೭ ರನ್‌ಗಳಿಂದ ಸೋಲಿಸಿತು ಕಾಣತಂಡ ಕಿಶನ್ ಕಾರ್ಯಪ್ಪ ಬಾರಿಸಿದ ೧೦೬ ರನ್‌ಗಳ ಅಮೋಘ ರನ್‌ಗಳಿಂದ ೧೩೭ ರನ್ ದಾಖಲಿಸಿತು. ಕುಂಡಚ್ಚಿರ ೭ ವಿಕೆಟ್ ಕಳೆದುಕೊಂಡು ೫೦ ಕ್ಕೆ ಕುಸಿಯಿತು. ಕುಂಡಚ್ಚಿರ ಪ್ರೇಶ್ ಮೊಣ್ಣಪ್ಪ ೨೦ ರನ್, ಕಾಣತಂಡ ಸಮಂತ್ ೩ ವಿಕೆಟ್ ಕಬಳಿಸಿದರು.

ಮಲ್ಲಾಜಿರ ತಂಡಕ್ಕೆ ಪುಳ್ಳಂಗಡ ವಿರುದ್ದ ೧೦ ವಿಕೆಟ್‌ಗಳ ಭರ್ಜರಿ ಗೆಲುವು ದೊರೆಯಿತು. ಪುಳ್ಳಂಗಡ ೬ ವಿಕೆಟ್ ಕಳೆದುಕೊಂಡು ೪೮ ರನ್ ದಾಖಲಿಸಿತು. ಮಲ್ಲಾಜಿರ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. ಪುಳ್ಳಂಗಡ ದೀಪಲ್ ೧೮ ರನ್, ಮಲ್ಲಾಜಿರ ಜಗನ್ ೨ ವಿಕೆಟ್, ಪ್ರವೀಣ್ ೩೧ ರನ್ ಗಳಿಸಿದರು.

ಅಪ್ಪುಡ ಕೀತಿಯಂಡವನ್ನು ೨೫ ರನ್‌ಗಳಿಂದ ಸೋಲಿಸಿತು. ಅಪ್ಪುಡ ೨ ವಿಕೆಟ್ ನಷ್ಟಕ್ಕೆ ೯೩ ರನ್ ದಾಖಲಿಸಿತು. ಕೀತಿಯಂಡ ೬ ವಿಕೆಟ್ ಕಳೆದುಕೊಂಡು ೬೮ ರನ್ ಬಾರಿಸಿತು. ಅಪ್ಪುಡ ಬಿಪಿನ್ ೪೦ ರನ್, ಕೀತಿಯಂಡ ನರೇಶ್ ೨೧ ರನ್, ಅಪ್ಪುಡ ಪ್ರಶಾಂತ್ ೩ ವಿಕೆಟ್ ಪಡೆದರು.

ನೆರವಂಡಕ್ಕೆ ಪೋರೆರ ವಿರುದ್ಧ ೧೦ ವಿಕೆಟ್‌ಗಳ ಗೆಲುವು ದಕ್ಕಿತು. ಪೋರೆರ ೫ ವಿಕೆಟ್ ಕಳೆದುಕೊಂಡು ೪೯ ರನ್, ನೆರವಂಡ ೨.೧ ಓವರ್‌ಗಳಲ್ಲಿ ಪಂದ್ಯ ಮುಗಿಸಿತು. ಪೋರೆರ ಸುಜನ್ ೧೨ ರನ್, ನೆರವಂಡ ಪ್ರಶಾಂತ್ ೪೮ ರನ್ ದಾಖಲಿಸಿದರು.

ಬೊಳ್ಳೆರ ತಂಡಕ್ಕೆ ಅಪ್ಪುಡ ವಿರುದ್ಧ ೨೫ ರನ್‌ಗಳ ಗೆಲುವು ದೊರೆಯಿತು. ಬೊಳ್ಳೆರ ೫ ವಿಕೆಟ್ ಕಳೆದುಕೊಂಡು ೮೧ ರನ್ ದಾಖಲಿಸಿತು. ಅಪ್ಪುಡ ೫ ವಿಕೆಟ್ ನಷ್ಟಕ್ಕೆ ೬೬ ರನ್ ಗಳಿಸಿ ಸೋಲಿಗೆ ಶರಣಾಯಿತು. ಬೊಳ್ಳೆರ ದರ್ಶನ್ ೩೮ ರನ್, ಅಪ್ಪುಡ ಬಿಪಿನ್ ೨೪ ರನ್ ಹೊಡೆದರು.

ಚೆನಿಯಪಂಡವು ಕೊಪ್ಪಿರವನ್ನು ೨೨ ರನ್‌ಗಳಿಂದ ಮಣಿಸಿತು. ಚೆನಿಯಪಂಡ ೪ ವಿಕೆಟ್ ಕಳೆದುಕೊಂಡು ೧೧೯ ರನ್, ಕೊಪ್ಪಿರ ೩ ವಿಕೆಟ್ ನಷ್ಟಕ್ಕೆ ೯೭ ರನ್ ದಾಖಲಿಸಿತು. ಚೆನಿಯಪಂಡ ಬೋಪಯ್ಯ ೬೨ ರನ್, ಕೊಪ್ಪಿರ ಅಮಿತ್ ೨೯, ಕಿಯನ್ ೩ ವಿಕೆಟ್ ಪಡೆದರು.

ಪೆಮ್ಮಣಮಾಡಕ್ಕೆ ಪೊನ್ನಕಚ್ಚಿರ ವಿರುದ್ಧ ೧೬ ರನ್‌ಗಳ ಗೆಲುವು ದೊರೆಯಿತು. ಪೆಮ್ಮಣಮಾಡ ೩ ವಿಕೆಟ್ ಕಳೆದುಕೊಂಡು ೧೧೯ ರನ್, ಪೊನ್ನಕಚ್ಚಿರ ೮ ವಿಕೆಟ್ ಕಳೆದುಕೊಂಡು ೧೦೩ ರನ್ ದಾಖಲಿಸಿತು. ಪೆಮ್ಮಣಮಾಡ ತಶ್ವಿನ್ ೫೨ ರನ್, ಪೊನ್ನಕಚ್ಚಿರ ಕರುಂಬಯ್ಯ ೨ ವಿಕೆಟ್, ಸಂಜು ೨೨ ರನ್ ದಾಖಲಿಸಿದರು.

ಮೇಕೇರಿರ ತಂಡವು ಕೊಡಂದೆರವನ್ನು ೨೬ ರನ್‌ಗಳಿಂದ ಸೋಲಿಸಿತು. ಮೇಕೇರಿರ ೩ ವಿಕೆಟ್ ಕಳೆದುಕೊಂಡು ೧೦೭ ರನ್ ಗಳಿಸಿತು. ಕೊಡಂದೆರ ೮೨ ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಮೇಕೇರಿರ ಚೇತನ್ ೫೧ ರನ್, ಕೊಡಂದೆರ ಧ್ಯಾನ್ ೧ ವಿಕೆಟ್, ನರೇನ್ ೫೪ ರನ್ ಗಳಿಸಿದರು.

ಪೆಮ್ಮಂಡ ೧೦ ವಿಕೆಟ್‌ಗಳಿಂದ ಆಪಾಡಂಡವನ್ನು ಮಣಿಸಿತು. ಆಪಾಡಂಡ ೮ ವಿಕೆಟ್ ಕಳೆದುಕೊಂಡು ೪೭ ರನ್, ಪೆಮ್ಮಂಡ ೩.೧ ಒವರ್‌ಗಳಲ್ಲಿ ಪಂದ್ಯ ಮುಗಿಸಿತು.

ಚೀಯಣಮಾಡ ಪೆಮ್ಮಣಮಾಡ ವನ್ನು ೨೪ ರನ್‌ಗಳಿಂದ ಸೋಲಿಸಿತು. ಚೀಯಣಮಾಡ ೨ ವಿಕೆಟ್ ಕಳೆದುಕೊಂಡು ೯೨ ರನ್, ಪೆಮ್ಮಣಮಾಡ ೬೯ ರನ್ ದಾಖಲಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು. ಚೀಯಣಮಾಡ ಸಜನ್ ೨೫ ರನ್, ಬೋಪಣ್ಣ ೨೩ ರನ್, ಪೆಮ್ಮಣಮಾಡ ಪೊನ್ನಣ್ಣ ೨೦ ರನ್, ಚೀಯಣಮಾಡ ಭೀಮಯ್ಯ ೩ ವಿಕೆಟ್ ಪಡೆದರು.

ಗುಮ್ಮಟ್ಟಿರ ಗೈರಿನಿಂದ ದಾಸಂಡ ಮುಂದಿನ ಸುತ್ತಿಗೆ, ಮುಕ್ಕಾಟಿರ (ಪುಲಿಕೋಟ್) ತಂಡ ಗೈರಿನಿಂದ ಬೊಳ್ಳೆರ ತಂಡ, ಕೆಚ್ಚೇಟಿರ ಗೈರಿನಿಂದ ಕುಂಡ್ರAಡ ಮುಂದಿನ ಪ್ರವೇಶ ಪಡೆದುಕೊಂಡಿತು.

ತೀತಿರ ಶಾನ್, ಪಾಲಚಂಡ ಚೇತನ್ ಬೋಪಣ್ಣ, ಮುಕ್ಕಾಟಿರ ಪೊನ್ನಪ್ಪ, ಕೂಪದಿರ ಸುದಿ, ಕುಂಡಚ್ಚಿರ ಪ್ರೇಶ್ ಮೊಣ್ಣಪ್ಪ, ಪುಳ್ಳಂಗಡ ದೀಪಲ್, ಕೀತಿಯಂಡ ಪೊನ್ನಣ್ಣ, ಪೋರೆರ ಸುಜನ್, ಅಪ್ಪುಡ ಬಿಪಿನ್, ಪೆಬ್ಬಟ್ಟಿರ ಅರಿಶ್, ಕೊಪ್ಪಿರ ಲಿಯಾನ್, ಪೊನ್ನಕಚ್ಚಿರ ಸಂಜು, ಕೊಡಂದೇರ ನರೇನ್, ಆಪಾಡಂಡ ಕಿರಣ್, ಪೆಮ್ಮಣಮಾಡ ಪೊನ್ನಣ್ಣ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.