ಕೂಡಿಗೆ, ಮೇ ೫: ಕೂಡಿಗೆಯ ಶ್ರೀ ದಂಡಿನಮ್ಮ, ಬಸವೇಶ್ವರ, ಮುತ್ತತ್‌ರಾಯ ದೇವಸ್ಥಾನ ಹಾಗೂ ಗ್ರಾಮ ಸೇವಾ ಸಮಿತಿ ವತಿಯಿಂದ ತಾ. ೨೪ ರಂದು ಗ್ರಾಮ ದೇವತೆಯ ಹಬ್ಬ ಮತ್ತು ಜಾತ್ರೋತ್ಸವ ನಡೆಯಲಿದೆ.

ತಾ. ೨೦ ರಂದು ಶ್ರೀ ಬಸವೇಶ್ವರ ದೇವರ ವಾನ್ಯ ಮೆರವಣಿಗೆ ನಡೆಯುವುದು. ತಾ. ೨೪ ರಂದು ಶ್ರೀ ದೇವಿಯ ವಾರ್ಷಿಕ ಪೂಜಾ ಕಾರ್ಯಗಳು ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧೨.೩೦ ಗಂಟೆಯವರೆಗೆ ನಡೆದು ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಲಿದೆ. ರಾತ್ರಿ ೮ ಗಂಟೆಗೆ ಅಗ್ನಿ ಸ್ಥಾಪನೆ, ಶ್ರೀ ಬಸವೇಶ್ವರ ದೇವಾಲಯದಿಂದ ಗ್ರಾಮಸ್ಥರು, ಭಕ್ತಾದಿಗಳು ಕಾವೇರಿ ನದಿಗೆ ತೆರಳಿ ಕಲಶ ಪೂಜೆ, ಹಣ್ಣಾಡಗೆ ಉತ್ಸವ, ಕೊಂಡೋತ್ಸವ ಹಾಗೂ ಮುಂಜಾನೆ ಉಯ್ಯಾಲೆ ಮಹೋತ್ಸವ ನಡೆಯಲಿದೆ.

ತಾ. ೨೫ ರಂದು ಶ್ರೀ ದಂಡಿನಮ್ಮ ದೇವಿ ವಿಶೇಷ ಪೂಜೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ. ಜೊತೆಗೆ ಜಾತ್ರೋತ್ಸವ ನಡೆಯಲಿದೆ. ರಾತ್ರಿ ೮ ಗಂಟೆಗೆ ಶ್ರೀ ಮುತ್ತತ್‌ರಾಯ್ ದೇವರ ಹರಿಸೇವಾ ಮಹೋತ್ಸವ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ.