ಚೆಯ್ಯಂಡಾಣೆ, ಮೇ ೬: ಸಮೀಪದ ಚೇಲಾವರದಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ಶ್ರೀ ಸ್ವಾಮಿ ಕೊರಗಜ್ಜನ ಸನ್ನಿಧಿಯಲ್ಲಿ ಪ್ರಥಮ ವರ್ಷದ ನೇಮೋತ್ಸವ ಜರುಗಿತು.

ಎರಡು ದಿನಗಳ ಕಾಲ ನಡೆದ ನೇಮೋತ್ಸವದಲ್ಲಿ ದೈವಕೋಲ, ಭಂಡಾರ ತೆಗೆಯುವುದು, ಗುಳಿಗ ದೈವದ ಕೋಲ, ಪಾಷಣಮೂರ್ತಿ ದೈವದ ಕೋಲ, ಸ್ವಾಮಿ ಕೊರಗಜ್ಜನ ದೈವದ ಕೋಲ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.