ಕುಶಾಲನಗರ, ಮೇ ೫: ಶಿರಂಗಾಲ ನಲ್ಲೂರು ಗ್ರಾಮದ ಜೈ ಭೀಮ್ ಯುವಕ ಸಂಘದ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿÄತಿ ಸದಸ್ಯ ಎನ್. ಎಸ್. ರಮೇಶ್ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಅಂಬೇಡ್ಕರ್ ವ್ಯಕ್ತಿತ್ವವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು

ಬಿಜೆಪಿ ದಲಿತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಮಕೃಷ್ಣ ಮಾತನಾಡಿ, ಅಂಬೇಡ್ಕರ್ ಸಂವಿಧಾನ ರಚನೆಯಲ್ಲಿ ವಹಿಸಿದ ಪಾತ್ರ ಮತ್ತು ಅವರು ಜೀವನದಲ್ಲಿ ಅನುಭವಿಸಿದ ಅಸ್ಪೃಶ್ಯತೆಯ ನೋವಿನ ಬಗ್ಗೆ ತಿಳಿಸಿದರು

ಅತಿಥಿಯಾಗಿ ಭಾಗವಹಿಸಿದ ಕೊಡ್ಲಿಪೇಟೆ ದಲಿತ ಮುಖಂಡ ಕೆ. ವೆಂಕಟೇಶ್ವರ ಮಾತನಾಡಿ, ಅಂಬೇಡ್ಕರ್ ಅವರು ದಲಿತರ ಉದ್ದಾರಕ್ಕಾಗಿ ಮಾಡಿದ ಹೋರಾಟಗಳನ್ನು ಸ್ಮರಿಸಿದರು. ಸಾಮರಸ್ಯ ವೇದಿಕೆ ಕೊಡಗು ಜಿಲ್ಲಾ ಸಂಯೋಜಕ ಹರೀಶ್ ತಮ್ಮಯ್ಯ ಮಾತನಾಡಿ, ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತ ಅಲ್ಲ, ಅವರೊಬ್ಬ ವಿಶ್ವ ನಾಯಕ, ಎಲ್ಲಾ ಸಮುದಾಯಗಳ ಸಹಕಾರಗಳೊಂದಿಗೆ ಅವರ ಮನ ಪರಿವರ್ತಿಸಿ ಅದರೊಂದಿಗೆ ಅಂಬೇಡ್ಕರ್ ಜಯಂತಿಯನ್ನು ಎಲ್ಲಾ ಸಮುದಾಯಗಳು ಸೇರಿ ಮಾಡಬೇಕೆಂದು ತಿಳಿಸಿದರು.

ಒಂದೇ ಗ್ರಾಮದಲ್ಲಿ ಬದುಕಬೇಕಾದ ಸಮುದಾಯಗಳು ಪರಸ್ಪರ ಸಹಕಾರದಿಂದ ಬದುಕಬೇಕು.

ನಾವು ಪರಿಶುದ್ಧ ಸ್ವಚ್ಛ ಜೀವನ ಮಾಡುವುದರೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉತ್ತಮ ಹುದ್ದೆಗಳನ್ನು ನೀಡಬೇಕೆಂದು ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷಿö್ಮ ವೆಂಕಟೇಶ್ ಉಪಸ್ಥಿತರಿದ್ದರು.

ಜೈ ಭೀಮ್ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಗ್ರಾಮದ ಮುಖ್ಯಸ್ಥರು, ಯುವಕರು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.