ಚೆಯ್ಯಂಡಾಣೆ, ಮೇ ೬: ಚೆಯ್ಯಂಡಾಣೆ ಪಟ್ಟಣದ ಸುತ್ತಮುತ್ತ ನಿರಂತರ ವಿದ್ಯುತ್ ಸಮಸ್ಯೆ ಎದುರಾಗಿದ್ದು, ಸಂಬAಧಪಟ್ಟ ಚೆಸ್ಕಾಂ ಇಲಾಖೆ ನಿರ್ಲಕ್ಷö್ಯ ವಹಿಸುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಚೆಯ್ಯಂಡಾಣೆ ಪಟ್ಟಣದ ಹೃದಯ ಭಾಗದ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಎದುರುಗಡೆ ಆಳವಡಿಸಲಾದ ಟ್ರಾನ್ಸ್ಫಾರ್ಮರ್ ಅನ್ನು ಕಳೆದ ಆರು ತಿಂಗಳ ಅಂತರದಲ್ಲಿ ಮೂರು ಬಾರಿ ಬದಲಾಯಿಸಿದ್ದ ಪರಿಣಾಮ ನಿರಂತರ ಸಮಸ್ಯೆಗಳಾಗಿ ತಲೆದೋರಿದೆ.

ಅಳವಡಿಸಿದ ಟಾನ್ಸ್ಫಾರ್ಮರ್ ಒಂದೆ ವಿದ್ಯುತ್ ಕಂಬದಲ್ಲಿ ಆಳವಡಿಸಿದ್ದಾರೆ. ಕಂಬವನ್ನು ಕೂಡ ರಸ್ತೆಯ ಬದಿಯ ಬರೆಯ ಮೇಲ್ಭಾಗ ಆಳವಡಿಸಿದ್ದು ಅವಘಡಕ್ಕೆ ಆಹ್ವಾನ ನೀಡುವಂತಿದೆ ಎಂದು ಸಾರ್ವಜನಿಕರು ದೂರಿದರು.

ಕೂಡಲೇ ಸಂಬAಧಪಟ್ಟ ಚೆಸ್ಕಾಂ ಇಲಾಖೆ ಇದನ್ನು ಸರಿಪಡಿಸಿ ಗ್ರಾಮಸ್ಥರ ತೊಂದರೆ ನಿವಾರಿಸಬೇಕೆಂದು ಒತ್ತಾಹಿಸಿದ್ದಾರೆ.

ಖಾಯಂ ಲೈನ್‌ಮ್ಯಾನ್ ಇಲ್ಲ

ನರಿಯಂದಡ, ಕೊಕೇರಿ, ಚೇಲಾವರ, ಎಡಪಾಲ, ಕರಡ ಗ್ರಾಮ ಹಾಗೂ ಚೆಯ್ಯಂಡಾಣೆ ಪಟ್ಟಣ ಒಳಗೊಂಡಿದ್ದು, ನಿರಂತರ ವಿದ್ಯುತ್ ಸಮಸ್ಯೆಗೆ ಖಾಯಂ ಲೈನ್‌ಮ್ಯಾನ್ ಇಲ್ಲದಿರುದು ಕಾರಣವಾಗಿದೆ. ೩ ವರ್ಷದಿಂದ ಖಾಯಂ ಲೈನ್‌ಮ್ಯಾನ್‌ನ್ನು ನಿಯೋಜನೆ ಮಾಡಿಲ್ಲ. ಇರುವ ಲೈನ್‌ಮ್ಯಾನ್ ಪೊನ್ನಂಪೇಟೆಯಲ್ಲಿ ವಾಸ್ತವ್ಯವಿರುವ ಕಾರಣ ವಿದ್ಯುತ್ ಸಮಸ್ಯೆಯಾದರೆ ೩ ದಿನದವರೆಗೆ ವಿದ್ಯುತ್ ಇರುವುದಿಲ್ಲ ಎಂಬುದು ಇಲ್ಲಿನ ಗ್ರಾಮಸ್ಥರು ಅಳಲು ವ್ಯಕ್ತಪಡಿಸಿದ್ದಾರೆ. ಟ್ರಾನ್ಸ್ಫಾರ್ಮರ್ ಬರಿ ೨೫-೩೦ ಮನೆಗಳಿಗೆ ಮಾತ್ರ ವಿದ್ಯುತ್ ಸರಬರಾಜಾಗುತ್ತಿದ್ದು, ಇದರಲ್ಲೇ ೬ ತಿಂಗಳಲ್ಲಿ ೩ ಬಾರಿ ಬದಲಾಯಿಸಿದ್ದು ವಿಪರ್ಯಾಸವಾಗಿದೆ.

ಮಳೆಗಾಲಕ್ಕೂ ಮುನ್ನ ಸರಿಪಡಿಸಿ

ವರ್ಷದ ಮಳೆಗಾಲ ಆರಂಭಿಸುವ ಮುನ್ನ ಚೆಸ್ಕಾಂ ಇಲಾಖೆ ಲೈನ್‌ಗಳನ್ನು ಸರಿಪಡಿಸಬೇಕು, ಮರದ ಕೊಂಬೆಗಳನ್ನು ಕಡಿದು ಲೈನ್ ಸರಿಪಡಿಸಿ ಸಮಸ್ಯೆಗಳನ್ನು ಪರಿಹರಿಸಬೇಕು, ಮಳೆಗಾಲ ಆರಂಭವಾದರೆ ಗ್ರಾಮಸ್ಥರಿಗೆ ವಿದ್ಯುತ್ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಅದನ್ನು ಪರಿಹರಿಸಬೇಕು, ಕೂಡಲೇ ಸಂಬAಧಪಟ್ಟ ಚೆಸ್ಕಾಂ ಇಲಾಖೆ ಎಚ್ಚೆತ್ತು ಉತ್ತಮ ರೀತಿಯ ನೂತನ ಟ್ರಾನ್ಸ್ಫಾರ್ಮರ್ ಆಳವಡಿಸಬೇಕು, ತಾಂತ್ರಿಕ ಸಮಸ್ಯೆಗೆ ಕಾರಣ ಏನು ಎಂಬುದು ಕಂಡು ಹಿಡಿಯಬೇಕು, ಟ್ರಾನ್ಸ್ಫಾರ್ಮರ್ ಆಳವಡಿಸುವಾಗ ೨ ವಿದ್ಯುತ್ ಕಂಬವಿರುವAತೆ ಅಳವಡಿಸುವುದು ಉತ್ತಮ, ಕೂಡಲೇ ಖಾಯಂ ಲೈನ್‌ಮ್ಯಾನ್ ನಿಯೋಜಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. -ಅಶ್ರಫ್