ಗೋಣಿಕೊಪ್ಪ ವರದಿ, ಮೇ ೬ : ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯ ೧೬ ತಂಡಗಳು ಗೆದ್ದು ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡಿವೆ.

ಪುರುಷರ ವಿಭಾಗ : ಪಟ್ಟಡ ತಂಡಕ್ಕೆ ಪೊನ್ನಚಂಡ ವಿರುದ್ಧ ೭ ವಿಕೆಟ್ ಜಯ ಲಭಿಸಿತು. ಪೊನ್ನಚಂಡ ಕಾಳಪ್ಪ ೩೧, ವಿಶಾಲ್ ೨೦ ರನ್‌ಗಳ ನೆರವಿನಿಂದ ೬ ವಿಕೆಟ್ ಕಳೆದುಕೊಂಡು ೮೦ ರನ್ ದಾಖಲಿಸಿತು. ಪಟ್ಟಡ ೩ ವಿಕೆಟ್ ಕಳೆದುಕೊಂಡು ೬ ಒವರ್‌ಗಳಲ್ಲಿ ಗೆಲುವು ಪಡೆದುಕೊಂಡಿತು. ಪಟ್ಟಡ ಕಾರ್ತಿಕ್ ೩೯ ರನ್, ಪೊನ್ನಚಂಡ ಪೊನ್ನಣ್ಣ ೩ ವಿಕೆಟ್ ಪಡೆದುಕೊಂಡರು.

ಮುಂಡಚಾಡೀರ ತಂಡವು ಪುಟ್ಟಿಚಂಡ ತಂಡವನ್ನು ೩೪ ರನ್‌ಗಳಿಂದ ಮಣಿಸಿತು. ಮುಂಡಚಾಡೀರ ೫ ವಿಕೆಟ್ ನಷ್ಟಕ್ಕೆ ೯೫ ರನ್ ಗುರಿ ನೀಡಿತು. ಪುಟ್ಟಿಚಂಡ ೮ ವಿಕೆಟ್ ಕಳೆದುಕೊಂಡು ೬೦ ರನ್ ದಾಖಲಿಸಿತು. ಮುಂಡಚಾಡೀರ ಮಂಜು ೪೨ ರನ್ ಸೇರಿದಂತೆ ಹ್ಯಾಟ್ರಿಕ್ ಸೇರಿದಂತೆ ೪ ವಿಕೆಟ್ ಪಡೆದರು. ಪುಟ್ಟಿಚಂಡ ಗಣಪತಿ ೩ ವಿಕೆಟ್, ನಾಚಪ್ಪ ೩೩ ರನ್ ದಾಖಲಿಸಿದರು.

ಕೊಳುಮಾಡಂಡ ತಂಡಕ್ಕೆ ತಡಿಯಂಗಡ ವಿರುದ್ಧ ೫೦ ರನ್ ಗೆಲುವು ದೊರೆಯಿತು. ಕೊಳುಮಾಡಂಡ ೪ ವಿಕೆಟ್ ನಷ್ಟಕ್ಕೆ ೧೦೨ ರನ್ ಪೇರಿಸಿತು. ತಡಿಯಂಗಡ ೭ ವಿಕೆಟ್ ಕಳೆದುಕೊಂಡು ೫೨ ರನ್‌ಗಳಿಗೆ ಕುಸಿಯಿತು. ಕೊಳುಮಾಡಂಡ ಕುಶಾಲಪ್ಪ ೪೩ ರನ್, ತಡಿಯಂಗಡ ಕುಶ ೧೬ ರನ್ ಹಾಗೂ ೩ ವಿಕೆಟ್ ಕಿತ್ತರು.

ಅಲ್ಲಂಗಡಕ್ಕೆ ಕರ್ತಮಾಡ (ಬಿರುನಾಣಿ) ವಿರುದ್ಧ ೯ ವಿಕೆಟ್‌ಗಳ ಜಯ ದೊರೆಯಿತು. ಕರ್ತಮಾಡ ೮ ವಿಕೆಟ್ ಕಳೆದುಕೊಂಡು ೬೦ ರನ್ ಗುರಿ ನೀಡಿತು. ಅಲ್ಲಂಗಡ ೧ ವಿಎಕಟ್ ಕಳೆದುಕೊಂಡು ಗುರಿ ಮುಟ್ಟಿತು. ಕರ್ತಮಾಡ ಲವರಾಜ್ ೨೩ ರನ್, ಅಲ್ಲಂಗಡ ಸ್ವಾಗತ್ ೩ ವಿಕೆಟ್, ಸೂರತ್ ೪೪ ರನ್‌ಗಳ ಮೂಲಕ ತಂಡಕ್ಕೆ ಕಾಣಿಕೆ ನೀಡಿದರು.

ಆಲೆಮಾಡ ತಂಡಕ್ಕೆ ಮಂದನೆರವAಡ ವಿರುದ್ಧ ೧೧೩ ರನ್‌ಗಳ ಗೆಲುವು ದೊರೆಯಿತು. ಅಲೆಮಾಡ ೧ ವಿಕೆಟ್ ಕಳೆದುಕೊಂಡು ೧೬೪ ರನ್ ಪೇರಿಸಿತು. ಮಂದನೆರವAಡ ೫ ವಿಕೆಟ್ ಕಳೆದುಕೊಂಡು ೫೧ ರನ್‌ಗಳಿಗೆ ಕುಸಿಯಿತು. ಅಲೆಮಾಡ ಬೋಪಣ್ಣ ೧೭ ಸಿಕ್ರ‍್ಸ್ ಮೂಲಕ ೧೨೮ ರನ್‌ಗಳ ಕಾಣಿಕೆ ನೀಡಿದರು. ಮಂದನೆರವAಡ ಪ್ರಗತ್ ಕಾರ್ಯಪ್ಪ ೨೪ ರನ್, ಆಲೆಮಾಡ ವಿತನ್ ೩ ವಿಕೆಟ್ ಕಿತ್ತರು.

ಚೆನ್ನಪಂಡ ತಂಡಕ್ಕೆ ಬೊಳ್ಕಾರಂಡ ವಿರುದ್ಧ ೭ ವಿಕೆಟ್‌ಗಳ ಗೆಲುವು ದೊರೆಯಿತು. ಬೊಳ್ಕಾರಂಡ ೭೬ ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ೮ ಚೆಂಡು ಉಳಿದಿರುವಂತೆ ಚೆನ್ನಪಂಡ ೩ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ಕಡೇಮಾಡವು ಪೊರುಕೊಂಡವನ್ನು ೯ ವಿಕೆಟ್‌ಗಳಿಂದ ಮಣಿಸಿತು. ಪೊರುಕೊಂಡ ೭ ವಿಕೆಟ್ ನಷ್ಟಕ್ಕೆ ೪೧ ರನ್, ಕಡೇಮಾಡ ೪.೫ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ಗುರಿ ಸಾಧನೆ ಮಾಡಿತು. ಕಡೇಮಾಡ ಸೋಮಣ್ಣ ೨೯ ರನ್, ಪೊರುಕೊಂಡ ಸುನಿಲ್ ೨೬ ರನ್ ದಾಖಲಿಸಿದರು.

ಕೊಂಗAಡ ತಂಡಕ್ಕೆ ಬೊಳ್ಳಚೆಟ್ಟಿರ ವಿರುದ್ಧ ೮ ವಿಕೆಟ್‌ಗಳ ಗೆಲುವು ದೊರೆಯಿತು. ಬೊಳ್ಳಚೆಟ್ಟಿರ ೭ ವಿಕೆಟ್ ನಷ್ಟಕ್ಕೆ ೫೪ ರನ್, ಕೊಂಗAಡ ೨ ವಿಕೆಟ್ ಕಳೆದುಕೊಂಡು ೪ ಓವರ್‌ಗಳಲ್ಲಿ ಗೆಲುವು ದಾಖಲಿಸಿತು. ಬೊಳ್ಳಚೆಟ್ಟಿರ ಅಚ್ಚಪ್ಪ ೩೮ ರನ್, ಕೊಂಗAಡ ಸಂತೋಷ್ ೩ ವಿಕೆಟ್, ಬೋಪಣ್ಣ ೨೮ ರನ್ ಪಡೆದರು.

ಕರವಂಡ ತಂಡವು ತಾತಪಂಡವನ್ನು ೩೦ ರನ್‌ಗಳಿಂದ ಸೋಲಿಸಿತು. ಕರವಂಡ ದರ್ಶನ್ ಬಾರಿಸಿದ ೮೪ ರನ್‌ಗಳ ನೆರವಿನಿಂದ ೧ ವಿಕೆಟ್ ಕಳೆದುಕೊಂಡು ೧೩೨ ರನ್ ದಾಖಲಿಸಿತು. ತಾತಪಂಡ ೨ ವಿಕೆಟ್ ಕಳೆದಕೊಂಡು ೧೦೨ ರನ್‌ಗಳಷ್ಟೆ ದಾಖಲಿಸಿತು. ತಾತಪಂಡ ಡಿಂಪತ್ ೫೪ ರನ್, ಅಯ್ಯಪ್ಪ ೧ ವಿಕೆಟ್, ಕರವಂಡ ನಿರನ್ ೧ ವಿಕೆಟ್ ಕಬಳಿಸಿದರು.

ಜಮ್ಮಡ ಕೋಡಿರವನ್ನು ೧೮ ರನ್‌ಗಳಿಂದ ಸೋಲಿಸಿತು. ಜಮ್ಮಡ ೪ ವಿಕೆಟ್ ನಷ್ಟಕ್ಕೆ ೮೨ ರನ್, ಕೋಡೀರ ೬ ವಿಕೆಟ್ ಕಳೆದುಕೊಂಡು ೬೪ ರನ್ ಗಳಿಸಿತು.

ತಂಬುಕುತ್ತಿರ ನಂದೇಟಿರವನ್ನು ೮೫ ರನ್‌ಗಳಿಂದ ಸೋಲಿಸಿತು. ತಂಬುಕುತ್ತಿರ ೩ ವಿಕೆಟ್ ಕಳೆದುಕೊಂಡು ೧೨೩ ರನ್, ನಂದೇಟಿರ ೩೯ ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ಪೋರಂಗಡಕ್ಕೆ ಚಟ್ಟಂಡ ವಿರುದ್ಧ ೪ ವಿಕೆಟ್ ಜಯ ಸಿಕ್ಕಿತು. ಚಟ್ಟಂಡ ೩ ವಿಕೆಟ್‌ಗೆ ೭೫ ರನ್, ಪೋರಂಗಡ ೬ ವಿಕೆಟ್ ಕಳೆದುಕೊಂಡು ೭೬ ರನ್ ಸೇರಿಸಿತು.

ಮುದ್ದಂಡ ಅಮ್ಮಣಿಚಂಡ ವಿರುದ್ಧ ೧ ರನ್‌ಗಳ ರೋಚಕ ಗೆಲುವು ದಾಖಲಿಸಿತು. ಮುದ್ದಂಡ ೩ ವಿಕೆಟ್ ನಷ್ಟಕ್ಕೆ ೯೮ ರನ್, ಅಮ್ಮಣಿಚಂಡ ೫ ವಿಕೆಟ್ ನಷ್ಟಕ್ಕೆ ೯೭ ರನ್ ದಾಖಲಿಸಿತು.

ಮೊಳ್ಳೇರಕ್ಕೆ ಆಚೆಯಡ ವಿರುದ್ಧ ೯ ವಿಕೆಟ್ ಗೆಲುವು ದೊರೆಯಿತು. ಆಚೆಯಡ ೪ ವಿಕೆಟ್ ನಷ್ಟಕ್ಕೆ ೭೪ ರನ್ ಕಲೆ ಹಾಕಿತು. ಮೊಳ್ಳೇರ ೧ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಆಚೆಯಡ ಸುನಿಲ್ ೩೪ ರನ್, ರಾಕೇಶ್ ೧ ವಿಕೆಟ್, ಮೊಳ್ಳೇರ ನಿಖಿಲ್ ೪೨ ರನ್ ಸೇರಿದಂತೆ ೨ ವಿಕೆಟ್ ಪಡೆದರು.

ತೆನ್ನೀರ ಗೈರಿನಿಂದ ಪಟ್ರಪಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ಮಹಿಳಾ ವಿಭಾಗ : ಮುಕ್ಕಾಟೀರ (ಹರಿಹರ-ಬೆಳ್ಳೂರು) ತಂಡವು ನಾಟೋಳಂಡವನ್ನು ಸೂಪರ್ ಓವರ್‌ನಲ್ಲಿ ಪರಾಭವಗೊಳಿಸಿತು. ಸೂಪರ್ ಓವರ್‌ನಲ್ಲಿ ನಾಟೋಳಂಡ ೨ ವಿಕೆಟ್ ಕಳೆದುಕೊಂಡು ೬ ರನ್, ಮುಕ್ಕಾಟಿರ ೧ ವಿಕೆಟ್ ಕಳೆದುಕೊಂಡು ೧ ಚೆಂಡು ಉಳಿದಿರುವಂತೆ ೭ ರನ್ ದಾಖಲಿಸಿತು. ನಿಗದಿತ ಓವರ್‌ನಲ್ಲಿ ಮುಕ್ಕಾಟಿರ ೩ ವಿಕೆಟ್ ನಷ್ಟಕ್ಕೆ ೪೩ ರನ್, ನಾಟೋಳಂಡ ೧ ವಿಕೆಟ್ ಕಳೆದುಕೊಂಡು ಟೈ ಮಾಡಿಕೊಂಡಿತು. ಮುಕ್ಕಾಟಿರ ಭಾರತಿ ೧೩ ರನ್, ನಾಟೋಳಂಡ ದೀಪ್ತಿ ೧೮ ರನ್ ದಾಖಲಿಸಿದರು.

ಪೊನ್ನಚಂಡ ಕಾಳಪ್ಪ, ಪುಟ್ಟಿಚಂಡ ನಾಚಪ್ಪ, ತಡಿಯಂಗಡ ಕುಶ, ಕರ್ತಮಾಡ ಲವರಾಜ್, ಮಂದನೆರವAಡ ಪ್ರಗತ್ ಕಾರ್ಯಪ್ಪ, ಬೊಳ್ಕಾರಂಡ ದೀಕ್ಷಿತ್ ಪೂಣಚ್ಚ, ಪೊರುಕೊಂಡ ಸುನಿಲ್, ಬೊಳ್ಳಚೆಟ್ಟಿರ ಅಚ್ಚಪ್ಪ, ತಾತಪಂಡ ಡಿಂಪತ್, ಆಚೆಯಡ ಸುನಿಲ್, ಕೋಡಿರ ಪ್ರತಿಕ್, ನಂದೇಟಿರ ಕುಶಾಲಪ್ಪ, ಚಟ್ಟಂಡ ಕೌಶಿಕ್, ಅಮ್ಮಣಿಚಂಡ ನವೀನ್ ಪಂದ್ಯ ಶ್ರೇಷ್ಠ ಬಹುಮಾನ ಪಡೆದುಕೊಂಡರು.