ಮಡಿಕೇರಿ ಮೇ ೭ : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಮಂಗಳವಾರದ ಮೊದಲ ಪಂದ್ಯದಲ್ಲಿ ಕೊಡವ ವಾರಿಯರ್ಸ್ ತಂಡ ಪ್ರಗತಿ ಕ್ರಿಕೆಟರ್ಸ್ ವಿರುದ್ಧ ೭ ವಿಕೆಟ್‌ಗಳ ಜಯ ಸಾಧಿಸಿದೆ.

ಟಾಸ್ ಗೆದ್ದ ಕೊಡವ ವಾರಿಯರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪ್ರಗತಿ ಕ್ರಿಕೆಟರ್ಸ್ ತಂಡ ೨೦ ಓವರ್‌ಗಳಲ್ಲಿ ೯ ವಿಕೆಟ್‌ಗಳ ನಷ್ಟಕ್ಕೆ ೧೧೩ ರನ್‌ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಕೊಡವ ವಾರಿಯರ್ಸ್ ೧೫.೩ ಓವರ್‌ಗಳಲ್ಲಿ ೩ ವಿಕೆಟ್‌ಗಳ ನಷ್ಟಕ್ಕೆ ೧೧೪ ರನ್‌ಗಳಿಸಿ ಗೆಲುವು ದಾಖಲಿಸಿತು. ಕೊಡವ ವಾರಿಯರ್ಸ್ ನ ಸಂಜಯ್ ಎಂ.ಎA ೨೮ ಬಾಲ್‌ಗಳಲ್ಲಿ ೩೦ ರನ್‌ಗಳನ್ನುಗಳಿಸಿ, ೧೪ ರನ್‌ಗಳಲ್ಲಿ ೪ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಗಳಿಸಿದರು.

೨ನೇ ಪಂದ್ಯದಲ್ಲಿ ಕೂರ್ಗ್ ಬ್ಲಾಸ್ಟರ್ಸ್ ತಂಡ ಟೀಮ್ ವೈಲ್ಡ್ ಫ್ಲವರ್ ವಿರುದ್ಧ ೫ ವಿಕೆಟ್‌ಗಳ ಜಯ ಸಾಧಿಸಿದೆ. ಟಾಸ್ ಗೆದ್ದ ಕೂರ್ಗ್ ಬ್ಲಾಸ್ಟರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೈಲ್ಡ್ ಫ್ಲವರ್ ತಂಡ ೧೫ ಓವರ್ ಗಳಲ್ಲಿ ೬ ವಿಕೆಟ್‌ಗಳ ನಷ್ಟಕ್ಕೆ ೮೬ ರನ್‌ಗಳನ್ನು ಗಳಿಸಿತು. ಕೂರ್ಗ್ ಬ್ಲಾಸ್ಟರ್ಸ್ ತಂಡ ೧೩ ಓವರ್ ಗಳಲ್ಲಿ ೫ ವಿಕೆಟ್‌ಗಳನ್ನು ಕಳೆದುಕೊಂಡು ೮೭ ರನ್ ಗಳನ್ನು ದಾಖಲಿಸಿ ವಿಜಯ ಸಾಧಿಸಿತು. ಕೂರ್ಗ್ ಬ್ಲಾಸ್ಟರ್ಸ್ ತಂಡ ನಿಖಿಲ್ ಬೋಪಯ್ಯ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದರು.