ಮಡಿಕೇರಿ, ಮೇ ೬: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆ ಏ. ೨೬ ರಂದು ಯಶಸ್ವಿಯಾಗಿ ಮುಕ್ತಾಯಗೊಂಡು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಸುಭದ್ರವಾಗಿದೆ. ಮಳೆ ನಿಂತರೂ, ಮಳೆ ಹನಿ ನಿಂತಿಲ್ಲ ಎಂಬ ಮಾತಿನಂತೆ ಈ ಕ್ಷೇತ್ರದಲ್ಲಿ ಚುನಾವಣೆ ಮುಗಿದರೂ ನೀತಿ ಸಂಹಿತೆ ಅಂತ್ಯಗೊAಡಿಲ್ಲ.

ಜೂನ್ ೪ ಅಂದರೆ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವ ತನಕ ದೇಶದಲ್ಲಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಏಪ್ರಿಲ್ ೧೯ ರಿಂದ ಜೂನ್ ೧ ರ ನಡುವೆ ೭ ಹಂತಗಳಲ್ಲಿ ದೇಶದಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ೨ ಹಂತದ ಚುನಾವಣೆ ಮುಕ್ತಾಯಗೊಂಡಿದ್ದು, ಕರ್ನಾಟಕದಲ್ಲೂ ೨ನೇ ಹಂತದ ಚುನಾವಣೆ ನಡೆಯಬೇಕಾಗಿದೆ.

ಚುನಾವಣೆ ಪರ್ವ ಕಾಲದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗುವುದು ಸಹಜ. ಆದರೆ, ಲೋಕಸಭಾ ಚುನಾವಣೆಯಲ್ಲಿ ಸುದೀರ್ಘ ಅವಧಿಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆಯಲ್ಲಿರುತ್ತದೆ. ಚುನಾವಣೆ ಮುಗಿದರೂ ಕೆಲವೊಂದು ವಿಷಯಗಳಿಗೆ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಅದರೊಂದಿಗೆ ಅಂತರ ಜಿಲ್ಲೆ, ರಾಜ್ಯಗಳ ನಡುವಿನ ಚೆಕ್‌ಪೋಸ್ಟ್ಗಳಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗುತ್ತದೆ. ಕೊಡಗು ಜಿಲ್ಲೆಯ ಗಡಿಭಾಗಗಳಲ್ಲಿಯೂ ನೀತಿ ಸಂಹಿತೆ ಹಿನ್ನೆಲೆ ಬಿಗಿ ತಪಾಸಣೆ ಕೈಗೊಳ್ಳಲಾಗಿತ್ತು. ಇದೀಗ ಬಹುತೇಕ ಕಡೆಗಳಲ್ಲಿ ಚುನಾವಣೆ ತಪಾಸಣೆ ಅಂತ್ಯ ಕಂಡಿದ್ದು, ಸಹಜ ಸ್ಥಿತಿಯಲ್ಲಿದೆ. ಜಿಲ್ಲೆಯಲ್ಲಿ ೧೩ ಅಂತರಜಿಲ್ಲಾ, ೪ ಅಂತರರಾಜ್ಯ ಚೆಕ್‌ಪೋಸ್ಟ್ಗಳಿವೆ.

ಸಂಪಾಜೆಯಲ್ಲಿ ತೆರವು

ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆ ಗಡಿಭಾಗವಾದ ಸಂಪಾಜೆಯಲ್ಲಿ ಚುನಾವಣಾ ಉದ್ದೇಶಕ್ಕೆ ತೆರೆದಿದ್ದ ವಿಶೇಷ ಚೆಕ್‌ಪೋಸ್ಟ್ ತೆರವು ಮಾಡಲಾಗಿದ್ದು, ಎಂದಿನAತೆ ಪೊಲೀಸ್, ಅರಣ್ಯ ಅಬಕಾರಿ, ಅಧಿಕಾರಿಗಳಿಂದ ತಪಾಸಣೆ ಮುಂದುವರೆದಿದೆ.ಕರಿಕೆ : ಗಡಿ ಗ್ರಾಮ ಕರಿಕೆ ಚೆಕ್ ಪೋಸ್ಟ್ನಲ್ಲಿ ಯಾವುದೇ ನೀತಿ ಸಂಹಿತೆ ಕಾರ್ಯಗಳು ಗೋಚರಿಸುತ್ತಿಲ್ಲ. ಕೇರಳ - ಕೊಡಗು ಗಡಿ ಭಾಗವಾಗಿರುವ ಚೆಂಬೇರಿ ಚೆಕ್ ಪೋಸ್ಟ್ನಲ್ಲಿ ಯಾವುದೇ ಚುನಾವಣಾ ಸಿಬ್ಬಂದಿಗಳು ಕರ್ತವ್ಯದಲ್ಲಿ ಇಲ್ಲ. ಪೋಲಿಸ್ ಸಿಬ್ಬಂದಿಗಳು ಮಾತ್ರ ಎಂದಿನAತೆ ಕರ್ತವ್ಯ ನಿರ್ವಹಿಸುವುದು ಕಂಡುಬರುತ್ತಿದೆ. ಚುನಾವಣೆಯ ಮೂರನೆಯ ದಿನವೇ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ನಂತರ ತೆರಳಿರುತ್ತಾರೆ.

ಸೋಮವಾರಪೇಟೆ : ಮೈಸೂರು ಕೊಡಗು ಲೋಕಸಭಾ ಚುನಾವಣೆಯ ಮತದಾನ ಮುಗಿದ ನಂತರವೂ ನೀತಿ ಸಂಹಿತೆ ಜಾರಿಯಲ್ಲಿದ್ದು, ನೀತಿ ಸಂಹಿತೆಯ ಕಾರ್ಯಚಟುವಟಿಕೆಗಳು ಮಾತ್ರ ಸ್ಥಗಿತಗೊಂಡಿವೆ.

ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿರುವ ಬಾಣಾವರ ಚೆಕ್‌ಪೋಸ್ಟ್ನಲ್ಲಿ ಈ ಹಿಂದಿನAತೆಯೇ ವಾಹನಗಳ ಸಂಚಾರ ನಡೆಯುತ್ತಿದ್ದು, ಚುನಾವಣಾ ಆಯೋಗದ ಯಾವುದೇ ನಿಯಮಗಳು ಕಂಡುಬರುತ್ತಿಲ್ಲ. ಕ್ಷೇತ್ರದಲ್ಲಿ ಚುನಾವಣೆ ಮುಗಿದಿರುವ ಹಿನ್ನೆಲೆ, ಸಿಬ್ಬಂದಿಗಳು ತಮ್ಮ ಕರ್ತವ್ಯಕ್ಕೆ ವಾಪಸ್ಸಾಗಿದ್ದಾರೆ.

ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದಲೇ ಬಾಣಾವರ ಚೆಕ್‌ಪೋಸ್ಟ್ನಲ್ಲಿ ವಾಹನಗಳ ತಪಾಸಣೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತಿತ್ತು. ಪೊಲೀಸ್ ಸಿಬ್ಬಂದಿಗಳ ಸಹಿತ ನಾಲ್ವರು ಅಧಿಕಾರಿಗಳು ದಿನದ ೨೪ ಗಂಟೆಗಳ ಕಾಲವೂ ತಪಾಸಣೆ ನಡೆಸುತ್ತಿದ್ದರು.

ಹಾಸನ-ಕೊಡಗು ಗಡಿಯನ್ನು ಹೊಂದಿರುವ ಬಾಣಾವರ ಚೆಕ್‌ಪೋಸ್ಟ್ನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಮಾದರಿ ನೀತಿ ಸಂಹಿತೆಯ ಅನ್ವಯ ಯಾವುದೇ ತಪಾಸಣೆ ಕಂಡುಬರುತ್ತಿಲ್ಲ. ಆದರೆ ಪಟ್ಟಣದ ವೈನ್ ಶಾಪ್‌ಗಳು ಮಾತ್ರ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಕಂಡುಬAದಿದೆ.

ಸಿಎಲ್-೨ ಲೈಸೆನ್ಸ್ ಹೊಂದಿರುವ ವೈನ್ ಶಾಪ್‌ಗಳಲ್ಲಿ ಮದ್ಯವನ್ನು ಪಾರ್ಸೆಲ್ ಮಾತ್ರ ನೀಡಲಾಗುತ್ತಿದೆ. ಚುನಾವಣೆ ಘೋಷಣೆಗೂ ಮುನ್ನ ಪಟ್ಟಣದ ಎಂಎಸ್‌ಐಎಲ್ ವೈನ್‌ಶಾಪ್‌ನ್ನು ಹೊರತುಪಡಿಸಿದರೆ ಉಳಿದೆಲ್ಲಾ ವೈನ್‌ಶಾಪ್‌ಗಳಲ್ಲಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸಲಾಗಿತ್ತು. ನೀತಿ ಸಂಹಿತೆ ಘೋಷಣೆಯಾದ ನಂತರ ವೈನ್‌ಶಾಪ್‌ಗಳಲ್ಲಿ ಪಾರ್ಸೆಲ್ ಮಾತ್ರ ನೀಡಲಾಗುತ್ತಿದ್ದು, ಚುನಾವಣೆ ಮುಗಿದರೂ ಸಹ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಕಂಡುಬAದಿದೆ.ಶಿರAಗಾಲ ಗಡಿಯಲ್ಲಿ ತಪಾಸಣೆ

ಕೂಡಿಗೆ : ಕೊಡಗಿನ ಗಡಿ ಭಾಗವಾದ ಶಿರಂಗಾಲ ಗಡಿ ಗೇಟ್‌ನಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾದ ತಪಾಸಣೆಯನ್ನು ಪೊಲೀಸ್ ಮತ್ತು ಕಂದಾಯ ಇಲಾಖೆಯ ಮುಖೇನ ಕೈಗೊಂಡಿದ್ದರು. ಈಗಲೂ ತಪಾಸಣೆ ಮುಂದುವರೆದಿದೆ.

ಹಾಸನ ಹೆದ್ದಾರಿಯ ಮೂಲಕ ಕೊಡಗು ಜಿಲ್ಲೆಗೆ ಪ್ರವೇಶ ಮಾಡುವ ಪ್ರತಿಯೊಂದು ವಾಹನಗಳನ್ನು ಕಾನೂನಿನ ನಿಯಮಾನುಸಾರವಾಗಿ ನೋಂದಣಿ ಮಾಡಿ ನಂತರ ತಪಾಸಣೆ ಮಾಡಿ ಬಿಡಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ, ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಇದೀಗ ಲೋಕಸಭಾ ಚುನಾವಣೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮುಕ್ತಾಯಗೊಂಡರೂ ಸಹ ಶಿರಂಗಾಲ ಗೇಟ್‌ನಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ, ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕಸಭಾ ಚುನಾವಣಾ ನೀತಿಸಂಹಿತೆ ಮುಂದಿನ ತಿಂಗಳುಗಳವರೆಗೆ ಇರುವುದರಿಂದಾಗಿ ತಪಾಸಣಾ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿಯನ್ನು ದಿನಂಪ್ರತಿ ನಿಯೋಜನೆ ಮಾಡಲಾಗುತ್ತಿದೆ, ಅಲ್ಲದೆ ಗ್ರಾಮಾಂತರ ಪೋಲೀಸ್ ಠಾಣಾಧಿಕಾರಿ ಮೋಹನ್ ರಾಜ್ ಅವರು ಸೇರಿದಂತೆ ಸಿಬ್ಬಂದಿ ವರ್ಗದವರು ದಿನಂಪ್ರತಿ ಗೇಟ್ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ಮತ್ತು ಮಾಹಿತಿಯನ್ನು ಸಂಗ್ರಹಿಸುತ್ತಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಳುಹಿಸುವ ಕಾರ್ಯ ನಡೆಯುತ್ತಿದೆ.

ಕೊಡಗು - ಮೈಸೂರು ಗಡಿಭಾಗ ಪರಿಸ್ಥಿತಿ

ಕುಶಾಲನಗರ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು- ಮೈಸೂರು ಗಡಿಭಾಗ ಕುಶಾಲನಗರ-ಕೊಪ್ಪ ಕಾವೇರಿ ಸೇತುವೆ ಬಳಿ ವಾಹನ ತಪಾಸಣಾ ಕೇಂದ್ರ ಸುಮಾರು ಆರು ವಾರಗಳ ಕಾಲ ಕಾರ್ಯಾಚರಣೆ ನಡೆಸಿತ್ತು.

ಏಪ್ರಿಲ್ ೨೬ರಂದು ನಡೆದ ಚುನಾವಣೆ ಬೆನ್ನಲ್ಲೇ ಈ ಕೇಂದ್ರದ ಅಧಿಕಾರಿಗಳು ಸಿಬ್ಬಂದಿಗಳು ತಮ್ಮ ಚಟುವಟಿಕೆಯನ್ನು ಸ್ಥಗಿತಗೊಳಿಸಿ ಕೇಂದ್ರ ತೆರವು ಗೊಂಡಿದೆ. ಪ್ರಸಕ್ತ ಗಡಿಭಾಗದಲ್ಲಿ ಯಾವುದೇ ತಪಾಸಣೆಗೆ ಒಳಪಡದೆ ವಾಹನಗಳು ಸಂಚಾರ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.

ವಾಹನ ತಪಾಸಣೆ ಹಿನ್ನೆಲೆಯಲ್ಲಿ ಮೂರು ಪಾಳಿಗಳಲ್ಲಿ ಅಧಿಕಾರಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಯಾವುದೇ ದಾಖಲೆಗಳು ಇಲ್ಲದೆ ಸಾಗಾಟ ಆಗುತ್ತಿದ್ದ ಸುಮಾರು ೧೦ಕ್ಕೂ ಅಧಿಕ ಪ್ರಕರಣಗಳಲ್ಲಿ ನಗದು ವಶಪಡಿಸಿ ನಿಯಮಾನುಸಾರ ಕ್ರಮ ಕೈಗೊಂಡಿದ್ದರು.

ಪ್ರತಿ ಚುನಾವಣೆ ಸಂದರ್ಭ ಗಡಿ ಭಾಗಗಳಲ್ಲಿ ವಾಹನಗಳ ತಪಾಸಣೆ ಕೇಂದ್ರಗಳನ್ನು ಚುನಾವಣಾ ಆಯೋಗದ ಮೂಲಕ ತೆರೆಯುವುದು ವಾಡಿಕೆ. ಕಳೆದ ೨೦೨೩ ರ ವಿಧಾನಸಭಾ ಚುನಾವಣೆಯ ಸಂದರ್ಭ ಕೂಡ ಚುನಾವಣಾ ಅಧಿಕಾರಿಗಳು ಸಿಬ್ಬಂದಿಗಳು. ಜಿಲ್ಲೆಯ ಗಡಿ ಭಾಗಗಳಲ್ಲಿ ವಾಹನ ತಪಾಸಣಾ ಕೇಂದ್ರಗಳಲ್ಲಿ ೪೦ ದಿನಕ್ಕೂ ಅಧಿಕ ದಿನಗಳ ಅವಧಿ ಕರ್ತವ್ಯ ನಿರ್ವಹಿಸಿದ್ದರು. ಆದರೆ ಬಹುತೇಕ ಎಫ್ ಎಸ್ ಟಿ ಹಾಗೂ ಎಸ್ ಎಸ್ ಟಿ ತಂಡಗಳ ಅಧಿಕಾರಿಗಳ ಸಿಬ್ಬಂದಿಗಳ ವಿಶೇಷ ಭತ್ಯೆ ಇನ್ನೂ ಪಾವತಿ ಆಗಿಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ. ಚುನಾವಣಾ ಆಯೋಗದ ಮೂಲಕ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳನ್ನು ವಾಹನ ತಪಾಸಣಾ ಕೇಂದ್ರಗಳಲ್ಲಿ ನಿಯೋಜಿಸಲಾಗಿದ್ದು ವಿಧಾನಸಭಾ ಚುನಾವಣೆ ಕಳೆದು ಒಂದು ವರ್ಷ ಕಳೆದರೂ ಇನ್ನೂ ಅವರಿಗೆ ಸಲ್ಲಬೇಕಾದ ವಿಶೇಷ ಭತ್ಯೆಗಳನ್ನು ಕೊಡಗು ಜಿಲ್ಲೆಯಲ್ಲಿ ನೀಡಲಾಗಿಲ್ಲ ಎಂದು ಕಳೆದ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ವಾಹನ ತಪಾಸಣಾ ಕೇಂದ್ರದ ತನಿಖಾ ತಂಡದ ಕೆಲವು ಅಧಿಕಾರಿ ಸಿಬ್ಬಂದಿ ತಮ್ಮ ಆಳಲನ್ನು ‘ಶಕ್ತಿ’ಯೊಂದಿಗೆ ತೋಡಿಕೊಂಡಿದ್ದಾರೆ.

- ವರದಿ : ವಿಜಯ್, ಜಗದೀಶ್, ಚಂದ್ರಮೋಹನ್,

ರಜಿತ, ನಾಗರಾಜಶೆಟ್ಟಿ, ಸುಧೀರ್, ವಾಸು

ಸಿದ್ದಾಪುರ: ಮಾಲ್ದಾರೆ ಚೆಕ್ ಪೋಸ್ಟ್ನಲ್ಲಿ ಚುನಾವಣೆ ಸಂಬAಧ ಯಾವುದೇ ತಪಾಸಣಾ ಕಾರ್ಯಗಳು ನಡೆಯುತ್ತಿಲ್ಲ ಆದರೆ ಪೊಲೀಸರು ಚೆಕ್ ಪೋಸ್ಟ್ನಲ್ಲಿ ಎಂದಿನAತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ

ಕುಟ್ಟ-ಆನೆಚೌಕೂರುವಿನಲ್ಲಿ

ಗೋಣಿಕೊಪ್ಪಲು : ಕರ್ನಾಟಕದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆ ನಡೆದ ನಂತರ ಕೊಡಗಿನ ಗಡಿ ಭಾಗವಾದ ತಿತಿಮತಿ ಬಳಿಯ ಆನೆಚೌಕೂರು ಹಾಗೂ ಕೇರಳ ಕರ್ನಾಟಕ ಗಡಿಭಾಗವಾದ ಕುಟ್ಟದ ಗಡಿಯಲ್ಲಿ ತಪಾಸಣಾ ಕಾರ್ಯವು ಮಂದಗತಿಯಲ್ಲಿ ಸಾಗಿದೆ. ಚುನಾವಣೆ ಘೋಷಣೆ ಆದ ಸಂದರ್ಭ ಗಡಿಯಲ್ಲಿ ಪೊಲೀಸರು ಹಾಗೂ ಇತರ ಇಲಾಖೆಯ ಅಧಿಕಾರಿಗಳು ದಿನದ ೨೪ ಗಂಟೆಗಳ ಕಾಲ ಕೆಲಸ ನಿರ್ವಹಿಸುತ್ತಿದ್ದರು. ರಾಜ್ಯಕ್ಕೆ ಬರುವ ವಾಹನಗಳನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸುತ್ತಿದ್ದರು.

ಏ.೨೬ರಂದು ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಮುಗಿದ ನಂತರ ಓರ್ವ ಪೊಲೀಸ್ ಸಿಬ್ಬಂದಿಯನ್ನು ಮಾತ್ರ ಗಡಿಯಲ್ಲಿ ನಿಯೋಜನೆ ಮಾಡಿದ್ದಾರೆ. ಉಳಿದಂತೆ ಕೆಲವು ಅಧಿಕಾರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ವಾಹನದ ತಪಾಸಣೆ ಕಾರ್ಯ ಮುಂದುವರೆಯುತ್ತಿಲ್ಲ. ವಾಹನಗಳು ಎಂದಿನAತೆ ಸಂಚಾರ ಮಾಡುತ್ತಿವೆ.

ಕೇರಳದಲ್ಲಿ ಚುನಾವಣೆ ನಡೆಯಬೇಕಿರುವ ಹಿನ್ನೆಲೆಯಲ್ಲಿ ಗಡಿಭಾಗವಾದ ಕುಟ್ಟ ಗಡಿಯಲ್ಲಿ ತಪಾಸಣಾ ಕಾರ್ಯ ಮುಂದುವರೆಯುತ್ತಿದೆ. ಕೆಲ ಅಧಿಕಾರಿಗಳು ದಿನದ ೨ ಪಾಳಿಯಲ್ಲಿ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ.