ಕೂಡಿಗೆ, ಮೇ ೭: ಕುಶಾಲನಗರ ಸಮೀಪದಲ್ಲಿ ಹರಿಯುತ್ತಿರುವ ಕಾವೇರಿ ನದಿಯ ದಂಡೆಯಲ್ಲಿ ಪ್ರವಾಹ ತಡೆ ಉದ್ದೇಶದಿಂದ ನಿರ್ಮಾಣಗೊಳ್ಳುತ್ತಿದ್ದ ತಡೆಗೋಡೆ ನಿರ್ಮಾಣ ಕಾಮಗಾರಿ ಕಳೆದ ೫ ತಿಂಗಳಿನಿAದ ಆರಂಭ ಗೊಂಡಿತ್ತು. ಆದರೆ, ಕೆಲ ಭಾಗಗಳಲ್ಲಿ ದಂಡೆಯಲ್ಲಿ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಕಾಮಗಾರಿಗೆ ಬಿಟ್ಟುಕೊಡದ ಹಿನ್ನೆಲೆ ನೀರಾವರಿ ಇಲಾಖೆಯ ಮೂಲಕ ಕಂದಾಯ ಇಲಾಖೆಗೆ ನಿಯಮಾನು ಸಾರ ಅರ್ಜಿ ಸಲ್ಲಿಸಿ ಎ.ಡಿ.ಎಲ್.ಆರ್.ನ ಸರ್ವೆಯ ನಂತರ ಒತ್ತುವರಿಯಾಗಿದ್ದ ನದಿಯ ದಂಡೆಯ ಸರಕಾರಿ ಜಾಗದ ತೆರವು ಕಾರ್ಯವು ಕಂದಾಯ ಮತ್ತು ಪೊಲೀಸ್ ಇಲಾಖೆಯ ಸಮ್ಮುಖದಲ್ಲಿ ನಡೆದಿದೆ.

ಕುಶಾಲನಗರ ಸಮೀಪದ ಮುಳ್ಳು ಸೋಗೆ ಗ್ರಾಮದ ಕುವೆಂಪು ಬಡಾವಣೆ ಮತ್ತು ಸಾಯಿ ಬಡಾವಣೆಯಲ್ಲಿ ಕಳೆದ ಕೂಡಿಗೆ, ಮೇ ೭: ಕುಶಾಲನಗರ ಸಮೀಪದಲ್ಲಿ ಹರಿಯುತ್ತಿರುವ ಕಾವೇರಿ ನದಿಯ ದಂಡೆಯಲ್ಲಿ ಪ್ರವಾಹ ತಡೆ ಉದ್ದೇಶದಿಂದ ನಿರ್ಮಾಣಗೊಳ್ಳುತ್ತಿದ್ದ ತಡೆಗೋಡೆ ನಿರ್ಮಾಣ ಕಾಮಗಾರಿ ಕಳೆದ ೫ ತಿಂಗಳಿನಿAದ ಆರಂಭ ಗೊಂಡಿತ್ತು. ಆದರೆ, ಕೆಲ ಭಾಗಗಳಲ್ಲಿ ದಂಡೆಯಲ್ಲಿ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಕಾಮಗಾರಿಗೆ ಬಿಟ್ಟುಕೊಡದ ಹಿನ್ನೆಲೆ ನೀರಾವರಿ ಇಲಾಖೆಯ ಮೂಲಕ ಕಂದಾಯ ಇಲಾಖೆಗೆ ನಿಯಮಾನು ಸಾರ ಅರ್ಜಿ ಸಲ್ಲಿಸಿ ಎ.ಡಿ.ಎಲ್.ಆರ್.ನ ಸರ್ವೆಯ ನಂತರ ಒತ್ತುವರಿಯಾಗಿದ್ದ ನದಿಯ ದಂಡೆಯ ಸರಕಾರಿ ಜಾಗದ ತೆರವು ಕಾರ್ಯವು ಕಂದಾಯ ಮತ್ತು ಪೊಲೀಸ್ ಇಲಾಖೆಯ ಸಮ್ಮುಖದಲ್ಲಿ ನಡೆದಿದೆ.

ಕುಶಾಲನಗರ ಸಮೀಪದ ಮುಳ್ಳು ಸೋಗೆ ಗ್ರಾಮದ ಕುವೆಂಪು ಬಡಾವಣೆ ಮತ್ತು ಸಾಯಿ ಬಡಾವಣೆಯಲ್ಲಿ ಕಳೆದ ಇಲಾಖೆಯ ಮುಖೇನ ಅನುಮೋದನೆ ದೊರೆತು ಅದರನ್ವಯ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆದಿತ್ತು. ತಡೆಗೋಡೆಯ ಕಾಮಗಾರಿಯು ಶೇ. ೫೦ ರಷ್ಟು ಪೂರ್ಣಗೊಂಡಿದೆ. ಆದರೆ ಕೆಲವೆಡೆ ಸರಕಾರಿ ಜಾಗ ಒತ್ತುವರಿ ಕಂಡುಬAದು ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ನೀರಾವರಿ ಇಲಾಖೆಯ ನಿಯಮಾನುಸಾರ ಕಂದಾಯ ಇಲಾಖೆಯು ಒತ್ತುವರಿ ಜಾಗವನ್ನು ತರೆವುಗೊಳಿಸಿದೆ.

ಈ ಸಂದರ್ಭ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ, ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್, ಕುಶಾಲನಗರ ಠಾಣಾಧಿಕಾರಿ ಲೋಕೇಶ್, ಕಂದಾಯ ಪರಿವೀಕ್ಷಕ ಸಂತೋಷ್, ನೀರಾವರಿ ಇಲಾಖೆಯ ಇಂಜಿನಿಯರ್ ಸಿದ್ದರಾಜ್, ಗ್ರಾಮ ಲೆಕ್ಕಾಧಿಕಾರಿ ಗೌತಮ್ ಸೇರಿದಂತೆ ಸಾರ್ವಜನಿಕರು, ಗ್ರಾಮಸ್ಥರು ಹಾಜರಿದ್ದರು.

ಈಗಾಗಲೇ ಕುವೆಂಪು ಬಡಾವಣೆ, ಸಾಯಿ ಬಡಾವಣೆಯ ಕಾವೇರಿ ನದಿ ದಂಡೆಯ ಕಾಮಗಾರಿಯು ಶೇ. ೫೦ರಷ್ಟು ಮುಗಿದಿದ್ದು, ಮುಂದಿನ ಬಾಕಿ ಉಳಿದ ಕಾಮಗಾರಿಗಳನ್ನು ನೀರಾವರಿ ಇಲಾಖೆಯ ನಿಯಮಾನುಸಾರ ಕಾಮಗಾರಿಯನ್ನು ಆರಂಭ ಮಾಡಲಾಗುವುದು ಎಂದು ನೀರಾವರಿ ಇಲಾಖೆಯ ಇಂಜಿನಿಯರ್ ಸಿದ್ದರಾಜ್ ತಿಳಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ