ಸೋಮವಾರಪೇಟೆ, ಮೇ ೭: ತಾಲೂಕು ಬೆಳೆಗಾರರ ಸಂಘದ ಸಭೆಯು ಅಧ್ಯಕ್ಷ ಮೋಹನ್ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಒಕ್ಕಲಿಗರ ಸಮುದಾಯ ಭವನ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆಯಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಬೆಳೆಗಾರರು ತಾವು ಎದುರಿಸುತ್ತಿರುವ ಕಾರ್ಮಿಕರ ಕೊರತೆ, ಅಧಿಕವಾಗುತ್ತಿರುವ ಉತ್ಪಾದನಾ ವೆಚ್ಚ, ಹೆಚ್ಚುತ್ತಿರುವ ಕೂಲಿ, ಬರ ಪರಿಸ್ಥಿತಿ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು.

ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆಗಾರರ ಸ್ಥಿತಿ ಶೋಚನೀಯವಾಗಿದೆ. ಪ್ರಸಕ್ತ ವರ್ಷ ಬರಗಾಲದಿಂದಾಗಿ ತೋಟದಲ್ಲಿ ಕಾಫಿ ಗಿಡಗಳು ಸುಟ್ಟು ಹೋಗಿವೆ. ಕಾಫಿ ಗಿಡಗಳಲ್ಲಿ ಮೂಡಿದ್ದ ಮೊಗ್ಗು ಉದುರಿ ಫಸಲು ನಷ್ಟ ಅನುಭವಿಸುವಂತಾಗಿದೆ. ಈ ನಡುವೆ ಕಾರ್ಮಿಕರ ಸಮಸ್ಯೆ, ಅಧಿಕ ಕೂಲಿಯ ಹೊಡೆತವೂ ಬೆಳೆಗಾರರನ್ನು ಕಾಡುತ್ತಿದೆ ಎಂದರು. ಈ ಬಗ್ಗೆ ಬೆಳೆಗಾರರ ಸಂಘವೇ ಒಂದು ನಿರ್ಧಾರಕ್ಕೆ ಬರಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.

ಕರ್ನಾಟಕ ಬೆಳೆಗಾರರ ಸಂಘದ ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಬೆಳೆಗಾರರು, ರೈತರು ಸಂಘಟಿತರಾಗ ದಿದ್ದಲ್ಲಿ ಸಮಸ್ಯೆಗಳಿಂದ ಮುಕ್ತಿ ಕಂಡುಕೊಳ್ಳಲು ಸಾಧ್ಯವಿಲ್ಲ. ನಾವುಗಳು ಮೌನವಹಿಸಿದರೆ ಸರ್ಕಾರವೂ ನಿರ್ಲಕ್ಷö್ಯ ಮಾಡುತ್ತದೆ. ಸಂಘಟನೆ ಯಿಂದ ಶಕ್ತಿಯುತವಾದ ಹೋರಾಟಕ್ಕೆ ಮುಂದಡಿಯಿಡಬೇಕಿದೆÀ ಎಂದು ಕರೆ ನೀಡಿದರು.

ಯಸಳೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ. ರಾಮಚಂದ್ರ ಮಾತನಾಡಿ, ಓರ್ವ ಬೆಳೆಗಾರ ಸಂಕಷ್ಟಕ್ಕೆ ಸಿಲುಕಿದರೆ ಇತರ ಬೆಳೆಗಾರರು ಅವರಿಗೆ ಸ್ಪಂದಿಸು ವಂತಾಗಬೇಕು. ಪರಸ್ಪರ ಸಹಕಾರ ದಿಂದ ಮಾತ್ರ ಸಂಘಟನೆಯನ್ನು ವೃದ್ಧಿಗೊಳಿಸಲು ಸಾಧ್ಯ ಎಂದರು.

ಮುAದಿನ ದಿನಗಳಲ್ಲಿ ಗ್ರಾಮ ಮಟ್ಟದಿಂದ ಬೆಳೆಗಾರರ ಸಂಘವನ್ನು ಬಲಪಡಿಸಬೇಕು. ಬೆಳೆಗಾರರ ಸಮಸ್ಯೆಗಳ ಬಗ್ಗೆ ನಿರಂತರ ಹೋರಾಟ, ಕೃಷಿಯ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸ ಬೇಕು. ಕೃಷಿಯಲ್ಲಿ ನೂತನ ಆವಿಷ್ಕಾರಗಳನ್ನು ಪರಿಚಯಿಸಬೇಕು. ಕಡಿಮೆ ಬಂಡವಾಳದಿAದ ಅಧಿಕ ಆದಾಯ ಗಳಿಸುವತ್ತ ಚಿಂತನೆ ಹರಿಸಬೇಕು ಎಂದು ಅಭಿಪ್ರಾಯಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಸಪ್ಪ, ಎಡದಂಟೆ ಲವ, ಕಾರ್ಯದರ್ಶಿ ಪ್ರಕಾಶ್ ಸೇರಿದಂತೆ ಕಾರ್ಮಿಕ ಮುಖಂಡರು, ಕಾರ್ಮಿಕರನ್ನು ಸಾಗಿಸುವ ವಾಹನಗಳ ಮಾಲೀಕರು ಸೇರಿದಂತೆ ಬೆಳೆಗಾರರು ಉಪಸ್ಥಿತರಿದ್ದರು.