ಮಡಿಕೇರಿ, ಮೇ ೭: ‘ಕೂರ್ಗ್ ಕಾರ್ನಿವಲ್’ನಂತಹ ಕಾರ್ಯ ಕ್ರಮಗಳು ವರ್ಷಕ್ಕೆ ಎರಡು ಬಾರಿ ನಡೆಯುವಂತಾಗಲಿ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಮಡಿಕೇರಿಯ ಕಿಂಬರ್ಲಿ ಕೂರ್ಗ್ ಹಾಗೂ ಮೈಸೂರಿನ ಇವೆಂಟ್ ಟ್ರೀ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ೨ ದಿನಗಳ ಕಾಲ ಆಯೋಜಿಸಿದ್ದ ಪ್ರವಾಸೋದ್ಯಮ ಹಾಗೂ ಕೈಗಾರಿಕೋದ್ಯಮಕ್ಕೆ ಉತ್ತೇಜನ ನೀಡುವ ಕಾರ್ಯಕ್ರಮವಾದ ‘ಕೂರ್ಗ್ ಕಾರ್ನಿವಲ್’ಗೆ ಭೇಟಿ ನೀಡಿದ ಅವರು, ಕಾರ್ನಿವಲ್ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ನಿವಲ್ ಅಂಗವಾಗಿ ಹಮ್ಮಿಕೊಂಡಿದ್ದ ನೃತ್ಯ ಸ್ಪರ್ಧೆಯಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿರುವುದು ಶ್ಲಾಘನೀಯ ಎಂದ ಅವರು, ೨ ದಿನಗಳ ಕಾಲ ಗಾಂಧಿ ಮೈದಾನದ ರೂಪುರೇಷೆಯನ್ನೇ ಆಕರ್ಷಣೀಯ ರೀತಿಯಲ್ಲಿ ಬದಲಾಯಿಸಿದ ಆಯೋಜಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.

ಕಾರ್ನಿವಲ್‌ನಲ್ಲಿ ಆಹಾರ, ಫ್ಲೀ ಮಾರ್ಕೆಟ್, ಮನರಂಜನಾ ಆಟಗಳು ಸೇರಿದಂತೆ ೨೦ಕ್ಕೂ ಅಧಿಕ ಸ್ಟಾಲ್‌ಗಳು ಜನಸ್ತೋಮವನ್ನು ಆಕರ್ಷಿಸಿದವು. ಮಡಿಕೆ ತಯಾರಿಕೆ ಬಗ್ಗೆ ಸಾರ್ವಜನಿಕರಿಗೆ ಪ್ರಾಯೋಗಿಕ ಕಾಂiನೋಟ್ ಸಿಕ್, ನಾದಯಮ, ಲೌಡ್ ಸೈಲೆನ್ಸ್, ಬಿ ಸೈಡ್ ಟೇಪ್ಸ್, ಸವಾರಿ, ರಾ ಫ್ಲೋಸ್, ಸಾಥ್ವಿಕ್ ÀiÁðಗಾರವು ನಡೆಯಿತು. ಬರ್ಚ್ವುಡ್, ಎ.ವಿ.ಎಸ್, ಆರ್ಟ್ಸಿ ಟಾರ್ಟ್ಸಿ, ಪೊಟೇಟೊ ಟ್ವಿಸ್ರ‍್ಸ್, ವಿಸ್ಕ್ ಆ್ಯಂಡ್ ಶುಗರ್, ಬೋಬಾ ಕೂರ‍್ಸ್, ಬ್ಲೂ ಡೋರ್, ಕುಲುಕ್ಕಿ ಹಟ್, ಫಿಫ್ತ್ ಜನರೇಷನ್ ಕಾಫಿ, ಫ್ಯಾಬಿನ್ಸ್, ಆರೆಂಜ್ ಟ್ರೀ, ಬಿಗ್ ಕಪ್, ಸುತ್ರಾ ಹಾಗೂ ಕುಂಡರ‍್ಸ್ ಕಿಚನ್ ವತಿಯಿಂದ ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ನೋಟ್ ಸಿಕ್, ನಾದಯಮ, ಲೌಡ್ ಸೈಲೆನ್ಸ್, ಬಿ ಸೈಡ್ ಟೇಪ್ಸ್, ಸವಾರಿ, ರಾ ಫ್ಲೋಸ್, ಸಾಥ್ವಿಕ್ ಗುಪ್ತ, ಡಿಪ್ಟಿಕ್, ಟ್ರೆಮೆಂಟ್, ಸೌಂಡ್ ಆಫ್ ಹಿಮಾಲಯಾಸ್ ಸಂಗೀತ ಕಲಾವಿದರು ಹಾಗೂ ಬ್ಯಾಂಡ್‌ಗಳಿAದ ಮೂಡಿಬಂದ ಸಂಗೀತ ಪ್ರದರ್ಶನ ನೆರೆದಿದ್ದ ಜನಸ್ತೋಮವನ್ನು ಆಕರ್ಷಿಸಿದವು.