ಗೋಣಿಕೊಪ್ಪ ವರದಿ, ಮೇ ೭ : ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ರೋಚಕ ಸ್ಪರ್ಧೆ ನಡೆದವು.

ಅಳಮೇಂಗಡ ಮಾಣೀರವನ್ನು ೯೧ ರನ್‌ಗಳಿಂದ ಸೋಲಿಸಿತು. ಅಳಮೇಂಗಡ ೬ ವಿಕೆಟ್ ಕಳೆದುಕೊಂಡು ೧೧೯ ರನ್ ದಾಖಲಿಸಿತು. ಮಾಣೀರ ೯ ವಿಕೆಟ್ ನಷ್ಟಕ್ಕೆ ೨೮ ರನ್ ದಾಖಲಿಸಿತು. ಅಳಮೇಂಗಡ ಡಿಪಿನ್ ೩೪ ರನ್ ಗಳಿಸಿ, ೪ ವಿಕೆಟ್ ಕಬಳಿಸಿದರು. ಮಾಣೀರ ಪೊನ್ನಣ್ಣ ೨ ವಿಕೆಟ್, ಸಂದೇಶ್ ೧೦ ರನ್ ಪಡೆದರು. ಕಾಳಿಮಾಡಕ್ಕೆ ಬಾಳೆಯಡ ವಿರುದ್ಧ ೭ ವಿಕೆಟ್ ಜಯ ಲಭಿಸಿತು. ಬಾಳೆಯಡ ೬ ವಿಕೆಟ್ ನಷ್ಟಕ್ಕೆ ೭೨ ರನ್ ದಾಖಲಿಸಿತು. ಕಾಳಿಮಾಡ ೩ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಬಾಳೆಯಡ ಅರುಣ್ ೨೧ ರನ್, ವಿನೈಲ್ ೨೧, ಕಾಳಿಮಾಡ ಶಿವಪ್ಪ ೩೮ ರನ್ ದಾಖಲಿಸಿದರು.

ಒಡಿಯಂಡಕ್ಕೆ ಮಲ್ಲಾಜಿರ ವಿರುದ್ಧ ೨೧ ರನ್‌ಗಳ ಗೆಲುವು ದೊರೆಯಿತು. ಒಡಿಯಂಡ ೫ ವಿಕೆಟ್ ನಷ್ಟಕ್ಕೆ ೯೫ ರನ್, ಮಲ್ಲಾಜೀರವು ೫ ವಿಕೆಟ್ ಕಳೆದುಕೊಂಡು ೭೩ ಕ್ಕೆ ಕುಸಿಯಿತು. ಒಡಿಯಂಡ ತರುಣ್ ೨೮ ರನ್, ಮಾಚಯ್ಯ ೨೦ ರನ್, ಮಲ್ಲಾಜೀರ ದರ್ಶನ್ ೨೨ ರನ್ ದಾಖಲಿಸಿದರು. ಕಂಬೀರAಡಕ್ಕೆ ಚೇನಂಡ ವಿರುದ್ದ ೧೮ ರನ್‌ಗಳ ಗೆಲುವು ದೊರೆಯಿತು. ಕಂಬೀರAಡ ೨ ವಿಕೆಟ್ ನಷ್ಟಕ್ಕೆ ೮೭ ರನ್, ಚೇನಂಡ ೮ ವಿಕೆಟ್ ಕಳೆದುಕೊಂಡು ೬೯ ಕ್ಕೆ ಕುಸಿಯಿತು. ಕಂಬೀರAಡ ತಮ್ಮಯ್ಯ ೪೪ ರನ್, ಚೇನಂಡ ಅಯ್ಯಣ್ಣ ೨೩ ರನ್, ಕಂಬೀರAಡ ಬೋಪಣ್ಣ ೨ ವಿಕೆಟ್ ಕಬಳಿಸಿದರು.

ನಂದೀರ ತಂಡವು ನಾಯಕಂಡವನ್ನು ೬೩ ರನ್‌ಗಳಿಂದ ಸೋಲಿಸಿತು. ನಂದೀರ ೪ ವಿಕೆಟ್ ಕಳೆದುಕೊಂಡು ೧೦೯ ರನ್, ನಾಯಕಂಡ ೪೬ ರನ್‌ಗಳಿಗೆ ಕುಸಿಯಿತು. ನಂದೀರ ಸಂಜು ಮೊಣ್ಣಪ್ಪ ೨೭ ರನ್, ನಾಯಕಂಡ ಕೌಶಿಕ್ ೨೬ ರನ್, ನಂದೀರ ಸುನಿ ಚಿಣ್ಣಪ್ಪ ೪ ವಿಕೆಟ್ ಕಬಳಿಸಿದರು. ಅಚ್ಚಪಂಡಕ್ಕೆ ಕಡೇಮಡ ವಿರುದ್ಧ ೫೧ ರನ್‌ಗಳ ಗೆಲುವು ದಕ್ಕಿತು. ಅಚ್ಚಪಂಡ ೪ ವಿಕೆಟ್ ನಷ್ಟಕ್ಕೆ ೯೮ ರನ್, ಕಡೇಮಡ ೫ ವಿಕೆಟ್ ಕಳೆದುಕೊಂಡು ೪೭ ರನ್ ಗಳಿಸಿತು. ಅಚ್ಚಪಂಡ ಅಯ್ಯಪ್ಪ ೨೯ ರನ್, ಕಡೇಮಡ ಸೋಮಣ್ಣ ೧೫ ರನ್ ಹೊಡೆದರು.

ಕಾಡ್ಯಮಡ ತಂಡಕ್ಕೆ ಮಚ್ಚೇಟಿರ (ಹಾಲುಗುಂದ) ವಿರುದ್ಧ ೧೦ ವಿಕೆಟ್‌ಗಳ ಭರ್ಜರಿ ಗೆಲುವು ದೊರೆಯಿತು. ಮಚ್ಚೇಟೀರ ೨ ವಿಕೆಟ್ ನಷ್ಟಕ್ಕೆ ೫೬ ರನ್, ಕಾಡ್ಯಮಡ ೩ ಒವರ್‌ಗಳಲ್ಲಿ ಪಂದ್ಯ ಮುಗಿಸಿತು. ಮಚ್ಚೇಟಿರ ಕಿರಣ್ ೪೧ ರನ್, ಕಾಡ್ಯಮಡ ಮಧು ೨ ವಿಕೆಟ್, ಹಾಗೂ ೨೨ ರನ್ ದಾಖಲಿಸಿದರು. ಮಾಚೇಟಿರ (ಬಾಳುಗೋಡು) ತಂಡಕ್ಕೆ ಕೈಬುಲೀರ ವಿರುದ್ಧ ೧೦ ವಿಕೆಟ್ ಜಯ ಲಭಿಸಿತು. ಕೈಬುಲಿರ ೩ ವಿಕೆಟ್‌ಗೆ ೫೪ ರನ್, ಕೈಬುಲಿರ ೫ ಒವರ್‌ಗಳಲ್ಲಿ ಪಂದ್ಯ ಗೆದ್ದುಕೊಂಡಿತು. ಕೈಬುಲಿರ ಲೋಹಿತ್ ಕುಟ್ಟಪ್ಪ ೧೬ ರನ್, ಮಾಚೇಟಿರ ಭರತ್ ೩೫ ರನ್ ದಾಖಲಿಸಿದರು.

ಅಲ್ಲಂಗಡ ಕೊಳುಮಾಡಂಡವನ್ನು ೧೦ ವಿಕೆಟ್‌ಗಳಿಂದ ಸೋಲಿಸಿತು. ಕೊಳುಮಾಡಂಡ ೭ ವಿಕೆಟ್ ನಷ್ಟಕ್ಕೆ ೩೪ ರನ್, ಅಲ್ಲಂಗಡ ೪.೧ ಒವರ್‌ಗಳಲ್ಲಿ ಗೆದ್ದು ಕೊಂಡಿತು. ಕೊಳುಮಾಡಂಡ ಸಚಿನ್ ೧೦ ರನ್, ಅಲ್ಲಂಗಡ ಸ್ವಾಗತ್ ೧೭ ರನ್, ಸೂರತ್ ೧೦ ರನ್ ದಾಖಲಿಸಿದರು. ಮಾಣೀರ ಸಂದೇಶ್, ಬಾಳೆಯಡ ಅರುಣ್, ಮಲ್ಲಾಜೀರ ರೋಶನ್, ಚೇನಂಡ ಐಯಣ್ಣ, ನಾಯಕಂಡ ಕೌಶಿಕ್, ಕಡೇಮಾಡ ಸೋಮಣ್ಣ, ಮಚ್ಚೇಟೀರ ಕಿರಣ್, ಕೈಬುಲಿರ ಲೋಹಿತ್ ಕುಟ್ಟಪ್ಪ, ಕೊಳುಮಾಡಂಡ ಸಚಿನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.