ಕಡAಗ, ಮೇ ೭: ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ೯ನೇ ವರ್ಷದ ಕೆ.ಪಿ.ಎಲ್. ಕ್ರಿಕೆಟ್ ಕ್ರೀಡಾಕೂಟ ನಡೆಯಿತು.

ನಾಲ್ಕು ದಿನಗಳ ಕಾಲ ನಡೆದ ಕ್ರೀಡಾಕೂಟದ ಅಧ್ಯಕ್ಷತೆಯನ್ನು ಕೆಪಿಎಲ್ ಸ್ಥಾಪಕ ಜುನೈದ್ ಕೆ.ಎಂ. ವಹಿಸಿದ್ದರು. ಕ್ರೀಡಾಕೂಟದ ಉದ್ಘಾಟನೆಯನ್ನು ಕೋಡಿರ ಡಾಲಿ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದರು.

ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಪ್ರತೀಕ್ ಪೊನ್ನಣ್ಣ ಕ್ರೀಡಾಕೂಟಗಳಿಂದÀ ಯುವ ಪ್ರತಿಭೆಗಳಿಗೆ ವೇದಿಕೆ ದೊರೆದಂತಾಗುತ್ತದೆ. ಸೌಹಾರ್ದತೆ ಕಾಪಾಡಲು ಹೆಚ್ಚಿನ ಸಹಕಾರಿಯಾಗಲು ಇಂತಹ ವೇದಿಕೆ ಉತ್ತಮವಾಗಿರುತ್ತದೆ ಎಂದು ನುಡಿದರು.

೨೦೨೪ನೇ ಸಾಲಿನ ೯ನೇ ಆವೃತ್ತಿಯ ಕೆ.ಪಿ.ಎಲ್. ವಿನ್ನರ್ ತಂಡವಾಗಿ ಕೊಡಗು ರಾಯಲ್ ತಂಡ, ರನ್ನರ್ ಸ್ಥಾನವನ್ನು ಜಿಯನ್ ತಂಡ ಪಡೆದುಕೊಂಡಿತು.

ಫೈನಲ್ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಬೀಸಿದ ಜಿಯಾನ್ ಕ್ರಿಕೆಟರ್ ತಂಡ ೫ ಓವರ್‌ಗಳಲ್ಲಿ ೪೧ ರನ್ ಕಲೆ ಹಾಕಿತು. ಈ ರನ್ನನ್ನು ಬೆನ್ನಟ್ಟಿದ ಕೊಡಗು ರಾಯಲ್ ತಂಡ ೨ನೇ ಓವರ್‌ನ ೫ನೇ ಎಸೆತದಲ್ಲಿ ವಿಜಯಶಾಲಿಯಾಯಿತು.

ತೃತೀಯ ಸ್ಥಾನವನ್ನು ಎ.ಆರ್. ಫ್ರೆಂಡ್ಸ್ ಮತ್ತು ೪ನೇ ಸ್ಥಾನವನ್ನು ಲೈಟಿಂಗ್ ಲೆಜೆಂಡ್ ತಂಡ ಪೆಡೆದುಕೊಂಡಿತು.

ಪAದ್ಯ ಶ್ರೇಷ್ಠ ಪ್ರಶಸ್ತಿ ಕೊಡಗು ರಾಯಲ್ ತಂಡದ ಆಸ್ಕರ್, ಸರಣಿ ಶ್ರೇಷ್ಠ ಪ್ರಶಸ್ತಿ ನೌಶಾದ್, ಉದಯೋನ್ಮುಖ ಆಟಗಾರ ಅಜ್ಮಲ್, ಉತ್ತಮ ಕ್ಯಾಚರ್ ಯೂನಸ್, ಉತ್ತಮ ದಾಳಿಗಾರ ಅಸ್ಕರ್, ಶಿಸ್ತಿನ ತಂಡವಾಗಿ ಮೈಟಿ ಪಡೆದುಕೊಂಡಿತು.

ಕ್ರೀಡಾಕೂಟದಲ್ಲಿ ತಂಡದ ಮಾಲೀಕರ ಓಟದ ಸ್ಪರ್ಧೆಯಲ್ಲಿ ಕಡಿಯತ್ ನಾಡು ವಾರಿಯರ್ಸ್ನ ರಕ್ಷಿತ್ ಕುಟ್ಟಪ್ಪ ಮೊದಲ ಸ್ಥಾನ ಪಡೆದರು. ಸಮಾರೋಪ ಸಮಾ ರಂಭದಲ್ಲಿ ಕಡಂಗ ಮೂರೂರಿನಲ್ಲಿ ೩೪ ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಕುಲ್ಲಚಂಡ ಟೈನಿ ಈರಪ್ಪ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ದಾನಿ ಮಣಿ ಅಯ್ಯಮ್ಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಿರಣ್ ಕಾರ್ಯಪ್ಪ, ಇಸ್ಮಾಯಿಲ್ ನಾಪೋಕ್ಲು, ಗ್ರಾಮ ಪಂಚಾಯಿತಿ ಸದಸ್ಯರಾದ ಸುಬೀರ್, ಪಾಂಡAಡ ರಾಣಿ ಗಣಪತಿ, ಮಾದಪ್ಪ, ಕವಿತಾ ಪ್ರಕಾಶ್, ಐಚೆಟ್ಟಿರ ಸುನಿತಾ ಮಾಚಯ್ಯ, ಕೋಡಿರ ಪ್ರಸನ್ನ ತಮ್ಮಯ್ಯ, ಪ್ರಕಾಶ್, ಅಬೂಬಕ್ಕರ್, ಉಸ್ಮಾನ್, ಮೊಹಮ್ಮದ್, ಜುನೈದ್ ಸಿ.ಎ., ಮುಸ್ತಫ, ಅಬ್ದುಲ್ ರಹಮಾನ್, ಝಕರಿಯ, ಆಯೋಜಕರಾದ ಸಜೀರ್, ರಶೀದ್, ಶಾನಿದ್, ಜಲೀಲ್, ಉಪಸ್ಥಿತರಿದ್ದರು. ಕ್ರೀಡಾಕೂಟದ ತಾಂತ್ರಿಕ ವಿಭಾಗದಲ್ಲಿ ಅಫ್ಸಲ್ ಮತ್ತು ರಾಜಿಮ್ ಕಾರ್ಯ ನಿರ್ವಹಿಸಿದರು.

ತೀರ್ಪುಗಾರರಾಗಿ ಅನಿಫಾ ಮಡಿಕೇರಿ ಹಾಗೂ ಮುತೀಬ್ ವೀರಾಜಪೇಟೆ, ವೀಕ್ಷಕ ವಿವರಣೆಗಾರರಾಗಿ ಸಹದ್ ಕಡಂಗ, ಹನೀಫ ಎಡಪಾಲ, ಗಫೂರ್ ಕಾರ್ಯನಿರ್ವಹಿಸಿದರು. ಕ್ರೀಡಾಕೂಟದ ಸ್ವಾಗತ ಮತ್ತು ವಂದನಾರ್ಪಣೆಯನ್ನು ಪತ್ರಕರ್ತ ನೌಫಲ್ ಎಂ.ಬಿ. ನಿರ್ವಹಿಸಿದರು.

- ವರದಿ : ನೌಫಲ್ ಕಡಂಗ