ಮಡಿಕೇರಿ, ಮೇ ೭: ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಇದೇ ಪ್ರಥಮ ಬಾರಿಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡವ ಪ್ರೀಮಿಯರ್ ಲೀಗ್ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದೆ. ಹತ್ತು ಫ್ರಾಂಚೈಸಿಗಳು ಈ ಬಾರಿಯ ಪಂದ್ಯಾಟದಲ್ಲಿ ಭಾಗವಹಿಸಿದ್ದು, ಟೆನ್ನಿಸ್ ಬಾಲ್ ಕ್ರಿಕೆಟ್‌ನ ಭರಾಟೆಯ ನಡುವೆ ಲೆದರ್‌ಬಾಲ್ ಕ್ರಿಕೆಟ್‌ನ ಆಕರ್ಷಣೆ ಮರುಕಳಿಸುವಂತೆ ಮಾಡುತ್ತಿದೆ.

ಈ ಪಂದ್ಯಾಟದ ನಡುವೆ ಪ್ರಸ್ತುತ ಉದ್ದೇಶಿಸಲಾಗಿರುವ ಸೆಮಿಫೈನಲ್ ದಿನವಾದ ತಾ.೧೧ ರಂದು ಕೂರ್ಗ್ ಕ್ರಿಕೆಟ್ ಫೌಂಡೇಶನ್ ಹಲವರ ಸಹಕಾರದೊಂದಿಗೆ ವಿಶೇಷವಾಗಿ ಕೊಡವ ತೀನಿ ಪೈಪೋಟಿಯನ್ನು ಏರ್ಪಡಿಸಿದೆ.

ತಾ.೧೧ ರಂದು ಬೆ. ೧೦.೩೦ ರಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಈ ಸ್ಪರ್ಧೆ ನಡೆಯಲಿದೆ. ಸುಮಾರು ೮ ವಿಭಾಗದಲ್ಲಿ ಸ್ಪರ್ಧೆಯಿದ್ದು, ಉಚಿತ ಸ್ಪರ್ಧೆಯಲ್ಲಿ ಜನಾಂಗದ ಪುರುಷರು, ಮಹಿಳೆಯರು ಭಾಗವಹಿಸಬಹುದಾಗಿದೆ. ವಿಜೇತರಿಗೆ ನಗದು ಬಹುಮಾನ ನೀಡಲಿರುವುದಾಗಿ ಆಯೋಜಕರು ತಿಳಿಸಿದ್ದಾರೆ.

ವಿವರ:

ವಿಭಾಗ :

ಪುಟ್ಟ್/ ಕರಿ (ಅombiಟಿಚಿಣioಟಿ)

೧) ಕೋಳಿಕರಿ-ಪುಟ್ಟ್, ೨) ಪಂದಿಕರಿ-ಪುಟ್ಟ್/ಒಟ್ಟಿ, ೩) ಕೂಟ್‌ಕರಿ-ಪುಟ್ಟ್ ೪) ಪಜ್ಜಿ, (ಮುದರೆ, ಎಳ್ಳ್ ಪಜ್ಜಿ, ಚಕ್ಕೆ ಕುರು, ಇತರೆ), ೫) ತೊಪ್ಪು ಬರ್ತದ್, (ಕಾಕೆ ತೊಪ್ಪು, ತೆರ್ಮೆ ತೊಪ್ಪು, ತಾತೆ ತೊಪ್ಪು, ಇತರೆ), ೬) ಬರ್ತ ಪುಟ್ಟ್ , (ಬಡವ ಕಜ್ಜಾಯ, ಚಿಕ್ಕ್ಲುಂಡೆ, ಬಾಳೆ ನುರ್ಕ್, ಇತರೆ), ೭) ಕರಿ, (ಕಾಡ್ ಮಾಂಗೆ, ಚೆಕ್ಕೆ, ಬೈಂಬಳೆ, ಕುಮ್ಮ್, ಕೇಂಬು, ಇತರೆ), ೮) ಜ್ಯೂಸ್, (ಕೈಪುಳಿ, ಚೋರಂಗೆ, ಇತರೆ ಬೇನಿಗಾಲಕ್ ಒತ್ತದ್), ಇದು ವೈಯಕ್ತಿಕ ವಿಭಾಗದ ಪೈಪೋಟಿಯಾಗಿರುತ್ತದೆ. ಒಟ್ಟು ೮ ತೀನಿ ಪೈಪೋಟಿಯಲ್ಲಿ ಒಬ್ಬ ೩ ಪೈಪೋಟಿಯಲ್ಲಿ ಭಾಗವಹಿಸಬಹುದು. ಸ್ಪರ್ಧೆ ಉಚಿತವಾಗಿರುತ್ತದೆ.