ಮುಳ್ಳೂರು, ಮೇ ೭: ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವರ ವಾರ್ಷಿಕ ಪೂಜಾ ಮಹೋತ್ಸವ ಮಂಗಳವಾರ ಬೆಳಿಗ್ಗೆ ಸಂಪನ್ನ ಗೊಂಡಿತು. ಗ್ರಾಮದ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ೬ ಗಂಟೆಗೆ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮುಳ್ಳೂರು ಜಂಕ್ಸನ್‌ನಲ್ಲಿ ರುವ ಅರಳಿಕಟ್ಟೆಗೆ ತರಲಾಯಿತು. ನಂತರ ಅರಳಿಕಟ್ಟೆಯಲ್ಲಿ ಕಳಸಪೂಜೆ ಸಲ್ಲಿಸಿದ ನಂತರ ಕಳಸಹೊತ್ತ ಮಹಿಳೆಯರು, ಭಕ್ತಾದಿಗಳು, ಗ್ರಾಮಸ್ಥರು ವಾದ್ಯಗೋಷ್ಠಿಯೊಂದಿಗೆ ಶ್ರೀ ಬಸವೇಶ್ವರ ಸ್ವಾಮಿ ದೇವರ ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ತರಲಾಯಿತು. ಅರ್ಚಕರು ದೇವಸ್ಥಾನದಲ್ಲಿ ಶ್ರೀ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ವಿಧಿ ವಿಧಾನವನ್ನು ನೆರವೇರಿಸಿದರು, ರಾತ್ರಿ ೯ ಗಂಟೆಯಿAದ ಮಂಗಳವಾರ ಮುಂಜಾನೆ ೫ ಗಂಟೆವರೆಗೆ ಶ್ರೀ ಬಸವೇ ಶ್ವರ ಸ್ವಾಮಿಯ ವಾರ್ಷಿಕ ಪೂಜಾ ಮಹೋತ್ಸವ ನಡೆಯಿತು. ಬೆಳಿಗ್ಗೆ ೬ ಗಂಟೆಗೆ ದೇವಸ್ಥಾನ ಮುಂಭಾಗ ಕೆಂಡಕೊAಡೋತ್ಸವದೊAದಿಗೆ ವಾರ್ಷಿಕ ಪೂಜಾ ಮಹೋತ್ಸವ ಸಂಪ ನ್ನಗೊಂಡಿತು, ಅರ್ಚಕ ಶಾಂತರಾಜ್ ನೇತೃತ್ವದಲ್ಲಿ ಅರ್ಚಕರ ತಂಡ ಪೂಜಾ ಕಾರ್ಯವನ್ನು ನೆರವೇರಿಸಿದರು.