ಮಡಿಕೇರಿ, ಮೇ ೭: ಕೊಡಗು ಜಿಲ್ಲಾ ಬ್ಯಾಡ್‌ಮಿಂಟನ್ ಅಸೋಸಿಯೇಶನ್ ವತಿಯಿಂದ ಅಯೋಜಿಸಲಾಗಿದ್ದ ಜಿಲ್ಲಾಮಟ್ಟದ ಬ್ಯಾಡ್‌ಮಿಂಟನ್ ಸ್ಪರ್ಧೆಯ ೧೧ ವರ್ಷದೊಳಗಿನ ವಿಭಾಗದ ಸಿಂಗಲ್ಸ್ನಲ್ಲಿ ಕೆ.ಬಿ. ಯಶಸ್ ಮಂದಣ್ಣ ದ್ವಿತೀಯ ಹಾಗೂ ಡಬಲ್ಸ್ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ ಕೇಕಡ ಬೋಪಣ್ಣ ಹಾಗೂ ಗೀತಾ ದಂಪತಿಯ ಪುತ್ರ. ರಾಜೇಶ್ವರಿ ಶಾಲೆಯ ಕರೆಸ್ಪಾಂಡೆAಟ್ ನಾಟೋಳಂಡ ವಿಜು ಅವರ ಮಾರ್ಗದರ್ಶನದಲ್ಲಿ ಈತ ಸ್ಪರ್ಧೆಯಲ್ಲಿ ಭಾಗವಹಿಸಿದ್ದ.