s

ಚೆಯ್ಯಂಡಾಣೆ, ಮೇ ೭: ಕೊಡಗು ಜಿಲ್ಲೆಯ ಅನಿವಾಸಿ ಸಂಘಟನೆ ಯಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿ ಯೇಷನ್ ಯುಎಇ ನೂತನ ಸಮಿತಿಯ ಆಯ್ಕೆ ಇತ್ತೀಚೆಗೆ ದುಬೈಯಲ್ಲಿ ನಡೆಯಿತು.

ದುಬೈನ ದೇರಾದ ಕಾಸರಗೋಡು ರಸ್ಟೋರೆಂಟ್‌ನಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವೆಲ್ಫೇರ್ ನ ಅಧ್ಯಕ್ಷರಾದ ಕೆ.ಕೆ.ಉಸ್ಮಾನ್ ಹಾಜಿ ನಾಪೋಕ್ಲು ವಹಿಸಿದ್ದರು. ಪ್ರಾರ್ಥನೆಗೆ ಮರ್ಕಜ್ ಕೊಟ್ಟಮುಡಿ ಇದರ ವ್ಯವಸ್ಥಾಪಕರಾದ ಇಸ್ಮಾಯಿಲ್ ಸಖಾಫಿ ನೇತೃತ್ವ ವಹಿಸಿದ್ದರು. ಕಾರ್ಯಕ್ರಮವನ್ನು ಜಲೀಲ್ ನಿಝಾಮಿ ಎಮ್ಮೆಮಾಡು ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಕೊಟ್ಟಮುಡಿ ವೆಲ್ಫೇರ್ ಕಾರ್ಯ ವೈಖರಿಗಳ ಬಗ್ಗೆ ಮಾತನಾಡಿದರು. ನಂತರ ನೂತನ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆ ನಿರ್ದೇಶಕರಾದ ಜಲೀಲ್ ನಿಝಾಮಿ ನೇತೃತ್ವದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಅಹ್ಮದ್ ಚಾಮಿಯಾಲ, ಪ್ರಧಾನ ಕಾರ್ಯದರ್ಶಿಯಾಗಿ ಜುಬೈರ್ ಎಮ್ಮೆಮಾಡು, ಕೋಶಾಧಿಕಾರಿಯಾಗಿ ಶಾಫಿ ಸಖಾಫಿ ಕೊಂಡAಗೇರಿ, ಉಪಾಧ್ಯಕ್ಷರಾಗಿ ರಫೀಕ್ ಚಾಮಿಯಾಲ, ಆಲಿ ಎಮ್ಮೆಮಾಡು, ಅಶ್ರಫ್ ಕುಂಜಿಲ, ಕಾರ್ಯದರ್ಶಿಗಳಾಗಿ ಮುಜೀಬ್ ಕಡಂಗ, ನಿಸಾರ್ ಗುಂಡಿಕೆರೆ ಹಾಗೂ ಕಾರ್ಯಕಾರಿಣಿ ಮಂಡಳಿಯ ಸದಸ್ಯರಾಗಿ ೧೧ ಮಂದಿಯನ್ನು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರಾಗಿ ೪ ಮಂದಿಯನ್ನು ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿ ಜುಬೈರ್ ಎಮ್ಮೆಮಾಡು, ಸ್ವಾಗತಿಸಿ, ಕಾರ್ಯದರ್ಶಿ ನಿಸಾರ್ ವಂದಿಸಿದರು. -ಅಶ್ರಫ್