ಮಡಿಕೇರಿ, ಮೇ ೭: ಕೊಡಗು ಜಿಲ್ಲೆಯ ೫ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳಾಗಿ ಘೋಷಣೆ ಮಾಡಿದ್ದು, ಜಿಲ್ಲೆಯ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದAತೆ ಜಿಲ್ಲಾಡಳಿತದ ಸಹಕಾರದೊಂದಿಗೆ ಎಲ್ಲಾ ಮುಂಜಾಗ್ರತಾ ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ ೨೦ನೇ ಜಾನುವಾರು ಗಣತಿಯ ಪ್ರಕಾರ ೭೬೯೨೦ ಜಾನುವಾರುಗಳು ೮೫೫೩ ಕುರಿ ಮತ್ತು ಮೇಕೆಗಳಿದ್ದು, ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಮೇವಿನ ಕೊರತೆ ಕಂಡುಬAದಿಲ್ಲ. ಮುಂಜಾಗ್ರತಾ ಕ್ರಮವಾಗಿ ಮೇವಿನ ಕೊರತೆ ಉಂಟಾಗದAತೆ ಮೇವಿನ ಬೀಜಗಳ ೪೭೬ ಎಟಿಎಂ ಹಾಗೂ ೩೦೯ ಸರ‍್ಗಂ ಮಿನಿ ಕಿಟ್‌ಗಳನ್ನು ಆಸಕ್ತ ನೀರಾವರಿ ಸೌಲಭ್ಯ ಇರುವ ಜಾನುವಾರು ಹೊಂದಿದ ರೈತರಿಗೆ ಮಡಿಕೇರಿ, ಮೇ ೭: ಕೊಡಗು ಜಿಲ್ಲೆಯ ೫ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳಾಗಿ ಘೋಷಣೆ ಮಾಡಿದ್ದು, ಜಿಲ್ಲೆಯ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದAತೆ ಜಿಲ್ಲಾಡಳಿತದ ಸಹಕಾರದೊಂದಿಗೆ ಎಲ್ಲಾ ಮುಂಜಾಗ್ರತಾ ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ ೨೦ನೇ ಜಾನುವಾರು ಗಣತಿಯ ಪ್ರಕಾರ ೭೬೯೨೦ ಜಾನುವಾರುಗಳು ೮೫೫೩ ಕುರಿ ಮತ್ತು ಮೇಕೆಗಳಿದ್ದು, ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಮೇವಿನ ಕೊರತೆ ಕಂಡುಬAದಿಲ್ಲ. ಮುಂಜಾಗ್ರತಾ ಕ್ರಮವಾಗಿ ಮೇವಿನ ಕೊರತೆ ಉಂಟಾಗದAತೆ ಮೇವಿನ ಬೀಜಗಳ ೪೭೬ ಎಟಿಎಂ ಹಾಗೂ ೩೦೯ ಸರ‍್ಗಂ ಮಿನಿ ಕಿಟ್‌ಗಳನ್ನು ಆಸಕ್ತ ನೀರಾವರಿ ಸೌಲಭ್ಯ ಇರುವ ಜಾನುವಾರು ಹೊಂದಿದ ರೈತರಿಗೆ ಸಹಾಯಕ ನಿರ್ದೇಶಕರು ಪಶುವೈದ್ಯ ಆಸ್ಪತ್ರೆ ಮಡಿಕೇರಿ ೯೪೪೮೬೪೭೨೭೬, ಸಹಾಯಕ ನಿರ್ದೇಶಕರು ಪಶುವೈದ್ಯ ಆಸ್ಪತ್ರೆ ಸೋಮವಾರಪೇಟೆ ೯೪೪೮೫೯೭೪೯೬, ಸಹಾಯಕ ನಿರ್ದೇಶಕರು ಪಶುವೈದ್ಯ ಆಸ್ಪತ್ರೆ ಕುಶಾಲನಗರ ೯೪೪೮೪೨೨೨೬೯, ಸಹಾಯಕ ನಿರ್ದೇಶಕರು ಪಶುವೈದ್ಯ ಆಸ್ಪತ್ರೆ ವೀರಾಜಪೇಟೆ ೯೧೪೧೦೯೩೯೯೬, ಸಹಾಯಕ ನಿರ್ದೇಶಕರು ಪಶುವೈದ್ಯ ಆಸ್ಪತ್ರೆ ಪೊನ್ನಂಪೇಟೆ ೯೪೮೦೬೧೬೭೧೭ ಅವರನ್ನು ಸಂಪರ್ಕಿಸಿ ತಮ್ಮ ಆಧಾರ್ ಕಾರ್ಡ್, ಆರ್‌ಟಿಸಿ ಹಾಗೂ ಫ್ರೂಟ್ ಐಡಿ ಪ್ರತಿಗಳನ್ನು ಸಲ್ಲಿಸಿ ಮೇವಿನ ಕಿರು ಪೊಟ್ಟಣಗಳನ್ನು ಪಡೆಯ ಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.