ವಿಶ್ವ ರೆಡ್‌ಕ್ರಾಸ್ ಮತ್ತು ರೆಡ್‌ಕ್ರೆಸೆಂಟ್ ದಿನವನ್ನು ಪ್ರತಿವರ್ಷ ಮೇ ೮ ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ಸಂಸ್ಥೆಯನ್ನು ಸ್ವಿಡ್ಜರ್ಲೆಂಡ್ ದೇಶದ ಜೀನ್ ಹೆನ್ರಿಡ್ಯೂನಾಂಟ್‌ರವರು ೧೮೬೩ರಲ್ಲಿ ಜಿನೀವಾದಲ್ಲಿ ಸ್ಥಾಪಿಸಿದರು. ಇವರ ಜನ್ಮ ದಿನವಾದ ಮೇ ೮ ರಂದು ಆಚರಿಸಲಾಗುತ್ತದೆ.

ರೆಡ್‌ಕ್ರಾಸ್‌ನ ಮೂಲ ತತ್ವಗಳು

ಮಾನವೀಯತೆ, ನಿಷ್ಪಕ್ಷಪಾತ, ತಟಸ್ಥ ಸ್ವತಂತ್ರ, ಸ್ವಯಂಸೇವೆ, ಏಕತೆ, ವಿಶ್ವವ್ಯಾಪಕತೆ ಭಾರತದಲ್ಲಿ ೧೮೨೦ ರಲ್ಲಿ ರೆಡ್‌ಕ್ರಾಸ್ ಸಂಸ್ಥೆಯು ಸಂವಿಧಾನದ ೧೫ನೇ ಪರಿಚ್ಛೇದದ ಅಡಿಯಲ್ಲಿ ಸ್ಥಾಪಿಸಲ್ಪಟ್ಟಿತು. ಕರ್ನಾಟಕದಲ್ಲು ೧೯೨೧ ರಲ್ಲಿ ಸ್ಥಾಪನೆಯಾಯಿತು. ಯುದ್ಧಗಳಿಂದ ಗಾಯಗೊಂಡ ಸೈನಿಕರುಗಳಿಗೆ ಉಪಚರಿಸುವುದು, ಸಂತ್ರಸ್ತರ ನೋವು ಕಡಿಮೆ ಮಾಡುವುದು, ಆರೋಗ್ಯ ಕಾರ್ಯಕ್ರಮಗಳು, ರಕ್ತದಾನ ಶಿಬಿರಗಳನ್ನು ನಡೆಸುವುದು ಹಾಗೂ ರಕ್ತ ಗುಂಪುಗಳನ್ನು ಮಾಡುವುದು, ಪ್ರವಾಹ, ಕ್ಷಾಮ, ಭೂಕಂಪಕ್ಕೊಳಗಾದವರಿಗೆ ಸಹಾಯ ಮಾಡುವುದು, ಸಂತ್ರಸ್ತರಿಗೆ ಕುಡಿಯುವ ನೀರು, ಆಹಾರ, ಔಷಧಿಗಳು, ಬಟ್ಟೆ ಬರೆಗಳ ಪೂರೈಕೆ, ಅಂಗವಿಕಲರಿಗೆ ಸಹಾಯ ಹಸ್ತವನ್ನು ನೀಡುವುದು ಮತ್ತು ಸಾರ್ವಜನಿಕರಿಗೆ ಉಪಯುಕ್ತ ಇಂತಹ ಹಲವಾರು ಚಟುವಟಿಕೆಗಳನ್ನು ನಡೆಸುವುದು ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿದೆ.

ಭಾರತದ ರೆಡ್‌ಕ್ರಾಸ್ ಸಂಸ್ಥೆಗೆ ಭಾರತದ ರಾಷ್ಟçಪತಿಗಳು ಅಧ್ಯಕ್ಷರಾಗಿದ್ದು, ರಾಜ್ಯ ಶಾಖೆಗೆ ರಾಜ್ಯಪಾಲರು, ಜಿಲ್ಲಾ ಶಾಖೆಗೆ ಜಿಲ್ಲಾಧಿಕಾರಿಗಳು, ತಾಲೂಕು ಶಾಖೆಗೆ ತಹಶೀಲ್ದಾರರು ಅಧ್ಯಕ್ಷರಾಗಿರುತ್ತಾರೆ. ಭಾರತದ ನಾಗರಿಕರು ನಿಗದಿತ ಶುಲ್ಕ ನೀಡುವ ಮೂಲಕ ರೆಡ್‌ಕ್ರಾಸ್ ಸಂಸ್ಥೆಯ ಸದಸ್ಯರಾಗಬಹುದು ಮತ್ತು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಬಹುದು.

ರೆಡ್‌ಕ್ರಸ್ ಲಾಂಛನ

ಜಿನೀವಾ ಒಪ್ಪಂದದ ಅನ್ವಯ ೧೮೯೪ರಲ್ಲಿ ಅಂಗೀಕರಿಸಿರುವ ಬಿಳುಪಿನ ಹಿನ್ನೆಲೆಯಲ್ಲಿ ಕೆಂಪುಕ್ರಾಸ್ ಲಾಂಛನವನ್ನು ಭಾರತದಲ್ಲಿ ಉಪಯೋಗಿಸಲಾಗುತ್ತಿದೆ. ಈ ಲಾಂಛನವನ್ನು ಬೇರೆಯವರು ಉಪಯೋಗಿಸಿದರೆ, ಶಿಕ್ಷಾರ್ಹ ಅಪರಾಧವಾಗುವುದು. ಪ್ರಪಂಚದಲ್ಲಿ ರೆಡ್‌ಕ್ರಾಸ್ ಸಂಸ್ಥಾಪಕರು ಸೇರಿದಂತೆ ಒಟ್ಟು ನಾಲ್ಕು ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಏಕೈಕ ಸಂಸ್ಥೆ ರೆಡ್‌ಕ್ರಾಸ್ ನಿಸ್ವಾರ್ಥ ಸೇವೆಗೆ ಸಂದ ಗೌರವ ಎಂದು ಬಣ್ಣಿಸಬಹುದಾಗಿದೆ.

‘ನಾನು ಸಂತೋಷದಿAದ ಕೊಡುತ್ತೇನೆ ಮತ್ತು ನಾನು ನೀಡುವುದರಲ್ಲಿ ಸಂತೋಷವು ಪ್ರತಿಫಲವಾಗಿದೆ’ ಎಂಬುದು ಈ ವರ್ಷದ ಘೋಷ ವಾಕ್ಯವಾಗಿದೆ.

- ಬಿ.ಯು. ಯಶೋಧ, ಶ್ರೀಮಂಗಲ.