ಗೋಣಿಕೊಪ್ಪ ವರದಿ, ಮೇ ೮: ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ೧೦ ತಂಡಗಳು ಗೆಲುವು ಸಾಧಿಸಿವೆ.

ಕಾಂಡೇರಕ್ಕೆ ಚೀಕಂಡ ವಿರುದ್ದ ೩೪ ರನ್‌ಗಳ ಗೆಲುವು ದಕ್ಕಿತು. ಕಾಂಡೇರ ೨ ವಿಕೆಟ್ ಕಳೆದುಕೊಂಡು ೧೧೦ ರನ್ ದಾಖಲಿಸಿತು. ಚೀಕಂಡ ೪ ವಿಕೆಟ್ ಕಳೆದುಕೊಂಡು ೭೭ ರನ್ ಗಳಿಸಿ ಸೋಲಿಗೆ ಶರಣಾಯಿತು. ಕಾಂಡೇರ ಅಕ್ಷಯ್ ೫೬ ರನ್, ತರುಣ್ ೨೧, ಚೀಕಂಡ ತಜು ೩೮ ರನ್ ಹೊಡೆದರು.

ಮುಕ್ಕಾಟೀರ (ಕುಂಜಿಲಗೇರಿ) ತಂಡವು ತಾಚಮಂಡವನ್ನು ೬ ವಿಕೆಟ್‌ಗಳಿಂದ ಸೋಲಿಸಿತು. ತಾಚಮಂಡ ೭ ವಿಕೆಟ್ ನಷ್ಟಕ್ಕೆ ೬೬ ರನ್, ಮುಕ್ಕಾಟೀರ ೪ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ತಾಚಮಂಡ ಸಾಗರ್ ಮತ್ತು ಸಚಿನ್ ತಲಾ ೧೪ ರನ್, ಮುಕ್ಕಾಟೀರ ದೇವ್ ಚಂಗಪ್ಪ ೨೩ ರನ್ ದಾಖಲಿಸಿದರು.

ಮಲ್ಚೀರ ತಂಡವು ದೇಯಂಡ ವಿರುದ್ದ ೬ ವಿಕೆಟ್‌ಗಳಿಂದ ಗೆದ್ದು ಬೀಗಿತು. ದೇಯಂಡ ೬ ವಿಕೆಟ್ ನಷ್ಟಕ್ಕೆ ೮೧ ರನ್, ಮಲ್ಚೀರ ೪ ವಿಕೆಟ್ ಕಳೆದುಕೊಂಡು ೮೨ ರನ್ ದಾಖಲಿಸಿತು. ದೇಯಂಡ ಸಂಜಿತ್ ೨೮ ರನ್, ಮಲ್ಚೀರ ಹರ್ಷ ೨೭ ರನ್, ಶಾನ್ ಬೋಪಯ್ಯ ೨ ವಿಕೆಟ್ ಕಬಳಿಸಿದರು.

ಮಚ್ಚಮಾಡಕ್ಕೆ ಕೂತಂಡ ವಿರುದ್ದ ೭ ವಿಕೆಟ್ ಜಯ ಸಿಕ್ಕಿತು. ಕೂತಂಡ ೫ ವಿಕೆಟ್ ಕಳೆದುಕೊಂಡು ೭೭ ರನ್ ಗುರಿ ನೀಡಿತು. ಮಚ್ಚಮಾಡ ೪.೨ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೭೮ ರನ್ ದಾಖಲಿಸಿತು. ಕೂತಂಡ ಸೂರಜ್ ಉತ್ತಪ್ಪ ೨೭ ರನ್, ಮಚ್ಚಮಾಡ ದರ್ಶನ್ ೩೯ ರನ್, ಕೂತಂಡ ಐಯಣ್ಣ ೩ ವಿಕೆಟ್ ಪಡೆದರು.

ಮುದ್ದಿಯಡ ತಂಡವು ಮಲ್ಲಂಡವನ್ನು ೮ ವಿಕೆಟ್‌ಗಳಿಂದ ಸೋಲಿಸಿತು. ಮಲ್ಲಂಡ ೫ ವಿಕೆಟ್ ಕಳೆದುಕೊಂಡು ೭೪ ರನ್, ಮುದ್ದಿಯಡ ೬ ಓವರ್‌ಗಳಲ್ಲಿ ೨ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಮಲ್ಲಂಡ ಮದನ್ ೨೩ ರನ್, ಮುದ್ದಿಯಡ ದಿಶಾನ್ ೧ ವಿಕೆಟ್, ರತೀಶ್ ೨೪, ನಿದೀಶ್ ೨೨ ರನ್ ಹೊಡೆದರು.

ಮಣವಟ್ಟೀರಕ್ಕೆ ಮುಕ್ಕಾಟೀರ (ಕುಂಬದಾಳ್) ವಿರುದ್ಧ ೫ ವಿಕೆಟ್ ಜಯ ದೊರೆಯಿತು. ಮುಕ್ಕಾಟೀರ ೫ ವಿಕೆಟ್ ನಷ್ಟಕ್ಕೆ ೭೬ ರನ್, ಮಣವಟ್ಟೀರ ೫ ಚೆಂಡು ಉಳಿದಿರುವಂತೆ ೫ ವಿಕೆಟ್ ಕಳೆದುಕೊಂಡು ಪಂದ್ಯ ಗೆದ್ದುಕೊಂಡಿತು. ಮುಕ್ಕಾಟೀರ ಲೋಸಿತ್ ೪೬ ರನ್, ಮಣವಟ್ಟೀರ ದೀಪಕ್ ೩ ವಿಕೆಟ್ ಪಡೆದು, ೩೭ ರನ್ ದಾಖಲಿಸಿದರು.

ಕಳಕಂಡ ಐಚಂಡ ವಿರುದ್ದ ೯ ವಿಕೆಟ್‌ಗಳಿಂದ ಗೆದ್ದು ಬೀಗಿತು. ಐಚಂಡ ೧ ವಿಕೆಟ್ ನಷ್ಟಕ್ಕೆ ೮೭ ರನ್, ಕಳಕಂಡ ೪.೨ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು. ಕಳಕಂಡ ಬಬ್ಲಿ ೨೯ ರನ್ ಬಾರಿಸಿದರು.

ಆಟ್ರಂಗಡವು ಬದಲೇರವನ್ನು ೮ ವಿಕೆಟ್‌ಗಳಿಂದ ಮಣಿಸಿತು. ಬದಲೇರ ೭ ವಿಕೆಟ್‌ಗೆ ೫೨ ರನ್, ಆಟ್ರಂಗಡ ೩.೨ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ಬದಲೇರ ಶ್ಯಾಮ್ ೧೪ ರನ್, ಆಟ್ರಂಗಡ ಶಲತ್ ೪೪ ರನ್ ಗಳಿಸಿದರು.

ಚಿರಿಯಪಂಡಕ್ಕೆ ಚಿಂಡಮಾಡ ವಿರುದ್ದ ೯ ವಿಕೆಟ್ ಗೆಲುವು ದೊರೆಯಿತು. ಚಿಂಡಮಾಡ ೬ ವಿಕೆಟ್ ಕಳೆದುಕೊಂಡು ೧೦೪ ರನ್‌ಗಳ ಬೃಹತ್ ಗುರಿ ನೀಡಿತು. ಚಿರಿಯಪಂಡ ದೀಪಕ್ ೭೦ ರನ್ ಸಿಡಿಸಿ ಕೇವಲ ೧ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.

ಉಳುವಂಗಡಕ್ಕೆ ಅತಿಥೇಯ ಅರಮಣಮಾಡ ವಿರುದ್ಧ ೭ ವಿಕೆಟ್‌ಗಳ ಗೆಲುವು ದೊರೆಯಿತು. ಅರಮಣಮಾಡ ೫ ವಿಕೆಟ್ ನಷ್ಟಕ್ಕೆ ೬೬ ರನ್, ಉಳುವಂಗಡ ೩ ವಿಕೆಟ್ ನಷ್ಟಕ್ಕೆ ಗೆಲುವು ಪಡೆದುಕೊಂಡಿತು. ಅರಮಣಮಾಡ ನವೀನ್ ೨೩ ರನ್, ಉಳುವಂಗಡ ಲೋಹಿತ್ ೨೭ ರನ್ ದಾಖಲಿಸಿದರು.

ಚೀಕಂಡ ತಜು, ತಾಚಮಂಡ ಸಾಗರ್, ದೇಯಂಡ ಸಂಜಿತ್, ಕೂತಂಡ ಅಯ್ಯಣ್ಣ, ಮಲ್ಲಂಡ ಮದನ್, ಮುಕ್ಕಾಟೀರ ಲೋಸಿತ್, ಐಚಂಡ ಮಿಥುನ್, ಬದಲೇರ ಶ್ಯಾಮ್, ಚಿಂಡಮಾಡ ಚೇತನ್, ಅರಮಣಮಾಡ ನವೀನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.