ಪ್ರಸಕ್ತ ೨೦೨೩-೨೪ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ‘ಫಾಸ್ಟ್ ಟ್ಯಾಗ್’ ಅಳವಡಿಸಿರುವುದು ಸ್ವಾಗತಾರ್ಹವೇ ಆದರೂ, ಸರಕಾರದ ಈ ನಡೆಯು ‘ಗುಬ್ಬಿಯ ಮೇಲೆ ಬ್ರಹ್ಮಾಸ್ತç ಪ್ರಯೋಗಿಸಿದಂತೆ’ ಎಂಬ ಗಾದೆಯನ್ನು ನೆನಪಿಸುತ್ತದೆ. ಈ ಗಾದೆಯ ಮೂಲಕೌಶಿಕನೆಂಬ ಋಷಿಯು ತನ್ನ ಮೈಮೇಲೆ ಹಿಕ್ಕೆ ಹಾಕಿದಂತಹ ಗುಬ್ಬಿ ಹಕ್ಕಿಯನ್ನು ದುರುಗುಟ್ಟಿ ನೋಡಿದಾಗ ಅದು ಸುಟ್ಟು ಭಸ್ಮವಾಗಿ ಕೆಳಗೆ ಬಿದ್ದಾಗ, ತನ್ನ ತಪಃ ಶಕ್ತಿಯ ಬಗ್ಗೆ ಅಹಂನಿAದ ಬೀಗಿದ ಅವಿವೇಕಿ ಕೌಶಿಕ ಮಹರ್ಷಿಯ ಕತೆ ಸಾಮಾನ್ಯವಾಗಿ ಎಲ್ಲರೂ ಕೇಳಿರಬಹುದು.

ಹೇಗೆಂದರೆ ಇಂದಿನ ಶೈಕ್ಷಣಿಕ ಪದ್ಧತಿಯ ಉದಾರೀತನ ಎಷ್ಟೊಂದು ಹಾಸ್ಯಾಸ್ಪದವಾಗಿದೆಯೆಂದರೆ, ಕನ್ನಡ ಮಾಧ್ಯಮದ ಸರಕಾರಿ ಅಥವಾ ಖಾಸಗಿ ಶಾಲೆಗಳಿರಲಿ, ಒಂದನೇ ತರಗತಿಯಿಂದ ೯ನೇ ತರಗತಿಯ ತನಕ ನಾಪಾಸು ಅಥವಾ ಫೇಲ್ ಎಂಬ ಮಾತೇ ಇಲ್ಲ. ಆ ವಿದ್ಯಾರ್ಥಿಯು ಹೆಚ್ಚಿನ ಗೈರು ಹಾಜರಿಯಿದ್ದರೂ ಅಥವಾ ಶಾಲೆಗೆ ಹಾಜರಾಗದೇ ಇದ್ದರೂ ಕೇವಲ ಪರೀಕ್ಷೆಗೆ ಹಾಜರಾಗಿ ಏನೋ ಬರೆದು ಹಾಕಿ ಶೂನ್ಯ ಅಥವಾ ತುಂಬಾ ಕಡಿಮೆ ಅಂಕ ಪಡೆದು ಓದಲು - ಬರೆಯಲು ಬಾರದಿದ್ದರೂ ಆತನನ್ನು ಪಾಸು ಮಾಡಲೇಬೇಕು. ಸ್ಯಾಟ್ಸ್ ಮೂಲಕ ಆತನು ಮುಂದಕ್ಕೆ ಹೋಗುತ್ತಾ ಇರುತ್ತಾನೆ. ಇದೇ ರೀತಿಯಲ್ಲಿ ಮಗುವನ್ನು ಅರಗಿಣಿಯಂತೆ ಮುದ್ದಿನಿಂದ ಎತ್ತಿಕೊಂಡು ಬಂದು, ಮುಂದೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ‘ಫಾಸ್ಟ್ ಟ್ಯಾಗ್’ ಎಂಬ ಬ್ರಹ್ಮಾಸ್ತç ಅಳವಡಿಸಿದಾಗ, ನಾಪಾಸ್ ಅಥವಾ ಅನುತ್ತೀರ್ಣನೆಂಬ ಹೊಂಡಕ್ಕೆ ಆತನು ತಳ್ಳಲ್ಪಡುತ್ತಾನೆ. ದೈನಂದಿನ ಪರೀಕ್ಷೆಗೆ ಬಾರದಿರುವ ಆ ಮಗುವು ಮುಖ್ಯವಾಗಿ ಅನಕ್ಷರಸ್ಥ ಪೋಷಕರ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು, ಪರಿಹಾರ ಬೋಧನೆಗೆ ಬರುತ್ತದೆಯೋ ಇಲ್ಲ. ಅದಕ್ಕೆ ಗೊತ್ತಿದೆ ನಾನು ಹೇಗಾದರೂ ಪಾಸು ಎಂದು.

ಇAದು ಶಾಲೆಗಳಲ್ಲಿ ಉಚಿತವಾಗಿ ಎಲ್ಲಾ ಸೌಕರ್ಯಗಳಿದ್ದರೂ, ಶಾಲೆಗೆ ಗೈರು ಹಾಜರಾದಾಗ ಮಗುವಾಗಲೀ, ಪೋಷಕರಾಗಲೀ ಶಿಕ್ಷಕರಿಗೆ ಫೋನ್ ಮಾಡಿ, ತಿಳಿಸುವ ಕನಿಷ್ಟ ಜವಾಬ್ದಾರಿಯನ್ನೂ, ಕಾಳಜಿಯನ್ನೂ ಅವರು ಹೊಂದಿರುವುದಿಲ್ಲ.

ಅನುತ್ತೀರ್ಣರಾಗುವAತಹ ಅಂತಹಾ ಮಕ್ಕಳು ಅತ್ತ-ಇತ್ತ ಸುತ್ತಾಡುತ್ತಾ, ಆಟವಾಡುತ್ತಾ, ಮಾದಕ ಪದಾರ್ಥಗಳನ್ನು ಬಾಯಿಗೆ ಹಾಕಿಕೊಂಡು, ತಮ್ಮದೇ ಆದ ಗುಂಪುಗಳನ್ನು ಕಟ್ಟಿಕೊಂಡು ಸಮಾಜಘಾತುಕ ಶಕ್ತಿಯಾಗಿ ಪರಿಣಮಿಸುತ್ತಾರೆ. ಈಗ ಆ ಮಗುವಿನ ಜೀವನವು ‘ಅರಗಿಣಿಯ ಮೇಲೆ ಬ್ರಹ್ಮಾಸ್ತç’ ಪ್ರಯೋಗಿಸಿದಂತೆ ಆಗುವುದಿಲ್ಲವೇ?

ಇದಕ್ಕೆ ಬದಲಾಗಿ ಈ ಹಿಂದಿನ ಪದ್ಧತಿಯಂತೆ ನಿಯಮಿತವಾಗಿ ಶಾಲೆಗೆ ಬಂದು ಶೇ. ೭೫ ಹಾಜರಾತಿಯನ್ನು ಎಸ್.ಎಸ್.ಎಲ್.ಸಿ. ತರಗತಿಯ ನಿಯಮದಂತೆ ಹೊಂದಿದ್ದು, ಪರೀಕ್ಷೆಯಲ್ಲಿ ಸರಿಯಾಗಿ ಬರೆದು ಪಾಸಾಗುವಂತಹ ಮಗುವು ಮುಂದಿನ ತರಗತಿಗೆ ಅರ್ಹನಾಗಬೇಕು. ಅಥವಾ ಅದೇ ತರಗತಿಯಲ್ಲಿ ಎರಡು ವರ್ಷ ಓದಿ, ಈ ಹಿಂದಿನAತೆ ಪಾಸಾಗುವವರೂ ಇದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೂ, ಪೋಷಕರಿಗೂ ಶಾಲೆಯ ಬಗ್ಗೆ ಭಯ-ಭಕ್ತಿ-ಗೌರವ ಮೂಡುವುದಲ್ಲದೆ, ಶಾಲೆಯು ತನ್ನ ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಂಡು ತನ್ನ ಘನತೆ-ಗೌರವ, ಶಿಸ್ತನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಕೆಲವು ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳು, ಸ್ಯಾಟ್ಸ್ ಮೂಲಕ ಪಾಸಾಗುತ್ತಾ ಬಂದವರು, ಮನಬಂದಾಗ ತರಗತಿಗೆ ಹಾಜರಾಗುವುದು, ‘ಹೋಂ ವರ್ಕ್’ ಮಾಡದೆ ಧೈರ್ಯದಿಂದ, ಆಶಿಸ್ತಿನಿಂದ ವರ್ತಿಸುವುದು ಕಂಡಾಗ ಇತರ ವಿದ್ಯಾರ್ಥಿಗಳೂ ಆತನನ್ನೇ ಅನುಸರಿಸುವ ಸಂದರ್ಭ ಒದಗಿ ಬರುತ್ತದೆ. ಈ ರೀತಿಯ ವಿದ್ಯಾರ್ಥಿಗಳ ನಡವಳಿಕೆ, ತರಗತಿಯ ಶಿಸ್ತಿಗೂ, ಶಿಕ್ಷಕರ ಆತ್ಮಗೌರವಕ್ಕೂ ಪೆಟ್ಟಾಗುವ ಸನ್ನಿವೇಶವು, ಇಂದಿನ ಮಕ್ಕಳೇ ಮುಂದಿನ ಜನಾಂಗವೆAಬ ಗಾದೆಯಂತೆ, ದೇಶದ ಬೌದ್ಧಿಕ ಹಾಗೂ ನೈತಿಕ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ವೀಕ್ಷಿಸಿದಾಗ, ಕಳಾಹೀನರಾದ, ನಿಸ್ತೇಜರಾದ ಯುವಕರನ್ನು, ದೇಶಕ್ಕೆ, ಶಿಕ್ಷಕರು ಕೊಡುಗೆ ನೀಡಿದಂತೆ, ಅತೃಪ್ತಿಕರವಾದ ಮಾನಸಿಕ ಗೊಂದಲವನ್ನು ಶಿಕ್ಷಕರು ಅನುಭವಿಸಬೇಕಾಗುತ್ತದೆ.

‘ಜ್ಞಾನ ದೇಗುಲವಿದು, ಕೈಮುಗಿದು ಒಳಗೆ ಬಾ’ ಎಂದು ವಿದ್ಯಾರ್ಥಿಗಳಿಗೆ ನೀಡುವ ಈ ಸಂದೇಶವು ಅದಲು ಬದಲಾಗಿ, ಶಿಕ್ಷಕರೇ ವಿದ್ಯಾರ್ಥಿಗಳ ಮನೆಗೆ ಹೋಗಿ ಕೈಮುಗಿದು ಕರೆತರುವಂತಹ ಸನ್ನಿವೇಶ ಎದುರಾಗಿದೆ. ಆದರೆ ಆ ಮಗುವು ಶಾಲೆಗೆ ಹೋಗದಿದ್ದರೂ ಹೋಂ ವರ್ಕ್ ಮಾಡದಿದ್ದರೂ, ತಾನಂತೂ ಪಾಸಾಗುವೆನೆಂಬ ಭಾವನೆಯಿಂದ ಪರೀಕ್ಷೆಯ ದಿನಗಳಲ್ಲಿ ಮಾತ್ರ ತಪ್ಪದೇ ಹಾಜರಾಗುತ್ತಿರುವುದು ಕಂಡುಬರುತ್ತಾ ಇದೆ. ಇದು ಶೈಕ್ಷಣಿಕ ಸಂಸ್ಥೆಗಳ ಪಾವಿತ್ರö್ಯಕ್ಕೆ, ಗೌರವಕ್ಕೆ ಧಕ್ಕೆಯಾಗುತ್ತಾ ಇದೆ.

ಆದರೂ ಶಿಕ್ಷಕರು ಮಗುವಿನ ಮನೆಯ ವಾತಾವರಣ, ಮಗುವಿನ ಮಾನಸಿಕ ಮಟ್ಟ, ಪೋಷಕರ ಅಸಹಕಾರ ಎಲ್ಲವನ್ನೂ ಅರಿತುಕೊಂಡು, ಆ ಮಗುವು ಹೇಗಾದರೂ ಮಾಡಿ ಎಸ್.ಎಸ್.ಎಲ್.ಸಿ. ಪಾಸುಮಾಡಿಕೊಂಡರೆ ಮುಂದಕ್ಕೆ ತಿಳುವಳಿಕೆ ಪಡೆದುಕೊಳ್ಳುವಾಗ, ಐ.ಟಿ.ಐ. ನಂತಹ ಸಣ್ಣಪುಟ್ಟ ಇತರ ಕೌಶಲ್ಯಗಳನ್ನು ಪಡೆದುಕೊಂಡು ತನ್ನ ಬದುಕನ್ನು ರೂಪಿಸಿಕೊಳ್ಳಲಿ ಎನ್ನುವುದು ಸದುದ್ದೇಶ. ಒಂದು ಡ್ರೆöÊವಿಂಗ್ ಲೈಸೆನ್ಸ್ ಪಡೆದುಕೊಳ್ಳಲೂ ಎಸ್.ಎಸ್.ಎಲ್.ಸಿ. ಸರ್ಟಿಫಿಕೇಟ್ ಬೇಕು. ಅದಕ್ಕಾಗಿ ಪರಿಚಯವೇ ಇಲ್ಲದ ಬೇರೆ ಯಾವುದೋ ಜಿಲ್ಲೆಯ ಯಾವುದೋ ಶಾಲೆಯ ವಿದ್ಯಾರ್ಥಿಯ ಉತ್ತರ ಪತ್ರಿಕೆಯಲ್ಲಿ ಎಸ್.ಎಸ್.ಎಲ್.ಸಿ. ಮೌಲ್ಯ ಮಾಪನ ಮಾಡುವಾಗ ಉದಾರತೆಯನ್ನು ಮೆರೆದು, ಕೆಲವು ಅಂಕಗಳನ್ನು ಹೇಗಾದರೂ ಮಾಡಿ ಸೇರಿಸಿ, ಪಾಸು ಮಾಡುವಂತಹ ಶಿಕ್ಷಕರ ಸಾಮಾಜಿಕ ಪ್ರಜ್ಞೆಯು, ಕಳಕಳಿ, ಕಾಳಜಿಯು ಕಲಿಕೆಯಲ್ಲಿ ಹಿಂದುಳಿದ ಎಷ್ಟೋ ವಿದ್ಯಾರ್ಥಿಗಳ ಪಾಲಿಗೆ ವರದಾನವಾದದ್ದಂತೂ ನಿಜ. ಶೈಕ್ಷಣಿಕ ಪಠ್ಯ ಬೋಧನೆಯಲ್ಲಿ ಅಭಿರುಚಿ, ಆಸಕ್ತಿ, ಕುತೂಹಲಕಾರಿಯಾಗಿಸುವುದು ಈ ಮಾನದಂಡಗಳು ಆ ವಯಸ್ಸಿನಲ್ಲಿ ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಫಲಿಸುವುದು ಕಷ್ಟ.

ಒಬ್ಬ ಸರಕಾರಿ ಬಸ್ ಕಂಡಕ್ಟರ್‌ನ ಹೇಳಿಕೆಯಂತೆ ನಾನು ತರಗತಿಯಲ್ಲಿ ಹಿಂದಿನ ಬೆಂಚ್‌ನಲ್ಲಿ ಕುಳಿತು ಮಾತನಾಡುತ್ತಿದ್ದೆ. ಅಂತೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೇಗೋ ಏನೋ ನನ್ನನ್ನು ಜಸ್ಟ್ ಪಾಸು ಮಾಡಿದರು. ಈಗ ನಾನು ಬಸ್ ಕಂಡಕ್ಟರ್ ಆಗಿದ್ದೇನೆ ಎಂಬ ಧನ್ಯತೆಯ ಭಾವವು, ಅಂದಿನ ಆ ಮಗುವಿನ ತಿಳುವಳಿಕೆಯ ಕೊರತೆಯ ಅಂದಿನ ಮುಗ್ಧತೆ ಹಾಗೂ ಇಂದಿನ ಮಾಗಿದ ಮನಸ್ಸಿನ, ಜವಾಬ್ದಾರಿತನದ, ಕೃತಜ್ಞತಾ ಸಮರ್ಪಣಾ ಭಾವಕ್ಕೆ ಸಾಕ್ಷಿಯಾಗಿದೆಯಲ್ಲವೇ?

- ರಾಜೇಶ್ವರಿ ಒ. ಕಾವಾಡಿ. ಮೊ. ೯೪೮೦೦೮೪೯೩೯.