ಸೋಮವಾರಪೇಟೆ, ಮೇ ೮: ಕಳೆದ ತಾ. ೫ ರಂದು ಸೋಮವಾರ ಪೇಟೆಯ ಕಲ್ಯಾಣ ಮಂಟಪವೊAದ ರಲ್ಲಿ ನಿಗದಿಯಾಗಿದ್ದ ಮದುವೆಯೊಂದು ಮುರಿದುಬಿದ್ದ ಘಟನೆಗೆ ಸಂಬA ಧಿಸಿದಂತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಸಹಿತ ಮಾನಹಾನಿ, ವಂಚನೆ ಪ್ರಕರಣ ದಾಖಲಾಗಿದೆ.

ತಾ. ೫ರಂದು ಸ್ಥಳೀಯ ಕಲ್ಯಾಣ ಮಂಟಪವೊAದರಲ್ಲಿ ತುಮಕೂರು ಜಿಲ್ಲೆಯ ಯುವಕ ಹರ್ಷಿತ್ ಹಾಗೂ ಪಟ್ಟಣ ಸಮೀಪದ ಹಾನಗಲ್ಲು ಸಿದ್ದಾರ್ಥ ಬಡಾವಣೆಯ ಯುವತಿ ಕೃತಿಕಾಳ ವಿವಾಹ ನಿಗದಿಯಾಗಿತ್ತು.

ಆದರೆ ತಾ. ೪ರ ರಾತ್ರಿ ಮದುವೆ ಮಂಟಪದಲ್ಲಿ ಸಿಹಿತಿಂಡಿ ಕೊಟ್ಟಿಲ್ಲ ಎಂದು ಊಟದ ವಿಚಾರದಲ್ಲಿ ಜಗಳ ಏರ್ಪಟ್ಟು, ಮಾರನೇ ದಿನ ಪೊಲೀಸ್ ಠಾಣೆಯ ಮೆಟ್ಟಿಲೇರಿ, ಮದುವೆಯೇ ಮುರಿದು ಬಿದ್ದ ಘಟನೆಯ ಹಿಂದೆ ವರದಕ್ಷಿಣೆಯ ಜಾಡು ಹರಡಿರುವುದು ತಡವಾಗಿ ತಿಳಿದುಬಂದಿದ್ದು, ಇದೀಗ ವಧುವಿನ ಪೋಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ, ವಿವರಣೆ ನೀಡುವ ಮೂಲಕ ಅಂತಿಮವಾಗಿ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಎಫ್‌ಐಆರ್ ದಾಖಲು ಮಾಡಲಾಗಿದೆ.

ಮದುವೆ ಮಾತುಕತೆಯಲ್ಲಿ ವರನಿಗೆ ವರದಕ್ಷಿಣೆಯಾಗಿ ೧೦೦ಗ್ರಾಂ ಚಿನ್ನ ಮತ್ತು ಬೆಂಗಳೂರಿನಲ್ಲಿ ರೂ.೧೦ಲಕ್ಷ ಮೌಲ್ಯದ ಸೈಟ್ ಹಾಗೂ ವಾಸಕ್ಕೆ ಅಪಾರ್ಟ್ಮೆಂಟ್‌ನಲ್ಲಿ ಒಂದು ಮನೆ ಕೊಡಿಸಬೇಕೆಂದು ಮಾತುಕತೆಯ ಸಂದರ್ಭದಲ್ಲಿ ವರನ ಕಡೆಯವರು ಕೇಳಿದ್ದರು ಎನ್ನಲಾಗಿದೆ.

ಆದರೆ ಮದುವೆಯ ಹಿಂದಿನ ದಿನ ನಿಶ್ಚಿತಾರ್ಥಕ್ಕೂ ಕೆಲ ಗಂಟೆಗಳ ಮುನ್ನ ವರನ ಕಡೆಯವರು ಚಿನ್ನ ಎಷ್ಟು ಬಂದಿದೆ ಎಂದು ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಈ ಸಂದರ್ಭ ೬೦ ಗ್ರಾಂ ಚಿನ್ನ ಮಾತ್ರ ಇದ್ದ ಹಿನ್ನೆಲೆಯಲ್ಲಿ ಮತ್ತು ೧೦ ಲಕ್ಷದ ಸೈಟ್ ಬೇಡಿಕೆಯನ್ನು ಈಡೇರಿಸದೇ ಇದ್ದುದರಿಂದ ವರನ ಕಡೆಯವರು ಮದುವೆಗೂ ಮುನ್ನವೇ ಕ್ಯಾತೆ ತೆಗೆದಿದ್ದಾರೆ ಎನ್ನಲಾಗಿದೆ.

ರೂ.೨೦ ಲಕ್ಷ ವೆಚ್ಚ ಮಾಡಿ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಲು ಸಿದ್ಧತೆ ನಡೆಸಿದ್ದ ವಧುವಿನ ಕಡೆಯವರು, ಸಿಹಿತಿಂಡಿಯAತಹ ಕ್ಷÄಲ್ಲಕ ಕಾರಣಕ್ಕಾಗಿ ವರನ ಕಡೆಯವರು ಇಷ್ಟೆಲ್ಲಾ ಅವಾಂತರ ಸೃಷ್ಟಿಸಿರುವುದನ್ನು ಕಂಡು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಗಳ ತಾರಕಕ್ಕೆ ಹೋಗಿ ಸೋಮವಾರಪೇಟೆ ಪೋಲಿಸ್ ಠಾಣೆ ಮೆಟ್ಟಿಲೇರಿದೆ.

ಇದಾದ ನಂತರ ವಧುವಿನ ಪೋಷಕರು, ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿ, ಘಟನೆಯ ಹಿನ್ನೆಲೆಗಳನ್ನು ಬಿಚ್ಚಿಟ್ಟಿದ್ದು, ಅವರ ಸೂಚನೆಯಂತೆ ನಿನ್ನೆ ರಾತ್ರಿ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ವರ ಹರ್ಷಿತ್ ಸೇರಿದಂತೆ ತಾಯಿ ಗೌರಮ್ಮ, ಸಹೋದರ ಸುಪ್ರೀತ್, ಅತ್ತಿಗೆ ಹೇಮಾವತಿ, ಸೋದರಮಾವ ಹನುಮಂತಪ್ಪ ಅವರುಗಳ ವಿರುದ್ಧ ವರದಕ್ಷಿಣೆ ಕಿರುಕುಳ, ಮಾನಹಾನಿ, ವಂಚನೆ ಸೆಕ್ಷನ್‌ಗಳಡಿ ಮೊಕದ್ದಮೆ ದಾಖಲಾಗಿದೆ.

ಮಹಿಳಾ ಆಯೋಗಕ್ಕೂ ದೂರು: ಅಂತಿಮ ಕ್ಷಣದಲ್ಲಿ ಮದುವೆ ರದ್ದುಗೊಳಿಸಿ ತೆರಳಿರುವ ಹರ್ಷಿತ್ ಹಾಗೂ ಸಂಬAಧಿಕರ ವಿರುದ್ಧ ರಾಜ್ಯ ಹಾಗೂ ರಾಷ್ಟç ಮಹಿಳಾ ಆಯೋಗಕ್ಕೂ ದೂರು ನೀಡಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಿ ಸೂಕ್ತ ನ್ಯಾಯ ಒದಗಿಸಿಕೊಡಬೇಕೆಂದು ಆಯೋಗವನ್ನು ಮನವಿ ಮಾಡಲಾಗಿದೆ ಎಂದು ಜಿಲ್ಲಾ ಪ್ರತಿನಿಧಿ ಅಶ್ವಿನಿ ಕೃಷ್ಣಕಾಂತ್ ತಿಳಿಸಿದ್ದಾರೆ.