ಮಡಿಕೇರಿ, ಮೇ ೮: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ‘ನೀರಿನ ಭದ್ರತೆಗಾಗಿ ಸುಸ್ಥಿರ ಅಂತರ್ಜಲ ನಿರ್ವಹಣೆ’ (ಸಸ್ಟೆöÊನೇಬಲ್ ಗ್ರೌಂಡ್ ವಾಟರ್ ಮ್ಯಾನೇಜ್‌ಮೆಂಟ್ ಫಾರ್ ವಾಟರ್ ಸೆಕ್ಯುರಿಟಿ) ಎಂಬ ವಿಷಯದ ಕುರಿತು ಜೂನ್ ೧೯ ರಿಂದ ಜೂನ್ ೨೧ ರವರೆಗೆ ಮೂರು ದಿನಗಳ ರಾಷ್ಟಿçÃಯ ಸಮ್ಮೇಳನ ನಡೆಯಲಿದೆ.

ಈ ಸಮ್ಮೇಳನದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳಿAದ ನುರಿತ ವಿಜ್ಞಾನಿಗಳು ವಿಷಯಾಧಾರಿತ ಉಪನ್ಯಾಸ ನೀಡಲಿದ್ದಾರೆ. ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಯುವ ವಿಜ್ಞಾನಿಗಳು ಭಾಗವಹಿಸಲು ಅವಕಾಶವಿದೆ. ಅಲ್ಲದೇ ಈ ಸಮ್ಮೇಳನದಲ್ಲಿ ರಿಸರ್ಚ್ ಪೇಪರ್ ಮಂಡಿಸಬಹುದಾಗಿದ್ದು, ಆಯ್ಕೆಯಾದ ರಿಸರ್ಚ್ ಪೇಪರ್‌ಗಳಿಗೆ ನಗದು ಬಹುಮಾನ ನೀಡಲಾಗುವುದು.

ಸಮ್ಮೇಳನದಲ್ಲಿ ಭಾಗವಹಿಸಲು ಜೂನ್ ೧೦ ರೊಳಗೆ ಗೂಗಲ್ ಫಾರ್ಮ್ (hಣಣಠಿs://ಜಿoಡಿms.gಟe/ಕಿಆಘಿಗಿ೬೪ಐಆibಈbಊಥಿಜಛಿ೯) ಮೂಲಕ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಕಾರ್ಯಕ್ರಮ ಸಂಯೋಜಕರು (ಮೊ. ೯೮೪೫೨೫೮೮೯೪ ಮತ್ತು ೯೭೪೩೦೮೪೧೯೪) ಅಥವಾ ಅಕಾಡೆಮಿಯ ವೆಬ್‌ಸೈಟ್ ತಿತಿತಿ.ಞsಣಚಿಛಿಚಿಜemಥಿ.iಟಿ ವೀಕ್ಷಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ. ರಮೇಶ್ ತಿಳಿಸಿದ್ದಾರೆ.