ಸಿದ್ದಾಪುರ, ಮೇ ೮: ಕಟ್ಟಿಗೆ ರಾಶಿಯ ಒಳಗಿದ್ದ ನಾಗರಹಾವನ್ನು ಸೆರೆ ಹಿಡಿಯುವಲ್ಲಿ ಉರಗ ರಕ್ಷಕ ನೌಫಲ್ ಯಶಸ್ವಿ ಯಾಗಿದ್ದಾರೆ.

ನೆಲ್ಲಿಹುದಿಕೇರಿ ಗ್ರಾಮದ ಕಿಶನ್ ಎಂಬವರು ಮನೆಯ ಬಳಿ ಇದ್ದ ಕಟ್ಟಿಗೆಯನ್ನು ಸ್ಥಳಾಂತರಿಸುವ ಸಂದರ್ಭ ಕಟ್ಟಿಗೆ ರಾಶಿಯ ಒಳಗೆ ನಾಗರಹಾವು ಕಂಡುಬAದಿದೆ. ಕೂಡಲೇ ಸ್ಥಳೀಯ ಉರಗ ರಕ್ಷಕ ನೌಫಲ್‌ಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಅಂದಾಜು ೫ ವರ್ಷ ಪ್ರಾಯದ ಹೆಣ್ಣು ನಾಗರಹಾವನ್ನು ರಕ್ಷಿಸಿ ಮಾಲ್ದಾರೆ ಅರಣ್ಯಕ್ಕೆ ಸ್ಥಳಾಂತರಿಸಿದ್ದಾರೆ. ಈ ಸಂದರ್ಭ ಉರಗ ರಕ್ಷಕ ನೌಫಲ್ ಮಾತನಾಡಿ, ಹವಾಮಾನ ವೈಪರಿತ್ಯದಿಂದ ಹಾವುಗಳು ತಂಪಾದ ವಾತಾವರಣವನ್ನು ಹುಡುಕುತ್ತವೆ. ಕಟ್ಟಿಗೆಗೂಡು, ಮನೆ ಹೊರಗಿನ ಶೆಡ್‌ಗಳಲ್ಲಿ ಹಾಗೂ ಕಿಟಕಿಗಳ ಮೂಲಕ ಮನೆಯ ಒಳಭಾಗಕ್ಕೂ ನುಗ್ಗುತ್ತವೆ. ಈ ಹಿನ್ನೆಲೆಯಲ್ಲಿ ಮನೆಯವರು ಎಚ್ಚರ ವಹಿಸಬೇಕೆಂದರು.