ಪೊನ್ನಂಪೇಟೆ, ಮೇ ೮: ಮೈಸೂರಿನ ಡಿ ಪಾಲ್ ಇಂಟ ರ್ನ್ಯಾಷನಲ್ ರೆಸಿಡೆನ್ಷಿಯಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಫೈವ್ ಎ ಸೈಡ್ ಹಾಕಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡ ಚಾಂಪಿ ಯನ್ ಪಟ್ಟ ಮುಡಿಗೇರಿಸಿಕೊಂಡಿದೆ.

ರಾಜ್ಯದ ವಿವಿಧ ಭಾಗಗಳಿಂದ ೧೯ ಕಾಲೇಜು ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡ, ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತಂಡದ ವಿರುದ್ಧ ೬- ೧ ಗೋಲುಗಳಿಂದ ಗೆಲುವು ಸಾಧಿಸಿದೆ. ಮೂರ್ನಾಡು ಪ್ರಥಮ ದರ್ಜೆ ಕಾಲೇಜು ರನ್ನರ್ಸ್ ಸ್ಥಾನ ಪಡೆದುಕೊಂಡಿದೆ. ಮೇಚಿಯಂಡ ನಾಣಯ್ಯ ನಾಯಕತ್ವದ ಕಾವೇರಿ ಕಾಲೇಜು ತಂಡದಲ್ಲಿ ಕುಪ್ಪಂಡ ಜಗತ್ ಬೆಳ್ಯಪ್ಪ, ಕೋಳೆರ ನಿಶಿಕ್ ನಾಚಪ್ಪ, ಬಲ್ಯಮೀದೇರಿರ ಧ್ಯಾನ್ ದೇವಯ್ಯ, ಬಿಲ್ಲರಿಕುಟ್ಟಡ ಕುಟ್ಟಪ್ಪ, ಚೋಡುಮಾಡ ನಿಖಿಲ್, ಮತ್ತು ಜಿ. ಟಿ. ಚಂಗಪ್ಪ ಭಾಗವಹಿಸಿದ್ದರು.

ಕಾವೇರಿ ಕಾಲೇಜಿನ ಜಿ.ಟಿ. ಚಂಗಪ್ಪ ಉತ್ತಮ ಗೋಲ್ ಕೀಪರ್, ಧ್ಯಾನ್ ದೇವಯ್ಯ ಹೆಚ್ಚು ಗೋಲುಗಳಿಸಿದ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ತರಬೇತುದಾರರಾಗಿ ಮಿನ್ನಂಡ ಜೋಯಪ್ಪ ಕಾರ್ಯನಿರ್ವಹಿಸಿದ್ದರು ಎಂದು ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ ತಿಳಿಸಿದ್ದಾರೆ.