ವೀರಾಜಪೇಟೆ, ಮೇ ೮: ಹೊಂಬೆಳಕು ಎಂಬುದು ಭಾಗವಹಿಸಿದ ಪ್ರತಿಯೊಬ್ಬರ ಮನಪರಿವರ್ತನೆ ಆಗುವಂತ ಕಾರ್ಯಕ್ರಮ ಎಂದು ಸಿಎಪಿಎಫ್ ಆಗ್ರಾ ಸಬ್‌ಇನ್‌ಸ್ಪೆಕ್ಟರ್ ಸಿ.ಎಂ. ನಾರಾಯಣ ಶಾಸ್ತಿç ಹೇಳಿದರು.

ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇAದ್ರ ಭವನದಲ್ಲಿ ಮಾಸಿಕ ತತ್ತ÷್ವ ಚಿಂತನಾಗೋಷ್ಠಿ ಕಿರಣ ೨೧೯ ನೇ ಹೊಂಬೆಳಕು ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ 'ಕೇಂದ್ರೀಯ ಸಶಸ್ತç ಪೊಲೀಸ್ ಪಡೆಯಲ್ಲಿ ನನ್ನ ಅನುಭವಗಳು' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ನಾರಾಯಣಶಾಸ್ತಿç ಅವರು ಕೊಡಗಿನ ಯುವಕರು ದೇಶ ಸೇವೆ ಮಾಡಲು ಮುಂದಾಗಬೇಕು. ಇತ್ತೀಚೆಗೆ ಹೊರ ರಾಜ್ಯದ ಯುವಕರು ಹೆಚ್ಚಾಗಿ ಸೇನೆಗೆ ಸೇರುತ್ತಿದ್ದು. ಕೊಡಗಿನ ಯುವಕರು ಕಡಿಮೆಯಾಗುತ್ತಿರುವುದು ಕಂಡು ಬರುತ್ತಿದೆ. ಈ ಹಿಂದೆ ಸೇನೆಯಲ್ಲಿ ಕೆಲಸ ಮಾಡುವುದು ಕಷ್ಟವಾಗಿತ್ತು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದ್ದಾರೆ. ಹಾಗೂ ನಿವೃತ್ತರಾದ ಸಂದರ್ಭವು ನಮಗೆ ಬರಬೇಕಾಗಿರುವ ಸೌಲತ್ತುಗಳು ದೊರಕಲಿದೆ. ಕೊಡಗಿನ ಮಣ್ಣಲ್ಲಿ ಹುಟ್ಟಿ ದೇಶ ಕಾಪಾಡುವುದು ನಮ್ಮ ಕರ್ತವ್ಯವೂ ಆಗಿದೆ ಎಂದರು.

ಚೆಟ್ಟಳ್ಳಿ ಗ್ರಾಮದ ಕೃಷಿಕರಾದ ಹೆಚ್.ಎಸ್. ತಿಮ್ಮಪ್ಪಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅರಮೇರಿ ಮಠದ ಹೊಂಬೆಳಕು ಕಾರ್ಯಕ್ರಮವು ನಮ್ಮೆಲ್ಲರ ಮನಸ್ಸಿನಲ್ಲಿರುವ ಚಿಂತೆಗಳನ್ನು ದೂರಮಾಡುವ ಮೂಲಕ ಶಾಂತಿ ಮಂತ್ರದಿAದ ಮನಪರಿವರ್ತನೆಯಾಗಲಿದೆ ಎಂದರು.

ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ಮಠದ ಅಧ್ಯಕ್ಷರಾದ ಶಾಂತಮಲ್ಲಿಕಾರ್ಜುನ ಸ್ವಾಮಿಜೀ ಮಾತನಾಡಿ, ಕಳೆದ ೧೯ ವರ್ಷಗಳಿಗೂ ಹೆಚ್ಚು ಕಾಲ ಪ್ರತಿ ತಿಂಗಳು ಮೊದಲ ಭಾನುವಾರ ನಡೆಸಿಕೊಂಡು ಬರುತ್ತಿರುವ ಮಾಸಿಕ ೨೧೯ ಹೊಂಬೆಳಕು ಕಾರ್ಯಕ್ರಮದಲ್ಲಿ ಅನೇಕ ಮಹಾನೀಯರು ನಿವೃತ್ತ ಅಧಿಕಾರಿಗಳು, ಸಮಾಜ ಸೇವಕರು, ಕೃಷಿಕರು, ಮಠಾಧೀಶರು ಈ ವೇದಿಕೆಯಲ್ಲಿ ಭಾಗವಹಿಸಿ ಹಿತವಚನಗಳನ್ನು ನೀಡಿದ್ದಾರೆ. ಜಗತ್ತಿಗೆ ಬೆಳಕಾಗುವಂತಹ ಉತ್ತಮ ಸಂಸ್ಕಾರ, ದೇಶದ ರಕ್ಷಣಿಯ ಬಗ್ಗೆ ಪೋಷಕರು ಮಕ್ಕಳಿಗೆ ತಿಳಿಸಿಕೊಡುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಪಕ್ಷಿ ವೀಕ್ಷಕರಾದ ಡಾ.ಎಸ್.ವಿ. ನರಸಿಂಹನ್, ಭಾರತೀಯ ಸೇನೆ ನಿವೃತ್ತ ಮೇಜರ್ ಎಸ್.ಕೆ. ವೆಂಕಟಗಿರಿ, ಭಾರತೀಯ ಸ್ಟೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಕೆ.ಕೆ. ಶ್ಯಾಮ್, ಕೃಷಿಕರಾದ ಗಿರೀಶ್ ಕಿಗ್ಗಾಲು, ನಿವೃತ್ತ ಶಿಕ್ಷಕರಾದ ಲಕ್ಷಿö್ಮÃನಾರಾಯಣ ಅವರುಗಳು ಮಾತನಾಡಿದರು.