ಗೋಣಿಕೊಪ್ಪ ವರದಿ, ಮೇ ೯: ಬಾಳೆಲೆ ವಿಜಯಲಕ್ಷಿö್ಮ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿರುವ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ಕರಿನೆರವಂಡ ಭರ್ಜರಿ ಗೆಲುವು ದಾಖಲಿಸಿತು.

ಫಲಿತಾಂಶ: ಕರಿನೆರವಂಡ ತಂಡವು ಬಾದುಮಂಡವನ್ನು ೬೩ ರನ್‌ಗಳಿಂದ ಸೋಲಿಸಿತು. ಕರಿನೆರವಂಡ ೨ ವಿಕೆಟ್ ಕಳೆದುಕೊಂಡು ೧೮೨ ರನ್‌ಗಳ ಬೃಹತ್ ಗುರಿ ನೀಡಿತು. ಬಾದುಮಂಡ ೬ ವಿಕೆಟ್ ಕಳೆದುಕೊಂಡು ೧೧೮ ಕ್ಕೆ ಕುಸಿಯಿತು. ಕರಿನೆರವಂಡ ಡಿವಿನ್ ೯೨ ರನ್ ಸಿಡಿಸಿದರು. ಬಾದುಮಂಡ ಅಮನ್ ೫೩ ರನ್‌ಗಳ ಕಾಣಿಕೆ ನೀಡಿದರು. ಕರಿನೆರವಂಡ ದರ್ಶನ್ ೨ ವಿಕೆಟ್, ಬಾದುಮಂಡ ಮನು ೧ ವಿಕೆಟ್ ಪಡೆದರು.

ನಾಗಚೆಟ್ಟೀರಕ್ಕೆ ಕೊಣಿಯಂಡ ವಿರುದ್ಧ ೧೦ ವಿಕೆಟ್ ಭರ್ಜರಿ ಗೆಲುವು ದೊರೆಯಿತು. ಕೊಣಿಯಂಡ ೫ ವಿಕೆಟ್ ಕಳೆದುಕೊಂಡು ೪೩ ಗುರಿ ನೀಡಿತು. ನಾಗಚೆಟ್ಟೀರ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. ನಾಗಚೆಟ್ಟೀರ ಅರ್ಪಿತ್ ೩೨ ರನ್ ಬಾರಿಸಿದರು.

ಕೊಟ್ಟಂಗಡ ದಾಸಂಡವನ್ನು ೧೦ ರನ್‌ಗಳಿಂದ ಸೋಲಿಸಿತು. ಕೊಟ್ಟಂಗಡ ಸುಮಂತ್ ೧೪, ಸೂರಜ್ ೧೩ ರನ್ ಹೊಡೆದು ೭ ವಿಕೆಟ್ ನಷ್ಟದೊಂದಿಗೆ ೭೦ ರನ್ ಗುರಿ ನೀಡಿತು. ದಾಸಂಡ ೭ ವಿಕೆಟ್ ಕಳೆದುಕೊಂಡು ೫೯ ಕ್ಕೆ ಕುಸಿಯಿತು. ದಾಸಂಡ ಅಚ್ಚಯ್ಯ, ಚೆಂಗಪ್ಪ, ಕೊಟ್ಟಂಗಡ ಸುಮಂತ್ ತಲಾ ೨ ವಿಕೆಟ್ ಪಡೆದರು.

ಮುಕ್ಕಾಟೀರ (ಹರಿಹರ-ಬೆಳ್ಳೂರು) ತಂಡವು ನಂಬುಡುಮಾಡವನ್ನು ೯ ವಿಕೆಟ್‌ಗಳಿಂದ ಸೋಲಿಸಿತು. ನಂಬುಡುಮಾಡ ೫ ವಿಕೆಟ್ ನಷ್ಟಕ್ಕೆ ೮೧ ರನ್, ಮುಕ್ಕಾಟೀರ ೫.೪ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ನಂಬುಡುಮಾಡ ಸೋನು ೨೯ ರನ್, ಮುಕ್ಕಾಟೀರ ದೀಪಕ್ ೩೮ ರನ್, ನಂಬುಡುಮಾಡ ಸುಜು ೧ ವಿಕೆಟ್, ಮುಕ್ಕಾಟೀರ ನೈಲ್ ೩ ವಿಕೆಟ್ ಕಬಳಿಸಿದರು.

ಮುಕ್ಕಾಟೀರ (ಮಾದಾಪುರ) ತಂಡವು ಕುಪ್ಪಣಮಾಡ (ಬಿರುನಾಣಿ) ವಿರುದ್ಧ ಸೂಪರ್ ಓವರ್‌ನಲ್ಲಿ ಜಯಿಸಿತು. ಕುಪ್ಪಣಮಾಡ ಸೂಪರ್ ಓವರ್‌ನಲ್ಲಿ ನೀಡಿದ ೭ ರನ್‌ಗಳ ಗುರಿಯನ್ನು ೧ ವಿಕೆಟ್ ಕಳೆದುಕೊಂಡು ಸಾಧಿಸಿತು. ನಿಗದಿತ ಇನ್ನಿಂಗ್ಸ್ನಲ್ಲಿ ಮುಕ್ಕಾಟೀರ ೧ ವಿಕೆಟ್ ಕಳೆದುಕೊಂಡು ೭೭ ರನ್, ಕುಪ್ಪಣಮಾಡ ೫ ವಿಕೆಟ್ ಕಳೆದುಕೊಂಡು ಸಮಬಲ ಸಾಧಿಸಿತು. ಮುಕ್ಕಾಟೀರ ಸಂಜು ೫೦ ರನ್, ಕುಪ್ಣಮಾಡ ಗಾಯಕ್ ೫೧ ರನ್ ಹೊಡೆದರು.

ಮಂಡAಗಡಕ್ಕೆ ಮನೆಯಪಂಡ ವಿರುದ್ದ ೨೩ ರನ್‌ಗಳ ಗೆಲುವು ದೊರೆಯಿತು. ಮಂಡAಗಡ ೫ ವಿಕೆಟ್ ಕಳೆದುಕೊಂಡು ೮೬ ರನ್, ಮನೆಯಪಂಡ ೭ ವಿಕೆಟ್‌ಗೆ ೬೩ ರನ್ ದಾಖಲಿಸಿದರು.

ಚಿಯಕಪೂವಂಡಕ್ಕೆ ಅಚ್ಚಕಾಳೇರ ವಿರುದ್ಧ ೬ ವಿಕೆಟ್‌ಗಳ ಜಯ ಲಭಿಸಿತು. ಅಚ್ಚಕಾಳೇರ ೪ ವಿಕೆಟ್‌ಗೆ ೬೦ ರನ್, ಚಿಯಕ್‌ಪೂವಂಡ ೬.೩ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ಗುರಿ ಸಾಧನೆ ಮಾಡಿತು. ಚಿಯಕಪೂವಂಡ ವರುಣ್ ೨೧ ರನ್, ಅಚ್ಚಕಾಳೇರ ರಂಜನ್ ೩ ವಿಕೆಟ್, ಚಿಯಕ್‌ಪೂವಂಡ ನಿರನ್ ೨ ವಿಕೆಟ್ ಪಡೆದರು.

ಚಿಮ್ಮಣಮಾಡಕ್ಕೆ ಕಾಂಡೇರ ವಿರುದ್ಧ ೫ ವಿಕೆಟ್‌ಗಳ ಗೆಲುವು ದೊರೆಯಿತು. ಚಿಮ್ಮಣಮಾಡ ೪ ವಿಕೆಟ್ ನಷ್ಟಕ್ಕೆ ೬೮ ರನ್, ಕಾಂಡೇರ ೪ ವಿಕೆಟ್ ಕಳೆದುಕೊಂಡು ೬೩ ರನ್ ದಾಖಲಿಸಿತು. ಚಿಮ್ಮಣಮಾಡ ಭರತ್ ೨೮ ರನ್, ಕಾಂಡೇರ ಡಿಂಪು ೨೫ ರನ್, ಚಿಮ್ಮಣಮಾಡ ಸಜನ್ ೩ ವಿಕೆಟ್ ಪಡೆದರು.

ಕಾರೇರಕ್ಕೆ ಚೆರುವಾಳಂಡ ವಿರುದ್ಧ ೧೫ ರನ್‌ಗಳ ಗೆಲುವು ದೊರೆಯಿತು. ಕಾರೇರ ೩ ವಿಕೆಟ್ ನಷ್ಟಕ್ಕೆ ೮೯ ರನ್ ದಾಖಲಿಸಿತು. ಚೆರುವಾಳಂಡ ೩ ವಿಕೆಟ್ ಕಳೆದುಕೊಂಡು ೭೪ ರನ್ ಮಾತ್ರ ಗಳಿಸಿತು. ಕಾರೇರ ತಮ್ಮಯ್ಯ ೨೦ ರನ್, ಚೆರುವಾಳಂಡ ನಾಚಪ್ಪ ೧೯ ರನ್ ಪಡೆದರು.

ನೆರವಂಡ ಅಣ್ಣಳಮಾಡವನ್ನು ೯ ವಿಕೆಟ್‌ಗಳಿಂದ ಸೋಲಿಸಿತು. ಅಣ್ಣಳಮಾಡ ೯ ವಿಕೆಟ್ ನಷ್ಟಕ್ಕೆ ೪೭ ರನ್ ದಾಖಲಿಸಿತು. ನೆರವಂಡ ೩.೫ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ನೆರವಂಡ ಬೋಪಣ್ಣ ೩ ವಿಕೆಟ್, ಪ್ರಶಾಂತ್ ೨೪ ರನ್, ಅಣ್ಣಳಮಾಡ ಭವನ್ ೩೭ ರನ್ ಹಾಗೂ ೧ ವಿಕೆಟ್ ಪಡೆದರು.

ಮೂಕೊಂಡಕ್ಕೆ ಕೊಚ್ಚೇರ ವಿರುದ್ಧ ೭೫ ರನ್‌ಗಳ ಜಯ ಲಭಿಸಿತು. ಮೂಕೊಂಡ ೨ ವಿಕೆಟ್ ನಷ್ಟಕ್ಕೆ ೧೪೦ ರನ್, ಕೊಚ್ಚೇರ ೬ ವಿಕೆಟ್ ಕಳೆದುಕೊಂಡು ೬೬ ರನ್‌ಗಳಿಗೆ ಕುಸಿಯಿತು. ಮೂಕೊಂಡ ಮಿತೇಶ್ ೬೮ ರನ್, ಅಯ್ಯಪ್ಪ ೪ ವಿಕೆಟ್, ಕೊಚ್ಚೇರ ಲಿಖಿನ್ ೨ ವಿಕೆಟ್, ಶ್ಯಾಂ ೧೯ ರನ್ ದಾಖಲಿಸಿದರು.ಕಾಣತಂಡಕ್ಕೆ ಮೇಕೇರಿರ ವಿರುದ್ಧ ೩೨ ರನ್‌ಗಳ ಗೆಲುವು ದಕ್ಕಿತು. ಕಾಣತಂಡ ೬ ವಿಕೆಟ್ ನಷ್ಟಕ್ಕೆ ೫೬ ರನ್ ಗುರಿ ನೀಡಿತು. ಮೇಕೇರಿರ ೨೩ ರನ್ ಗಳಿಸುವಷ್ಟರಲ್ಲಿ ಸರ್ವಪತನಗೊಂಡಿತು. ಮೇಕೇರಿರ ತಿಮ್ಮಯ್ಯ ೪ ವಿಕೆಟ್, ಕಾಣತಂಡ ಸುಮನ್ ಹಾಗೂ ಕಾಣತಂಡ ಯಕ್ಷಿನ್ ತಲಾ ೩ ವಿಕೆಟ್ ಕಬಳಿಸಿದರು.

ಮುಕ್ಕಾಟೀರ (ಕಡಗದಾಳು) ಚೊಟ್ಟಂಗಡವನ್ನು ೭ ವಿಕೆಟ್‌ಗಳಿಂದ ಮಣಿಸಿತು. ಚೊಟ್ಟಂಗಡ ೨ ವಿಕೆಟ್ ನಷ್ಟಕ್ಕೆ ೭೨ ರನ್, ಮುಕ್ಕಾಟೀರ ೩ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಚೊಟ್ಟಂಗಡ ತಿಮ್ಮಣ್ಣ ೨೨ ರನ್, ಮುಕ್ಕಾಟೀರ ರಿಶ್ವಿನ್ ೨೦ ರನ್, ರೆನಿಶ್ ಸೋಮಯ್ಯ ೧ ವಿಕೆಟ್ ಪಡೆದರು.

ಬಲ್ಲಚಂಡಕ್ಕೆ ಉದ್ದಪಂಡ ವಿರುದ್ಧ ೯ ವಿಕೆಟ್‌ಗಳ ಜಯ ದೊರೆಯಿತು. ಉದ್ದಪಂಡ ೫ ವಿಕೆಟ್‌ಗಳಿಗೆ ೫೨ ರನ್, ಬಲ್ಲಚಂಡ ೩.೨ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಬಲ್ಲಚಂಡ ಸಚಿನ್ ೨ ವಿಕೆಟ್, ಉದ್ದಪಂಡ ಸುಗುಣ ೧ ವಿಕೆಟ್ ಪಡೆದರು.

ನಾಮೇರಕ್ಕೆ ಐಚೇಟೀರ ವಿರುದ್ಧ ೧೬ ರನ್ ಗೆಲುವು ಸಿಕ್ಕಿತು. ನಾಮೇರ ೨ ವಿಕೆಟ್ ನಷ್ಟಕ್ಕೆ ೬೦ ರನ್, ಐಚೇಟೀರ ೪ ವಿಕೆಟ್ ಕಳೆದುಕೊಂಡು ೪೪ಕ್ಕೆ ಕುಸಿಯಿತು.

ಚೊಟ್ಟೆಯಂಡಮಾಡವು ಪೆಮ್ಮಂಡವನ್ನು ೭ ವಿಕೆಟ್‌ಗಳಿಂದ ಮಣಿಸಿತು. ಚೊಟ್ಟೆಯಂಡಮಾಡ ೩ ವಿಕೆಟ್ ಕಳೆದುಕೊಂಡು ೬೭ ರನ್, ಪೆಮ್ಮಂಡ ೩ ವಿಕೆಟ್ ಕಳೆದುಕೊಂಡು ೬೨ ರನ್‌ಗಳಷ್ಟೆ ದಾಖಲಿಸಿತು.

ಮಂಡುವAಡಕ್ಕೆ ಪಟ್ರಪಂಡ ವಿರುದ್ಧ ೯ ರನ್‌ಗಳ ಗೆಲುವು ದೊರೆಯಿತು. ಮಂಡುವAಡ ೨ ವಿಕೆಟ್ ಕಳೆದುಕೊಂಡು ೬೩ ರನ್, ಪಟ್ರಪಂಡ ೨ ವಿಕೆಟ್ ನಷ್ಟಕ್ಕೆ ೫೪ ರನ್ ಗಳಿಸಿತು.

ಮಾಳೇಟೀರ (ಕೆದಮುಳ್ಳೂರು) ತಂಡವು ನಾಮೇರವನ್ನು ೭೧ ರನ್‌ಗಳಿಂದ ಸೋಲಿಸಿತು. ಮಾಳೇಟಿರ ೨ ವಿಕೆಟ್ ನಷ್ಟಕ್ಕೆ ೧೧೦ ರನ್, ನಾಮೇರ ೮ ವಿಕೆಟ್ ಕಳೆದುಕೊಂಡು ಕೇವಲ ೪೮ ರನ್ ದಾಖಲಿಸಿತು.

ತೆಕ್ಕಡ ಪಾರುವಂಗಡವನ್ನು ೮ ವಿಕೆಟ್‌ಗಳಿಂದ ಮಣಿಸಿತು. ತೆಕ್ಕಡ ೨ ವಿಕೆಟ್‌ಗೆ ೪೮ ರನ್, ಪಾರುವಂಗಡ ೭ ವಿಕೆಟ್ ನಷ್ಟಕ್ಕೆ ೪೨ ರನ್ ದಾಖಲಿಸಿತು.

ಗಾಂಡAಗಡಕ್ಕೆ ಐಯಮಾಡ ವಿರುದ್ಧ ೭ ವಿಕೆಟ್ ಜಯ ಲಭಿಸಿತು. ಐಯಮಾಡ ೬ ವಿಕೆಟ್ ಕಳೆದುಕೊಂಡು ೮೩ ರನ್, ಗಾಂಡAಗಡ ೩ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.

ಮಾಳೇಟೀರ (ಕುಂದ) ತಂಡಕ್ಕೆ ಕರವಟ್ಟೀರ ವಿರುದ್ಧ ೩೨ ರನ್‌ಗಳ ಗೆಲುವು ದಕ್ಕಿತು. ಮಾಳೇಟಿರ ೨ ವಿಕೆಟ್ ನಷ್ಟಕ್ಕೆ ೧೦೩ ರನ್ ಸಿಡಿಸಿತು. ಕರವಟ್ಟೀರ ೬ ವಿಕೆಟ್ ನಷ್ಟಕ್ಕೆ ೭೨ ರನ್ ಗಳಿಸಿತು.

ಕೊಣಿಯಂಡ ರಕ್ಷಿತ್, ದಾಸಂಡ ದೇವಯ್ಯ, ನಂಬುಡುಮಾಡ ಸೋನು ಉತ್ತಪ್ಪ, ಅಚ್ಚಕಾಳೇರ ರಂಜನ್, ಕುಪ್ಪಣಮಾಡ ಗಾಯಕ್, ಮನೆಯಪಂಡ ಆದಿತ್ಯ ಅಯ್ಯಣ್ಣ, ಕಾಂಡೇರ ಡಿಂಪು, ಬಾದುಮಂಡ ಅಮನ್, ಅಯ್ಯಮಾಡ ಸಚಿನ್, ಕರವಟ್ಟೀರ ಗುರು, ಚೊಟ್ಟಂಗಡ ಸದಾ ಸೋಮಯ್ಯ, ಐಚೇಟೀರ ನಾಣಯ್ಯ, ಪೆಮ್ಮಂಡ ಸೋಮಣ್ಣ, ಪಟ್ರಪಂಡ ನಿರನ್, ನಾಮೇರ ವರುಣ್, ಪಾರುವಂಗಡ ಹೇಮಂತ್, ಚೆರುವಾಳಂಡ ನಾಚಪ್ಪ, ಅಣ್ಣಳಮಾಡ ಭವನ್, ಕೊಚ್ಚೇರ ಶ್ಯಾಂ, ಮೇಕೇರಿರ ತಿಮ್ಮಯ್ಯ, ಉದ್ದಪಂಡ ತಿಮ್ಮಣ್ಣ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.