ಮಡಿಕೇರಿ ಮೇ ೯ : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ "ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್" ಪಂದ್ಯಾವಳಿಯ ಗುರುವಾರದ ಪಂದ್ಯದಲ್ಲಿ ಕೂರ್ಗ್ ಯುನೈಟೆಡ್ ತಂಡ ಟೀಮ್ ಲಿವರೇಜ್ ವಿರುದ್ಧ ೭ ವಿಕೆಟ್‌ಗಳ ಜಯ ದಾಖಲಿಸಿದೆ.

ಟಾಸ್ ಗೆದ್ದ ಕೂರ್ಗ್ ಯುನೈಟೆಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟೀಮ್ ಲಿವರೇಜ್ ತಂಡ ೨೦ ಓವರ್‌ಗಳಲ್ಲಿ ೭ ವಿಕೆಟ್‌ಗಳ ನಷ್ಟಕ್ಕೆ ೧೧೩ ರನ್‌ಗಳನ್ನು ಗಳಿಸಿತು.

ಇದನ್ನು ಬೆನ್ನಟ್ಟಿದ ಕೂರ್ಗ್ ಯುನೈಟೆಡ್ ತಂಡ ೧೨ ಓವರ್‌ಗಳಲ್ಲಿ ೩ ವಿಕೆಟ್‌ಗಳ ನಷ್ಟಕ್ಕೆ ೧೧೪ ರನ್‌ಗಳನ್ನು ಬಾರಿಸಿ ವಿಜಯ ಸಾಧಿಸಿತು.

ಕೂರ್ಗ್ ಯುನೈಟೆಡ್ ತಂಡದ ಅಯ್ಯಪ್ಪ ಸಿ.ಆರ್. ೨೦ ಬಾಲ್‌ಗಳಲ್ಲಿ ೩೯ ರನ್ ಗಳಿಸಿ, ಎರಡು ವಿಕೆಟ್‌ಗಳನ್ನು ಪತನಗೊಳಿಸುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಎರಡನೇ ಪಂದ್ಯಾಟದಲ್ಲಿ ಕೊಡವ ಟ್ರೆöÊಬ್ ವಿರುದ್ಧ ವೈಲ್ಡ್ ಫ್ಲವರ್ ವಿಜಯ ಸಾಧಿಸಿತು.

ಕುಟ್ಟಂಡ ಕುಟ್ಟಪ್ಪ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಇಂದಿನ ಪಂದ್ಯಾಟ

ಬೆ. ೮.೩೦ಕ್ಕೆ : ಕೊಡವ ವಾರಿಯರ್ಸ್ v/s ಕೂರ್ಗ್ ಯುನೈಟೆಡ್

ಮ.೧ಕ್ಕೆ : ಕೂರ್ಗ್ ಬ್ಲಾಸ್ರ‍್ಸ್ v/s ರಾಯಲ್ ಟೈರ‍್ಸ್