ವೀರಾಜಪೇಟೆ, ಮೇ ೯: ಚೆಕ್‌ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯವು ೬ ತಿಂಗಳ ಜೈಲು ಶಿಕ್ಷೆ ಮತ್ತು ರೂ. ಏಳು ಲಕ್ಷ ದೂರುದಾರರಿಗೆ ಪಾವತಿ ಮಾಡುವಂತೆ ಆದೇಶ ಮಾಡಿದೆ.

ವೀರಾಜಪೇಟೆ ಅಂಬಟ್ಟಿ ಗ್ರಾಮದ ನಿವಾಸಿ, ಉದ್ಯಮಿ ಎನ್.ಸಿ. ವಿಜಯ ಕುಮಾರ್ ವಿರುದ್ಧ ರೂ. ೫.೫೦ ಲಕ್ಷ ವಸೂಲಾತಿಗಾಗಿ ವೀರಾಜಪೇಟೆ ನ್ಯಾಯಾಲಯದಲ್ಲಿ ಹೂಡಿದ್ದ ಚೆಕ್ ಬೌನ್ಸ್ ಪ್ರಕರಣದಲ್ಲಿ ವಿಜಯ ಕುಮಾರ್ ಅವರಿಗೆ ೬ ತಿಂಗಳ ಶಿಕ್ಷೆ ಹಾಗೂ ಸಾಲದ ಬಾಪ್ತು ಹಣ ದಂಡ ಸಮೇತವಾಗಿ ರೂ ೭ ಲಕ್ಷ ರೂಗಳನ್ನು ಮರುಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.

ವೀರಾಜಪೇಟೆ ಸಮೀಪದ ಕುಕ್ಲೂರು ನಿವಾಸಿ ಹರ್ಷ ಟಿ.ಆರ್. ಎಂಬವರಿAದ ೨೦೧೬ರಲ್ಲಿ ಸಾಲ ಪಡೆದ ಎನ್.ಸಿ. ವಿಜಯ ಕುಮಾರ್ ಇಂಡಿಯನ್ ಬ್ಯಾಂಕ್ ವೀರಾಜಪೇಟೆ ಶಾಖೆಯ ಚೆಕ್ ನೀಡಿದ್ದು, ಬ್ಯಾಂಕ್‌ನಲ್ಲಿ ಚೆಕ್ ಅಮಾನ್ಯಗೊಂಡ ಕಾರಣ ಹರ್ಷ ಟಿ.ಆರ್. ಅವರು ಸಾಲದ ಹಣವನ್ನು ವಸೂಲು ಸಂಬAಧ ಚೆಕ್ ಅಮಾನ್ಯ ಪ್ರಕರಣ ಹೂಡಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂತೋಷ್ ಕೊಠಾರಿ ಅವರು ತೀರ್ಪು ನೀಡಿದ್ದಾರೆ. ಹರ್ಷ ಟಿ.ಆರ್. ಅವರ ಪರವಾಗಿ ವಕೀಲರಾದ ಡಿ.ಸಿ. ಧ್ರುವ ಕುಮಾರ್ ವಾದ ಮಂಡಿಸಿದರು.