ಇAದು ಬಸವ ಜಯಂತಿ

ಮನುಷ್ಯನ ಸಾವಿರಾರು ವರ್ಷಗಳ ಚರಿತ್ರೆಯಲ್ಲಿ ಮಾನವ ಜನಾಂಗದ ಅಂಧಕಾರವನ್ನು ಹೋಗಲಾಡಿಸಿ ಸುಸಂಸ್ಕೃತಿಯಲ್ಲಿ ಜೀವನ ಬೆಳಗಲು ನೂರಾರು ಪುಣ್ಯ ಪುರುಷರು ಈ ಭರತ ಭೂಮಿಯಲ್ಲಿ ಅವತರಿಸಿದ್ದಾರೆ. ನಮಗೆ ಜೀವನ ಸಾರವನ್ನು ಬೋಧಿಸಿದ್ದಾರೆ. ಅಂತಹ ಅಪರೂಪದ ವಜ್ರ ಶ್ರೇಷ್ಠರಲ್ಲಿ ಬಸವಣ್ಣನವರು ಒಬ್ಬರು.

ಪುರಾಣ ಕಥೆಗಳ ಪ್ರಕಾರ ಕೈಲಾಸದಲ್ಲಿ ಶಿವನು ಒಂದು ದಿನ ಒಡ್ಡೋಲಗದಲ್ಲಿರುವಾಗ ಒಬ್ಬ ಹೂಮಾಲೆಗಾರನು ಸಂಪಿಗೆಯ ಹೂಗಳನ್ನು ತಂದು ಶಿವನಿಗೆ ಅರ್ಪಿಸಿದನು. ಅದರಿಂದ ಸಂತೋಷಪಟ್ಟ ಶಿವನು ವೃಷಭಮುಖನೆಂಬ ಗಣಪ್ರಮಥನನ್ನು ಕರೆದು ಆ ಹೂವಿನ ಪ್ರಸಾದವನ್ನು ತನ್ನ ಸಭೆಯಲ್ಲಿದ್ದವರಿಗೆ ಹಂಚಿಕೆ ಮಾಡುವಂತೆ ಆಜ್ಞಾಪಿಸಿದನು. ಆತನು ಹೂವಿನ ಪ್ರಸಾದವನ್ನು ಹಂಚುವ ಗಡಿಬಿಡಿಯಲ್ಲಿ ಶಿವನ ಕುಮಾರಸ್ವಾಮಿ (ಸುಬ್ರಹ್ಮಣ್ಯ) ಪುತ್ರನಿಗೆ ಕೊಡುವುದನ್ನು ಮರೆತು ಎಲ್ಲರಿಗೂ ಹಂಚಿದನು. ಬೇಸರಗೊಂಡ ಕುಮಾರಸ್ವಾಮಿಯು ತನಗೆ ಹೂವಿನ ಪ್ರಸಾದ ದೊರೆಯಲಿಲ್ಲವೆಂದು ಶಿವನಿಗೆ ದೂರು ಕೊಟ್ಟನು. ಆದರೆ ವೃಷಭಮುಖನು ತಾನು ಆತನಿಗೆ ಹೂವು ಕೊಟ್ಟಿದ್ದುದಾಗಿ ಸುಳ್ಳು ಹೇಳಿ ಗೆಲುವು ಪಡೆಯಲು ಪ್ರಯತ್ನಿಸಿದ. ತುಂಬಿದ ಸಭೆಯಲ್ಲಿ ತನ್ನ ಮುಂದೆಯೇ ಪ್ರಸಾದವನ್ನು ಕೊಡದೆ ಕೊಟ್ಟೆನೆಂದು ಸುಳ್ಳು ಹೇಳಿದ ತಪ್ಪಿಗಾಗಿ ವೃಷಭಮುಖನು (ಬಸವ) ಭೂಮಿಯಲ್ಲಿ ಮನುಷ್ಯನಾಗಿ ಒಂದು ಜನ್ಮವನ್ನು ಎತ್ತಿ ಅಲ್ಲಿ ಶಿವಭಕ್ತರಾದ ಜಂಗಮರಿಗೆ ಎಲ್ಲಾ ರೀತಿಯ ದಾನವನ್ನು ನೀಡುವುದರ ಮೂಲಕ ಸನ್ಮಾರ್ಗಗಳನ್ನು ಮಾಡಿ ತನ್ನ ತಪ್ಪಿಗೆ ಪ್ರಾಯಶ್ಚಿತವನ್ನು ಮಾಡಿಕೊಂಡು ನಂತರ ಕೈಲಾಸಕ್ಕೆ ಹಿಂದಿರುಗಬೇಕೆAದು ಶಿವನು ಆತನಿಗೆ ಆಜ್ಞಾಪಿಸಿದನಂತೆ, ಶಿವನ ಆಜ್ಞೆಯನ್ನು ಶಿರಸಾ ವಹಿಸಿದ ವೃಷಭ ಮುಖನು ಬಾಗೇವಾಡಿಯ ಅಗ್ರಹಾರದಲ್ಲಿ ‘ಮಾದರಸ' ‘ಮಾದಲಾಂಬೆ’, ಎಂಬವರ ಗರ್ಭದಲ್ಲಿ ಜನಿಸಿದನು. ಇವನಿಗೆ ಅವರು ಬಸವನೆಂದು ಹೆಸರಿಟ್ಟರು. ಹೀಗೆ ಬಸವಣ್ಣನ ಜನನ ಭೂಮಿಯಲ್ಲಿ ಆಯಿತೆಂದು ಹೇಳಲಾಗಿದೆ.

ಕಳಚೂರಿ ವಂಶದ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ ಭಕ್ತಿ ಭಂಡಾರಿ ಎನಿಸಿಕೊಂಡಿದ್ದ ಮಹಾ ಮಾನವತವಾದಿ ಜಗತ್ತಿನ ಇತಿಹಾಸದಲ್ಲಿ ಅಮೋಘ ವ್ಯಕ್ತಿಯಾಗಿ ವಿಶ್ವಕ್ಕೆ ಪರಿಪೂರ್ಣ ಶಕ್ತಿಯಾಗಿದ್ದರು ಬಸವಣ್ಣ. ೧೨ನೇ ಶತಮಾನದ ವಿಚಾರ ಬಂದಾಗೆಲ್ಲ ನೆನಪಾಗುವುದು ಬಸವಾದಿ ಶರಣರು. ಅನುಭವಿ ಸಮಾಜ ಸುಧಾರಕ, ಧಾರ್ಮಿಕ ಮುಖಂಡ, ಕ್ರಾಂತಿಕಾರ, ಅಕ್ಷರದ ಧ್ವನಿ, ಕಾಯಕ ನಿಷ್ಠ, ಕವಿ ಹಾಗೂ ಅಣ್ಣ ಬಸವಣ್ಣರವರು. ಆ ಶತಮಾನದ ಭರತ ಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ವ್ಯಕ್ತಿ. ೧೨ನೇ ಶತಮಾನದ ಮಧ್ಯಭಾಗದ ಹೊತ್ತಿಗೆ, ದೇಶದಾದ್ಯಂತ ಸಮಾಜದಲ್ಲಿ ಕುರುಡು ನಂಬಿಕೆಗಳು ತುಂಬಿ ತುಳುಕುತ್ತಿದ್ದವು. ಧರ್ಮಗಳು ಎನ್ನುವುದು ಉಕ್ಕಿನ ಕೋಟೆಯಂತಿದ್ದು ಸಮಾಜ ಹೋಳಾಗುವಂತಹ ಯುದ್ಧಗಳು ನಡೆಯುತ್ತಿದ್ದವು. ಇಂತಹ ಸಂದರ್ಭದಲ್ಲಿ ಜನತೆಗೆ ನೆಮ್ಮದಿಯ ಬದುಕು ಬೇಕಿತ್ತು, ಆಗ ಕನ್ನಡನಾಡಿನ ಜನಜೀವನದ ಕತ್ತಲೆಯಲ್ಲಿ ಬೆಳಕು ಮೂಡುವಂತೆ ಬಸವೇಶ್ವರರ ಉದಯವಾಗುತ್ತದೆ. ‘ವೀರಶೈವ ಧರ್ಮ’ ಇವರಿಂದ ಪುನರ್ಜೀವನಗೊಂಡು ಜನತೆಯ ಉದ್ಧಾರದ ಸಾಧನವಾಯಿತು. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಭಾಷೆ ಎಂಬುದು ಪೂರ್ವದ ಹಳಗನ್ನಡ ಮತ್ತು ಸಂಸ್ಕೃತ ಭೂವಿಷ್ಟವಾದ ಹಳಗನ್ನಡ ಭಾಷೆ ಇದ್ದಿತ್ತು. ಇದು ಶ್ರೀಸಾಮಾನ್ಯರಿಗೆ ನುಂಗಲಾರದ ತುತ್ತಾದಂತಹ ಕಬ್ಬಿಣದ ಕಡಲೆಯಾಗಿತ್ತು. ಸಾಮಾನ್ಯ ಜನರ ಪರವಾಗಿ ಧ್ವನಿಎತ್ತಿ ಜಾತೀಯತೆ, ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆಯ ವಿರುದ್ಧ ಸಿಡಿದೆದ್ದರು. ಜನರು ತಮ್ಮ ಆಡುವ ಭಾಷೆಯನ್ನು ಸಾಹಿತ್ಯದಲ್ಲಿ ನೋಡಲು ಹಂಬಲಿಸುತ್ತಿದ್ದ ಕಾಲ, ಪುರೋಹಿತಶಾಹಿಯನ್ನು ಧಿಕ್ಕರಿಸಿ ಅರಮನೆಯ ಭಾಷೆಯನ್ನು ತ್ಯಜಿಸಿ ಕಂದಾಚಾರದ ವಿರುದ್ಧ ತಿರುಗಿ ಬಿದ್ದವರು ಬಸವಣ್ಣನವರು. ಎಲ್ಲಾ ಸಾಮಾನ್ಯ ಜನರ ಬದುಕನ್ನು ಹಸನುಗೊಳಿಸಲು ಹೋರಾಡಿದವರು. ಬಸವಣ್ಣನವರು ಇಂದಿಗೂ ನಮ್ಮೊಡನೆ ಜೀವಂತವಾಗಿದ್ದಾರೆ.

ವೈಶಾಖ ಶುದ್ಧ ಅಕ್ಷಯ ತೃತೀಯದಂದು ಬಸವ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತದೆ. ಸಂಸ್ಕೃತದ ಬಸವ ಪುರಾಣವನ್ನು ಆಧರಿಸಿ ಕನ್ನಡದ ಗಾಂಧಿ ಎಂದೇ ಹೆಸರಾಗಿದ್ದ ಹರ್ಡೇಕರ್ ಮಂಜಪ್ಪ ಅವರು ೧೯೧೩ರಲ್ಲಿ ದಾವಣಗೆರೆಯಲ್ಲಿ ಮೊಟ್ಟಮೊದಲ ಬಾರಿಗೆ ಬಸವ ಜಯಂತಿ ಆಚರಿಸುವುದನ್ನು ಜಾರಿಗೆ ತಂದರು ಎಂದು ಹಿರಿಯ ಸಂಶೋಧಕರಾದ ಎಂ.ಎA. ಕಲಬುರ್ಗಿ ಅಭಿಪ್ರಾಯಪಡುತ್ತಾರೆ. ಜನಪದದಲ್ಲಿ "ಬಸವನ ಹಬ್ಬ" ಎಂದು ಪೂರ್ವಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ.

ಸಾಹಿತ್ಯ ಸೇವೆಗೆ ಜಾತಿ, ಮತ, ಉದ್ಯೋಗ, ವಯಸ್ಸು ಯಾವುದು ಅಡ್ಡಿಬರಬಾರದು ಅಂತಹ ನೈತಿಕ ಜೀವನವನ್ನು ಸಾಧಿಸುವ ಮಾರ್ಗವನ್ನು ತೋರಿದರು. ಜನಸಾಮಾನ್ಯರ ನಡುವೆ ನಿಂತು ಅವರ ಸುಖ-ದುಃಖಗಳನ್ನು ಕಂಡು ಮನದಲ್ಲಾದ ಭಾವನೆಗಳನ್ನು ಬಸವಣ್ಣನವರು ವಚನಗಳ ಮೂಲಕ ವ್ಯಕ್ತಪಡಿಸಿದರು.

೮೫೦ ವರ್ಷಗಳಿಗೂ ಹಿಂದೆ ಅಕ್ಷರ ದಾಸೋಹ, ಅನ್ನದಾಸೋಹ, ಧಾರ್ಮಿಕ, ವೈಚಾರಿಕ, ಸಾಹಿತ್ಯಿಕ ಕ್ರಾಂತಿ ಪ್ರತಿಪಾದಿಸಿ ಸಾಮಾಜಿಕ ಕ್ರಾಂತಿಯನ್ನು ಮಾಡಿದವರು.

ಕನ್ನಡ ನಾಡಿನ ಜನತೆಗಾಗಿ ಕನ್ನಡದಲ್ಲಿ ಶಿವಶರಣರು ನಿರ್ವಹಿಸಿದ ಜವಾಬ್ದಾರಿಯುತ ಕೆಲಸಗಳು ಇಂದಿಗೂ ನಮ್ಮೊಂದಿಗೆ ವಿಸ್ಮಯಕಾರಿಯಾಗಿರುವುನ್ನು ಕಾಣುತ್ತೇವೆ. ಬಸವಣ್ಣನವರ ಜೀವನವೇ ಒಂದು ಜ್ಯೋತಿ ಅದರ ದಿವ್ಯ ಪ್ರಭೆಯಲ್ಲಿ ನಾವೆಲ್ಲರೂ ಶತಶತಮಾನಗಳಿಂದ ಸನ್ಮಾರ್ಗವನ್ನು ಕಂಡುಕೊAಡಿದ್ದೇವೆ. ಕನ್ನಡದ ಸಾಹಿತ್ಯ ಕ್ಷೇತ್ರದಲ್ಲಿ ಇವರ ಪ್ರಭಾವ ಅಷ್ಟಿಷ್ಟಲ್ಲ.

ಇವರ ವಚನಗಳನ್ನು ಕುರಿತು ಅವಲೋಕಿಸಿದಾಗ ನಮಗೆ ಮೊದಲಿಗೆ ಕಾಣುವುದು ಅವರ ಜೀವನಪರವಾದ ಕಾಳಜಿಗಳು, ಆ ಕಾಳಜಿಗಳಲ್ಲಿ ಮನುಷ್ಯನ ಬದುಕನ್ನು ಮಹತ್ತಿನ ಕಡೆಗೆ ಕೊಂಡೊಯ್ಯುವ ಮುಖಗಳಿರುವುದನ್ನು ಕಾಣುತ್ತೇವೆ.

ಬಸವಣ್ಣನವರು ಮಾಡಿದ ಎರಡು ಮಹತ್ವದ ಸಂಗತಿಗಳೆAದರೆ - ಜನರು ಆಡುವ ಭಾಷೆಯನ್ನೇ ತನ್ನ ವಚನದ ಮತ್ತು ವ್ಯವಹಾರದ ಭಾಷೆಯಾಗಿ ಮಾಡಿದ್ದು. ಎರಡನೆಯದು - ತನ್ನ ಸುತ್ತ ನೆರೆದ ಜನರು ಎಂಥವರು ಎಂಬುದನ್ನು ಅವರ ವೃತ್ತಿಯ ಮೂಲಕ ಗುರುತಿಸುವಂತೆ ಮಾಡಿದ್ದು ಉದಾ: ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಕಂಬದ ಮಾರಿತಂದೆ, ತುರುಗಾಯಿ ರಾಮಣ್ಣ, ಗೊಲ್ಲಣ್ಣ, ತೆಲುಗೀಶ, ಹೆಂಡದ ಮಾರಯ್ಯ, ಜನಪದ ಕಲಾವಿದರಾದ ಗಜೇಶ ಮಸಣಯ್ಯ, ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದರ ದೊಡ್ಡಯ್ಯ, ಹೀಗೆ ಸಾಮಾಜಿಕವಾಗಿ ತುಳಿತಕ್ಕೊಳಗಾದವರೆಲ್ಲ ಬಸವಣ್ಣನ ಮಾತಿನ ಮೋಡಿಗೆ ಮಂತ್ರಮುಗ್ಧರಾಗಿ ಕುಳಿತುಕೊಳ್ಳಲಿಲ್ಲ ಎಚ್ಚರಗೊಂಡು ತಮ್ಮ ವೃತ್ತಿಯೊಂದಿಗೆ ಗುರುತಿಸಿಕೊಂಡು ಎದ್ದು ನಿಂತು ವಚನ ರಚಿಸಿದರು. ಇವರ ಸಾಹಿತ್ಯಿಕ ಪ್ರೋತ್ಸಾಹ ಹೇಗಿತ್ತೆಂದರೆ ಏಕಕಾಲದಲ್ಲಿ ೧೫೦ ವಚನಕಾರರು ವಚನ ರಚನೆ ಮಾಡುತ್ತಿದ್ದರು. ಸ್ತಿçà ಮನೆಯ ಹೊಸ್ತಿಲು ದಾಟಿ ಮೊದಲ ಬಾರಿಗೆ ಮನೆಯ ಹೊರಗೆ ಬರುವಂತೆ ಮಾಡಿ ಮಹಾದೇವಿಯವರನ್ನು "ಅಕ್ಕಮಹಾದೇವಿ" ಎಂದು ಸಂಬೋಧಿಸುವುದರ ಮೂಲಕ ಕನ್ನಡದ ಮೊದಲ ಕವಯಿತ್ರಿಯಾಗಲು ಪ್ರತ್ಯಕ್ಷವಾಗಿ ಕಾರಣರಾದರು. ಜೊತೆಗೆ ೩೦ಕ್ಕೂ ಹೆಚ್ಚಿನ ವಚನಗಾರ್ತಿಯರು ಒಂದು ಐತಿಹಾಸಿಕ ಮಹತ್ವವನ್ನು ತಂದುಕೊಟ್ಟರು. ವಿಶ್ವದ ಯಾವ ಸಾಹಿತ್ಯ ದಲ್ಲೂ ಯಾವ ಕಾಲದಲ್ಲಿಯೂ ಹೀಗೆ ಏಕಕಾಲದಲ್ಲಿ ಇಷ್ಟೊಂದು ರೀತಿಯ ಇಷ್ಟೊಂದು ಜನ ಸಾಹಿತ್ಯ ರಚನೆ ಮಾಡಿದ್ದು ಒಂದು ವಿಶ್ವ ದಾಖಲೆ.

ಇವರ ವಚನಗಳು ವೈವಿಧ್ಯತೆಗಳನ್ನುಳ್ಳ ವಚನಗಳಾಗಿವೆ. ವಚನಗಳು ಸರಳವಾಗಿದ್ದರೂ ಅರ್ಥಮೌಲ್ಯ ಅಗಾಧವಾದದ್ದಾಗಿದೆ. ಬಾಲ್ಯ, ಯೌವ್ವನ, ಪ್ರೌಢಾವಸ್ಥೆ, ವೃದ್ಧಾಪ್ಯ, ಮನುಷ್ಯನ ಆಯುಷ್ಯದ ಅನಿವಾರ್ಯವಾದ ಹಂತಗಳು ಆಯುಷ್ಯದ ಕೊನೆಯ ಹಂತವಾದ ಮುಪ್ಪಿನ ಘೋರ ಚಿತ್ರಣವನ್ನು ಬಸವಣ್ಣನವರು ವಿವರಿಸುತ್ತಾರೆ. ನಾವು ಮುಪ್ಪಿನಾವಸ್ಥೆಗೆ ಪ್ರವೇಶ ಹೊಂದುವ ಮೊದಲು ಹಂತ ಹಂತವಾಗಿ ಬದಲಾವಣೆ ಚಿತ್ರವನ್ನು ನೀಡುತ್ತಾರೆ. ಕೂದಲು ಬೆಳ್ಳಗಾಗುವುದು, ಚರ್ಮ ಸುಕ್ಕು ಗಟ್ಟುವುದು, ಶರೀರ ಸೊರಗುವುದು, ಹಲ್ಲುಗಳು ಉದುರುವುದು, ಬೆನ್ನು ಬಾಗುವುದು, ಇನ್ನೊಬ್ಬರ ಸಹಾಯದಿಂದ ಹೆಜ್ಜೆ ಇಡುವುದು, ಇವೆಲ್ಲವುಗಳು ಮುಪ್ಪಿನ ಲಕ್ಷಣಗಳು. "ಮೃತ್ಯು ಮುಟ್ಟದ ಮುನ್ನ" ದೇವರನ್ನು ಪೂಜಿಸಿ ಎನ್ನುತ್ತಾರೆ.

ಮೇಲು ಕೀಳಿನ ಕುರಿತು ಹೇಳುತ್ತಾ ಜೀವನದಲ್ಲಿ ತಾರತಮ್ಯ ಮಾಡದೆ ಪ್ರೀತಿ ವಿಶ್ವಾಸ ಗೌರವದೊಂದಿಗೆ ಬದುಕಬೇಕೆಂದು ಹೇಳಿ, ಕುಲ ಗೋತ್ರದ ತಾರತಮ್ಯವನ್ನು ಹೇಳುತ್ತಾ "ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ" ಎಂದು ಜಾತಿ ಪದ್ಧತಿಯನ್ನು ವಿರೋಧಿಸಿ "ಕಾಶಿ ಕಮ್ಮಾರನಾದ ಬಿಸಿ ಮಡಿವಾಳನಾದ" ಎಂದಿದ್ದಾರೆ. ಹೆಣ್ಣು-ಗಂಡುಗಳ ಮಧ್ಯದ ಲಿಂಗ ತಾರತಮ್ಯವನ್ನು ಹೇಳುವ ಇವರು "ನಡುವೆ ಸುಳಿವಾ ಆತ್ಮನು ಹೆಣ್ಣು ಅಲ್ಲ ಗಂಡು ಅಲ್ಲ" ಎಂದರು.

ಶ್ರೀಮಂತಿಕೆ ಬಡತನದ ಕುರಿತು "ಕಾಯಕವೇ ಕೈಲಾಸ" "ದುಡಿಮೆಯೇ ದೇವರು" "ಸಿರಿ ಎಂಬುದು ಸಂತೆಯ ಮಂದಿ". ರಾಜಪ್ರಭುತ್ವವನ್ನು ವಿರೋಧಿಸಿದ ಇವರು ನಾವು ಯಾರಿಗೂ ಆಳಲ್ಲ ದೇವರನ್ನು ಬಿಟ್ಟರೆ ಯಾರಿಗೂ ಹೆದರ ಬೇಕಿಲ್ಲ. "ಎನಗೆ ಒಡೆಯರುಂಟು ಕೂಡಲಸಂಗನ ಶರಣರು" ಎಂದು ಹೇಳುವುದರ ಮೂಲಕ ನಾವು ಯಾರಿಗೆ ನಿಷ್ಠೆಯಿಂದ ಇದ್ದೇವೆ ಎಂಬುದನ್ನು ಹೇಳುತ್ತಾರೆ.

ಅಂತರAಗ ಬಹಿರಂಗದ ಶುದ್ಧಿ ಇದ್ದವನು ಭಕ್ತನಾಗಬಲ್ಲನೆಂದು ಹೇಳುವ ಸಂದರ್ಭ "ಮನೆಯೊಳಗೆ ಮನೆಯೊಡಯನಿದ್ದಾನೋ? ಇಲ್ಲವೋ ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ". "ನೀರ ಕಂಡಲ್ಲಿ ಮುಳುಗುವರಯ್ಯ ತೆಲುಗೀಶ, ಹೆಂಡದ ಮಾರಯ್ಯ, ಜನಪದ ಕಲಾವಿದರಾದ ಗಜೇಶ ಮಸಣಯ್ಯ, ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಾದರ ದೊಡ್ಡಯ್ಯ, ಹೀಗೆ ಸಾಮಾಜಿಕವಾಗಿ ತುಳಿತಕ್ಕೊಳಗಾದವರೆಲ್ಲ ಬಸವಣ್ಣನ ಮಾತಿನ ಮೋಡಿಗೆ ಮಂತ್ರಮುಗ್ಧರಾಗಿ ಕುಳಿತುಕೊಳ್ಳಲಿಲ್ಲ ಎಚ್ಚರಗೊಂಡು ತಮ್ಮ ವೃತ್ತಿಯೊಂದಿಗೆ ಗುರುತಿಸಿಕೊಂಡು ಎದ್ದು ನಿಂತು ವಚನ ರಚಿಸಿದರು. ಇವರ ಸಾಹಿತ್ಯಿಕ ಪ್ರೋತ್ಸಾಹ ಹೇಗಿತ್ತೆಂದರೆ ಏಕಕಾಲದಲ್ಲಿ ೧೫೦ ವಚನಕಾರರು ವಚನ ರಚನೆ ಮಾಡುತ್ತಿದ್ದರು. ಸ್ತಿçà ಮನೆಯ ಹೊಸ್ತಿಲು ದಾಟಿ ಮೊದಲ ಬಾರಿಗೆ ಮನೆಯ ಹೊರಗೆ ಬರುವಂತೆ ಮಾಡಿ ಮಹಾದೇವಿಯವರನ್ನು "ಅಕ್ಕಮಹಾದೇವಿ" ಎಂದು ಸಂಬೋಧಿಸುವುದರ ಮೂಲಕ ಕನ್ನಡದ ಮೊದಲ ಕವಯಿತ್ರಿಯಾಗಲು ಪ್ರತ್ಯಕ್ಷವಾಗಿ ಕಾರಣರಾದರು. ಜೊತೆಗೆ ೩೦ಕ್ಕೂ ಹೆಚ್ಚಿನ ವಚನಗಾರ್ತಿಯರು ಒಂದು ಐತಿಹಾಸಿಕ ಮಹತ್ವವನ್ನು ತಂದುಕೊಟ್ಟರು. ವಿಶ್ವದ ಯಾವ ಸಾಹಿತ್ಯ ದಲ್ಲೂ ಯಾವ ಕಾಲದಲ್ಲಿಯೂ ಹೀಗೆ ಏಕಕಾಲದಲ್ಲಿ ಇಷ್ಟೊಂದು ರೀತಿಯ ಇಷ್ಟೊಂದು ಜನ ಸಾಹಿತ್ಯ ರಚನೆ ಮಾಡಿದ್ದು ಒಂದು ವಿಶ್ವ ದಾಖಲೆ.

ಇವರ ವಚನಗಳು ವೈವಿಧ್ಯತೆಗಳನ್ನುಳ್ಳ ವಚನಗಳಾಗಿವೆ. ವಚನಗಳು ಸರಳವಾಗಿದ್ದರೂ ಅರ್ಥಮೌಲ್ಯ ಅಗಾಧವಾದದ್ದಾಗಿದೆ. ಬಾಲ್ಯ, ಯೌವ್ವನ, ಪ್ರೌಢಾವಸ್ಥೆ, ವೃದ್ಧಾಪ್ಯ, ಮನುಷ್ಯನ ಆಯುಷ್ಯದ ಅನಿವಾರ್ಯವಾದ ಹಂತಗಳು ಆಯುಷ್ಯದ ಕೊನೆಯ ಹಂತವಾದ ಮುಪ್ಪಿನ ಘೋರ ಚಿತ್ರಣವನ್ನು ಬಸವಣ್ಣನವರು ವಿವರಿಸುತ್ತಾರೆ. ನಾವು ಮುಪ್ಪಿನಾವಸ್ಥೆಗೆ ಪ್ರವೇಶ ಹೊಂದುವ ಮೊದಲು ಹಂತ ಹಂತವಾಗಿ ಬದಲಾವಣೆ ಚಿತ್ರವನ್ನು ನೀಡುತ್ತಾರೆ. ಕೂದಲು ಬೆಳ್ಳಗಾಗುವುದು, ಚರ್ಮ ಸುಕ್ಕು ಗಟ್ಟುವುದು, ಶರೀರ ಸೊರಗುವುದು, ಹಲ್ಲುಗಳು ಉದುರುವುದು, ಬೆನ್ನು ಬಾಗುವುದು, ಇನ್ನೊಬ್ಬರ ಸಹಾಯದಿಂದ ಹೆಜ್ಜೆ ಇಡುವುದು, ಇವೆಲ್ಲವುಗಳು ಮುಪ್ಪಿನ ಲಕ್ಷಣಗಳು. "ಮೃತ್ಯು ಮುಟ್ಟದ ಮುನ್ನ" ದೇವರನ್ನು ಪೂಜಿಸಿ ಎನ್ನುತ್ತಾರೆ.

ಮೇಲು ಕೀಳಿನ ಕುರಿತು ಹೇಳುತ್ತಾ ಜೀವನದಲ್ಲಿ ತಾರತಮ್ಯ ಮಾಡದೆ ಪ್ರೀತಿ ವಿಶ್ವಾಸ ಗೌರವದೊಂದಿಗೆ ಬದುಕಬೇಕೆಂದು ಹೇಳಿ, ಕುಲ ಗೋತ್ರದ ತಾರತಮ್ಯವನ್ನು ಹೇಳುತ್ತಾ "ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ" ಎಂದು ಜಾತಿ ಪದ್ಧತಿಯನ್ನು ವಿರೋಧಿಸಿ "ಕಾಶಿ ಕಮ್ಮಾರನಾದ ಬಿಸಿ ಮಡಿವಾಳನಾದ" ಎಂದಿದ್ದಾರೆ. ಹೆಣ್ಣು-ಗಂಡುಗಳ ಮಧ್ಯದ ಲಿಂಗ ತಾರತಮ್ಯವನ್ನು ಹೇಳುವ ಇವರು "ನಡುವೆ ಸುಳಿವಾ ಆತ್ಮನು ಹೆಣ್ಣು ಅಲ್ಲ ಗಂಡು ಅಲ್ಲ" ಎಂದರು.

ಶ್ರೀಮಂತಿಕೆ ಬಡತನದ ಕುರಿತು "ಕಾಯಕವೇ ಕೈಲಾಸ" "ದುಡಿಮೆಯೇ ದೇವರು" "ಸಿರಿ ಎಂಬುದು ಸಂತೆಯ ಮಂದಿ". ರಾಜಪ್ರಭುತ್ವವನ್ನು ವಿರೋಧಿಸಿದ ಇವರು ನಾವು ಯಾರಿಗೂ ಆಳಲ್ಲ ದೇವರನ್ನು ಬಿಟ್ಟರೆ ಯಾರಿಗೂ ಹೆದರ ಬೇಕಿಲ್ಲ. "ಎನಗೆ ಒಡೆಯರುಂಟು ಕೂಡಲಸಂಗನ ಶರಣರು" ಎಂದು ಹೇಳುವುದರ ಮೂಲಕ ನಾವು ಯಾರಿಗೆ ನಿಷ್ಠೆಯಿಂದ ಇದ್ದೇವೆ ಎಂಬುದನ್ನು ಹೇಳುತ್ತಾರೆ.

ಅಂತರAಗ ಬಹಿರಂಗದ ಶುದ್ಧಿ ಇದ್ದವನು ಭಕ್ತನಾಗಬಲ್ಲನೆಂದು ಹೇಳುವ ಸಂದರ್ಭ "ಮನೆಯೊಳಗೆ ಮನೆಯೊಡಯನಿದ್ದಾನೋ? ಇಲ್ಲವೋ ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ". "ನೀರ ಕಂಡಲ್ಲಿ ಮುಳುಗುವರಯ್ಯ ಮರ ಕಂಡಲ್ಲಿ ಸುತ್ತುವರಯ್ಯ" ಎಂದಿದ್ದಾರೆ.

ಇವರ ವಚನಗಳಲ್ಲಿ ಪ್ರಕೃತಿ ಪ್ರೀತಿಯ ಒಂದು ಧ್ವನಿ ಇದೆ. ವಿಕಾಸದ ಮೂಲವಿದೆ. ಮರ-ಗಿಡ-ಬಳ್ಳಿ ಹೂಗಳು ಕಾಯಿ-ಹಣ್ಣುಗಳ ಪಾತ್ರವನ್ನು ಬಸವಣ್ಣನವರ ವಚನಗಳಲ್ಲಿ ಕಾಣಬಹುದು.

"ಬೇವಿನ ಬೀಜವ ಬಿತ್ತಿ ಬೆಲ್ಲದ ಕಟ್ಟೆಯ ಕಟ್ಟಿ ಆಕಳ ಹಾಲನೆರೆದು ಜೇನುತುಪ್ಪವ ಹೊಯ್ದರೆ ಕಹಿಯವುದಲ್ಲದೆ ಸಿಹಿಯಾಗಬಲ್ಲದೆ?" ಅದರಕ್ಕೆ ಕಹಿ ಉದರಕ್ಕೆ ಸಿಹಿ ಕೂಡಲಸಂಗನ ಶರಣರ ವಚನ ಬೇವ ಸವಿದಂತೆ ಎಂದಿದ್ದಾರೆ. ಮಾವಿನ ಕಾಯೊಳಗೊಂದು ಎಕ್ಕೆಯ ಕಾಯಿ ನಾನಯ್ಯ ಪ್ರಕೃತಿಯಲ್ಲೂ ಡಾಂಭಿಕವೆನಿಸುವ ಅಂಶಗಳನ್ನು ಚಿತ್ರಿಸಿದ್ದಾರೆ.

ಪ್ರಕೃತಿಯಲ್ಲಿರುವ ಪಶು, ಪಕ್ಷಿ-ಪ್ರಾಣಿಗಳ ಕುರಿತು... ಕೋತಿಯ ಮನಸು ಚಂಚಲ ಕೊಂಬೆಯಿAದ ಕೊಂಬೆಗೆ ಹಾರುತ್ತದೆ. ಹಾಗೆಯೇ ಮನುಷ್ಯನ ಮನಸ್ಸು ಕೂಡ ಅತಿ ಚಂಚಲವಾದದ್ದು ಎನ್ನುತ್ತಾ "ಅಂದಣವನ್ನೇರಿದ ಸೊಣಗನಂತೆ, ಮನವೆಂಬ ಮರ್ಕಟದಂತೆ... ಕೋತಿಯ ಕೈಯ ಮಾಣಿಕ್ಯದಂತೆ... ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದು ಎನ್ನುತ್ತಾ ಕೂಡಲಸಂಗಮದೇವ ಮನ ಮುಟ್ಟದೆ ಮಾಡುವ ಭಕ್ತಿಯ ಪರಿಣಾಮವನ್ನು "ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾಯಿತೆನ್ನ ಭಕ್ತಿ" "ಸ್ಥಾವರಕಳಿಗುಂಟು ಜಂಗಮಕ್ಕಳಿವಿಲ್ಲ" ಎಂದಿದ್ದಾರೆ.

ಇವರ ವಚನಗಳಲ್ಲಿ ಇವರು ಬಳಸಿರುವ ಭಾಷೆ ಅತಿ ಸರಳವಾದದ್ದು. ಇವುಗಳಲ್ಲಿ ವಿಷಯಗಳನ್ನು ಅವರು ನಿರೂಪಿಸುವ ರೀತಿ ಅದ್ಭುತವಾದದ್ದು. ಅನುಭವ ಮಂಟಪ"ವೆAಬ ‘ಮಹಾಮನೆ' ಸ್ಥಾಪಿಸಿ ತಾನು ಪೀಠವನ್ನು ಅಲಂಕರಿಸದೆ ಅಲ್ಲಮ ಪ್ರಭುವನ್ನು ಶೂನ್ಯ ಸಿಂಹಾಸನಾಧಿಕಾರಿ ಮಾಡಿ ಸಂಸತ್ತಿನ ಮೊಟ್ಟಮೊದಲ "ಸಭಾಪತಿ"ಯನ್ನಾಗಿ ಕೂರಿಸಿ ೧೨ನೇ ಶತಮಾನದಲ್ಲೇ ಸಂಸದೀಯ ಪ್ರಜಾಪ್ರಭುತ್ವಕ್ಕೆ ಭದ್ರವಾದ ಅಡಿಪಾಯ ಹಾಕಿದರು. ಇಲ್ಲಿ ಸ್ತಿçà ಮತ್ತು ಪುರುಷ ಇಬ್ಬರಿಗೂ ಸಮಾನ ಅವಕಾಶ ಮತ್ತು ಗೌರವವನ್ನು ನೀಡಿದರು. ಮಹಾಮನೆಯಲ್ಲಿ ಮಾತನಾಡಲು ಪ್ರತಿಕ್ರಿಯೆ ನೀಡಲು ಅವಕಾಶವಿತ್ತು. ಇದರೊಂದಿಗೆ ನಮ್ಮ ನಮ್ಮ ಮನಸ್ಸುಗಳನ್ನು ಮಹಾಮನೆಯನ್ನಾಗಿ ಮಾಡಿಕೊಳ್ಳಬೇಕೆಂಬ ಹಂಬಲವೂ ಅವರಿಗಿತ್ತು. "ದೇಹದೊಳಗೆ ದೈವ... ದೇಹವೇ ದೇವಾಲಯ" ವೆಂಬ ಜಗಜ್ಯೋತಿ ವಿಶ್ವಗುರು ಪರಿಕಲ್ಪನೆ ಅನನ್ಯವಾದುದು.

ಒಮ್ಮೆ ಮಹಾತ್ಮ ಗಾಂಧೀಜಿ ಅವರು ಬೆಳಗಾವ್ ಕಾಂಗ್ರೆಸ್ ಅಧಿವೇಶನಕ್ಕೆ ಬಂದಾಗ ಕನ್ನಡಿಗರು ನಮಗೊಂದು ಸಂದೇಶ ನೀಡಬೇಕೆಂದು ಗಾಂಧಿಯವರನ್ನು ಕೇಳಿದ್ದರಂತೆ ಆಗ ಗಾಂಧಿಯವರು "ಬಸವಣ್ಣನ ನಾಡಿಗೆ ನಾನೇನು ಹೊಸ ಸಂದೇಶ ನೀಡಲಿ ಆತನ ಬದುಕೆ ಒಂದು ದೊಡ್ಡ ಸಂದೇಶವಲ್ಲವೇ" ಎಂದಿದ್ದರAತೆ.

ರಾಜನೀತಿ ತಜ್ಞ, ಅಪೂರ್ವ ತತ್ವಜ್ಞಾನಿ, ಸಮಾಜ ವಿಜ್ಞಾನಿ, ಅರ್ಥಶಾಸ್ತçಜ್ಞ, ಶಿವಭಕ್ತ ಕವಿ, ಸಂಸ್ಕೃತ ಮತ್ತು ಕನ್ನಡ ಭಾಷಾ ಪಂಡಿತ, ಮಾನವ ಹಕ್ಕುಗಳ ಪ್ರತಿಪಾದಕ, ಶರಣರ ಗುರುವಾದ ಬಸವಣ್ಣನ ಎಲ್ಲಾ ಕಾಯಕವು ನಮಗೆ ಇಂದಿಗೂ ಮಾರ್ಗದರ್ಶಕವಾಗಿ ನಮ್ಮ ಮುಂದಿದೆ.

- ಎಸ್.ಎಂ. ರಜನಿ, ಸಹಾಯಕ ಪ್ರಾಧ್ಯಾಪಕಿ,

ಕಾವೇರಿ ಕಾಲೇಜು, ಗೋಣಿಕೊಪ್ಪ.