ಅಕ್ಷಯ ತೃತೀಯ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ದಿನವನ್ನು ವಿವಿಧ ಮಂಗಳಕರ ಚಟುವಟಿಕೆಗಳನ್ನು ಮಾಡಲು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ದೇಶಾದ್ಯಂತ ಸಂತೋಷ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಅಕ್ಷಯ ತೃತೀಯವನ್ನು ವೈಶಾಖಮಾಸದ ಶುಕ್ಲಪಕ್ಷದ ಮೂರನೇ ದಿನ ಅಥವಾ ತೃತೀಯ ದಿನದಂದು ಆಚರಿಸಲಾಗುತ್ತಿದೆ.

ಅಕ್ಷಯ ಎಂದರೆ ಶಾಶ್ವತವಾದ ಮತ್ತು ತೃತೀಯ ಎಂದರೆ ಶುಕ್ಲಪಕ್ಷದ ಮೂರನೇ ದಿನ. ಈ ದಿನದಂದು ಶುಭ ಕಾರ್ಯಗಳನ್ನು ಮಾಡುವ ಜನರು ಅಮರತ್ವ ಪಥದತ್ತ ಸಾಗುತ್ತಾರೆ ಎಂದು ನಂಬಿಕೆ. ಜನರು ಹೊಸ ವ್ಯಾಪಾರ, ಉದ್ಯೋಗ, ಗೃಹಪ್ರವೇಶ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಪ್ರಾರಂಭಿಸುತ್ತಾರೆ. ಚಿನ್ನ-ಬೆಳ್ಳಿ ಮತ್ತು ಆಭರಣಗಳನ್ನು ಖರೀದಿಸಲು ಈ ದಿನವನ್ನು ಮಂಗಳಕರವೆAದು ಪರಿಗಣಿಸಲಾಗುತ್ತದೆ. ಈ ವಸ್ತುಗಳು ತಮ್ಮ ಜೀವನದಲ್ಲಿ ಯಶಸ್ಸು, ಅದೃಷ್ಟ ಮತ್ತು ಸಮೃದ್ಧಿ ತರುತ್ತವೆ ಎಂಬ ನಂಬಿಕೆಯಿದೆ.

ವನವಾಸದಲ್ಲಿರುವ ಪಾಂಡವರು ಸೂರ್ಯದೇವನಿಂದ ಅಕ್ಷಯ ಪಾತ್ರೆಯನ್ನು ಪಡೆದುದು ಇದೇ ವೈಶಾಖ ಶುಕ್ಲ ತೃತೀಯ ದಿನದಂದು ಎಂಬುದು ಈ ದಿನದ ಪ್ರಮುಖ ವಿಶೇಷತೆ. ಅದೇ ಕಾರಣಕ್ಕಾಗಿ ಈ ತದಿಗೆಯನ್ನು ಅಕ್ಷಯ ತದಿಗೆ ಎಂದು ಕರೆಯುತ್ತಾರೆ. ಇಂದು ಪರಶುರಾಮ ಜಯಂತಿಯೂ ಕೂಡಾ. ದುಷ್ಟಕ್ಷತ್ರಿಯರ ಅದರಲ್ಲೂ ಮುಖ್ಯವಾಗಿ ಕಾರ್ತಾವೀರ್ಯಾ ಜನನರ್ನ ವಧೆಗಾಗಿ ಭೃಗುವಂಶದ ಜಮದಗ್ನಿ ಮತ್ತು ರೇಣುಕಾದೇವಿ ದಂಪತಿಗಳಿಗೆ ೫ನೇ ಮಗನಾಗಿ ಶ್ರೀಮನ್ನಾರಾಯಣನು ಹುಟ್ಟಿ ಬರುತ್ತಾನೆ. ಅವನೇ ಪರಶುರಾಮ, ಮಹಾವಿಷ್ಣುವಿನ ದಶ ಅವತಾರಗಳಲ್ಲಿ ೬ನೇ ಅವತಾರವಾದ ಈ ಪರಶುರಾಮನು ಕೃತಯುಗದ ಕೊನೆಯಲ್ಲಿ ಇದೇ ದಿನದಂದು ಜನಿಸಿದನು ಎಂದು ಪುರಾಣಗಳು ತಿಳಿಸುತ್ತವೆ. ಅಕ್ಷಯ ತಗದಿ ದಿನವೇ ಕುಬೇರನು ಶ್ರೀಮಂತನಾದ ದಿನ. ಪರಶಿವನ ಸಲಹೆಯಂತೆ ಉತ್ತಾರಾಧಿಪತಿಯಾದ ಕುಬೇರನು ಧನಾದಿ ದೇವತೆ ಅಂದರೆ ಸಂಪತ್ತಿನ ಒಡತಿಯಾದ ಮಹಾಲಕ್ಷಿö್ಮಯನ್ನು ಪೂಜಿಸಿ ಅವಳ ಕೃಪೆಯಿಂದಾಗಿ ತಾನು ಧನಾಧಿಪತಿಯಾದ ದಿನ. ವಾಸ್ತವವಾಗಿ ಮಹಾಲಕ್ಷಿö್ಮಯು ಸಂಪತ್ತಿನ ಒಡತಿಯಾದರೆ ಕುಬೇರನು ಆ ಸಂಪತ್ತಿನ ರಕ್ಷಕ ಮಾತ್ರ. ಆದರೆ ಜನರೆಲ್ಲ ಕುಬೇರನನ್ನೇ ಧನಾಧಿಪತಿ ಎನ್ನುತ್ತಾರೆ. ಅದೇನೇ ಇರಲಿ ಕುಬೇರನು ಇದೇ ದಿನದಂದು ಲಕ್ಷಿö್ಮಯನ್ನು ಪೂಜಿಸಿದರಿಂದಾಗಿ ಜನರು ಕೂಡಾ ಅಕ್ಷಯ ತೃತೀಯದಲ್ಲಿ ಲಕ್ಷಿö್ಮÃ ದೇವಿಯನ್ನು ಪೂಜಿಸುತ್ತಾರೆ. ಈ ದಿನ ಕುಬೇರ ಹಾಗೂ ಲಕ್ಷಿö್ಮ ದೇವಿಯನ್ನು ಪೂಜಿಸಿದರೆ, ಧನ ಧಾನ್ಯ ಪ್ರಾಪ್ತಿಯಾಗುತ್ತದೆ. ಸಂಪತ್ತು ವೃದ್ಧಿಯಾಗುತ್ತದೆ ಎಂಬುದು ನಂಬಿಕೆ.

ಇನ್ನೊAದು ವಿಶೇಷತೆ ಏನೆಂದರೆ ವೇದವ್ಯಾಸ ಮಹರ್ಷಿಗಳು ಗಣಪತಿಯ ಮೂಲಕ ಮಹಾಭಾರತ ಮಹಾಕಾವ್ಯವನ್ನು ಬರೆಯಲು ಪ್ರಾರಂಭಿಸಿದ ದಿನ. ಹೀಗಾಗಿ ಈ ದಿನದಂದು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸುತ್ತಾರೆ. ವಿದ್ಯಾಧಿ ದೇವತೆಯು ಸರಸ್ವತಿಯೇ ಆಗಿದ್ದರೂ ಕೂಡಾ ಮೊದಲು ‘ಓಂ ಗಣಾಧಿಪತಯೇ ನಮಃ’ ಎಂದು ಬರೆಸುತ್ತಾರೆ. ಅದೂ ಅಲ್ಲದೆ ತ್ರೇತಾಯುಗವು ಆರಂಭವಾದ ದಿನ. ಇದು ಶ್ರೀ ಕೃಷ್ಣನ ಅಣ್ಣನಾದ ಬಲರಾಮನು ಜನಿಸಿದ ದಿನ. ಇದು ಸೀತಾದೇವಿಯ ಅಗ್ನಿಪರೀಕ್ಷೆ ನಡೆದ ದಿನವೂ ಆಗಿದೆ. ಅಲ್ಲದೆ ಜಗಜ್ಯೋತಿ ಬಸವಣ್ಣನವರ ಜನ್ಮದಿನ. ಹೀಗೆ ಹಲವಾರು ವಿಶೇಷತೆಗಳ ದಿನವಾಗಿದೆ.

ಇಂದು ದಿನದ ಅಂಗಗಳಾದ ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕಿರಣಗಳಲ್ಲಿ ಯಾವುದೇ ದೋಷ ಇಲ್ಲದ, ಪಂಚಾAಗ ಶುದ್ಧಿಯ ದಿನವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಅಕ್ಷಯ ತದಿಗೆಯು ಎಲ್ಲರಿಗೂ ಶುಭ ದಿನವಾಗಿದೆ. ಈ ದಿನ ನಿರ್ದಿಷ್ಟವಾಗಿ ಇಂತದ್ದೇ ಕಾರ್ಯವನ್ನು ಮಾಡಬೇಕು ಎಂಬ ನಿಯಮವೇನೂ ಇಲ್ಲ. ಯಾವುದೇ ಶುಭ ಕಾರ್ಯವನ್ನಾದರೂ ಈ ದಿನ ಆರಂಭಿಸಬಹುದು. ಸಾಮಾನ್ಯವಾಗಿ ಭೂಮಿ ಖರೀದಿ, ಆಭರಣ ಖರೀದಿ, ಅಕ್ಷರಾಭ್ಯಾಸ, ಗೃಹಪ್ರವೇಶ, ಹೊಸ ಉದ್ಯಮ ಪ್ರಾರಂಭ, ಉಪನಯನ, ವಿವಾಹ ಮೊದಲಾದ ಕಾರ್ಯಗಳನ್ನು ಈ ದಿನದಂದು ಮಾಡಬಹುದು.

ಆದರೆ, ಹೆಚ್ಚಿನ ಜನರು ಅಕ್ಷಯ ತೃತೀಯದಂದು ಚಿನ್ನ ಖರೀದಿಗೇ ಮುಂದಾಗುತ್ತಾರೆ. ಏಕೆಂದರೆ ಅಕ್ಷಯ ತದಿಗೆಯಂದು ಜಪ, ತಪ, ಹೋಮ, ತರ್ಪಣ, ದಾನ ಇತ್ಯಾದಿಯಾಗಿ ಏನನ್ನೇ ಆಗಲಿ ಅಲ್ಪ ಪ್ರಮಾಣದಲ್ಲಿ ಮಾಡಿದರೂ ಮುಂದೆ ಅದು ಅಕ್ಷಯವಾಗಿ ಪರಿಣಮಿಸುತ್ತದೆ ಎಂಬುದಾಗಿ ನಮ್ಮ ಧರ್ಮ ಗ್ರಂಥಗಳಲ್ಲಿದೆ. ಹೀಗಾಗಿ ಈ ದಿನ ಸ್ವಲ್ಪವಾದರೂ ಚಿನ್ನವನ್ನು ಖರೀದಿಸಿದರೆ ಮುಂದೆ ಅದೇ ಅಕ್ಷಯವಾಗಿ ಮನೆತುಂಬಾ ಚಿನ್ನದ ಆಭರಣಗಳು ತುಳುಕಾಡುವಂತಾಗುತ್ತದೆ ಎಂಬ ಆಶಯದಿಂದಾಗಿ ಜನರು ಇದೇ ದಿನದಂದು ಚಿನ್ನ ಖರೀದಿಗೆ ಮುಂದಾಗುತ್ತಾರೆ.

- ಎಸ್.ಎಸ್. ಸಂಪತ್ ಕುಮಾರ್, ಭಾಗಮಂಡಲ.