(ಪ್ರಜ್ವಲ್ ಜಿ.ಆರ್)

ಮಡಿಕೇರಿ, ಮೇ ೮: ಟೆಲಿಕಾಮ್ ಸಂಸ್ಥೆಯ ಪಿ.ಒ.ಎಸ್ ಸಿಸ್ಟಮ್ (ಅಧಿಕೃತ ಮೊಬೈಲ್ ಸಿಮ್ ವಿತರಣೆಗೆ ವಿತರಕರು ಬಳಸುವ ಪರಿಕರ) ಅನ್ನು ಅನ್ಯರೊಬ್ಬರ ಆಧಾರ್ ಕಾರ್ಡ್ ಬಳಸಿ ಖರೀದಿ ಮಾಡಿ, ಆ ಮೂಲಕ ಸಾವಿರಕ್ಕೂ ಅಧಿಕ ಮಂದಿಗೆ ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡಿರುವ ಜಾಲವೊಂದು ಪತ್ತೆಯಾಗಿದ್ದು, ಕೃತ್ಯವೆಸಗಿರುವ ಮಡಿಕೇರಿಯ ಅಬ್ದುಲ್ ರೋಷನ್ ಎಂಬಾತನನ್ನು ಪೊಲೀಸರು ಬಂಧಿಸಿದ ಬಗ್ಗೆ ವರದಿಯಾಗಿದೆ.

ಈತ ಹಲವಾರು ಮಂದಿಯ ಆಧಾರ್ ಕಾರ್ಡ್ಗಳನ್ನು ಬಳಸಿ ಅವರುಗಳ ಹೆಸರಿನಲ್ಲಿ ಬಿ.ಎಸ್.ಎನ್.ಎಲ್ ಟೆಲಿಕಾಮ್ ಸಂಸ್ಥೆಯ ಅಧಿಕೃತ ಪಿ.ಒ.ಎಸ್ ಸಿಸ್ಟಮ್ ಅನ್ನು ಖರೀದಿಸಿ ಸಾವಿರಾರು ಸಿಮ್‌ಕಾರ್ಡ್ಗಳನ್ನು ಮಾರಾಟ ಮಾಡಿರುವ ಕುರಿತೂ ಮಾಹಿತಿ ದೊರಕಿದೆ. ಇವನಿಂದ ಖರೀದಿ ಮಾಡಿದ್ದ ಸಿಮ್‌ಕಾರ್ಡ್ ಅನ್ನು ಬಳಸಿ ವ್ಯಕ್ತಿಯೋರ್ವ ಕೇರಳದಲ್ಲಿ ವಂಚನೆ ನಡೆಸಿದ್ದು, ಇದರ ಬೆನ್ನ ಹಿಂದೆ ಬಿದ್ದ ಕೇರಳದ ಮಲಪುರಂ ಪೊಲೀಸರಿಗೆ ಮಡಿಕೇರಿಯಲ್ಲಿ ಅಬ್ದುಲ್ ರೋಷನ್ ನಡೆಸುತ್ತಿದ್ದ ಅನ್ಯರ ಆಧಾರ್ ದುರ್ಬಳಕೆಯ ಜಾಲದ ಬಗ್ಗೆ ತಿಳಿದುಬಂದಿದೆ.

ಘಟನೆ ವಿವರ : ಕೇರಳದ ಮಲಪುರಂನ ಅಮಾಯಕ ನಿವಾಸಿಯೋರ್ವರಿಗೆ ಹಣ ದುಪ್ಪಟ್ಟಾಗುವ ಆಮಿಷವನ್ನು ಒಡ್ಡಿದ ವಂಚಕನೋರ್ವ ಈ ವ್ಯಕ್ತಿಯನ್ನು ೨೫ ಮಂದಿ ಇರುವ ವಾಟ್ಸಾö್ಯಪ್ ಗುಂಪಿಗೆ ಸೇರಿಸಿಕೊಳ್ಳುತ್ತಾನೆ. ಅದರಲ್ಲಿ ಒಂದು ಬ್ಯಾಂಕ್ ಖಾತೆಯ ವಿವರವನ್ನು ನೀಡಿ, ಖಾತೆಗೆ ಹಣ ಜಮಾಯಿಸಿದರೆ ಹಣ ದುಪ್ಪಟ್ಟಾಗುತ್ತದೆ ಎಂಬುದಾಗಿ ಸಂದೇಶ ರವಾನಿಸುತ್ತಾನೆ. ಗ್ರೂಪ್‌ನಲ್ಲಿ ೨೫ಕ್ಕೆ ೨೫ ಮಂದಿಯೂ ವಂಚಕರೇ ಆಗಿರುತ್ತಾರೆ. ಅವರುಗಳು ‘ಹಣ ದುಪ್ಪಟ್ಟಾಗು ವುದು ನಿಜ, ನಾವೂ ಈ ರೀತಿ ಮಾಡಿ ಹಣ ದುಪ್ಟಟ್ಟಾಗಿದೆ’ ಎಂಬ ಸಂದೇಶ ಗಳನ್ನು ಕಳುಹಿಸಿ ಅಮಾಯಕನನ್ನು ನಂಬಿಸಿದ್ದಾರೆ.

(ಮೊದಲ ಪುಟದಿಂದ) ಒಂದೆರಡು ಬಾರಿ ಹಣ ದುಪ್ಪಟ್ಟಾದ ನಂತರ, ಬಲೆಗೆ ಬಿದ್ದ ಅಮಾಯಕ ಕೊನೆಗೆ ೧ ಕೋಟಿ ಹಣ ಜಮಾಯಿಸಿದ್ದಾನೆ. ಈ ಹಣ ದೊರೆತ ಬಳಿಕ ವಂಚಕರಿAದ ಯಾವುದೇ ಪ್ರತಿಕ್ರಿಯೆ ದೊರೆಯದೆ ವಂಚನೆಗೆ ಒಳಗಾಗಿದ್ದಾರೆ. ವಂಚನೆಗೆ ಒಳಗಾದ ವ್ಯಕ್ತಿ ತಮ್ಮನ್ನು ಗ್ರೂಪ್‌ಗೆ ಸೇರಿಸಿದವರ ಮೇಲೆ ಕೇರಳದ ಮಲಪುರಂ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಅಲ್ಲಿನ ಪೊಲೀಸರು ಇನ್ನೂ ನಿರತರಾಗಿದ್ದಾರಾದರೂ ಅವನು ಯಾರಿಂದ ಸಿಮ್‌ಕಾರ್ಡ್ ಖರೀದಿ ಮಾಡಿದ್ದಾನೆಂದು ಪತ್ತೆ ಹಚ್ಚುವ ಸಂದರ್ಭ ಮಡಿಕೇರಿ ನಿವಾಸಿಯಾದ ಮನೋಜ್ ಎಂಬವರ ಹೆಸರು ಬಂದಿದೆ. ಇವರನ್ನು ಅರಸುತ್ತಾ ಮಡಿಕೇರಿಗೆ ನಿನ್ನೆ ಆಗಮಿಸಿದ ಕೇರಳದ ಮಲಪುರಂ ಪೊಲೀಸರು, ವಿಚಾರಣೆ ನಡೆಸಿದಾಗ ಮಡಿಕೇರಿ ನಿವಾಸಿ, ಅಬ್ದುಲ್ ರೋಷನ್ ಎಂಬವನು ಮನೋಜ್ ಅವರ ಆಧಾರ್ ಬಳಸಿ ಬಿ.ಎಸ್.ಎನ್.ಎಲ್‌ನಿಂದ ಅಧಿಕೃತ ಪಿ.ಒ.ಎಸ್ ಸಿಸ್ಟಮ್ ಖರೀದಿಸಿ ಸುಮಾರು ಸಾವಿರ ಸಿಮ್‌ಕಾರ್ಡ್ಗಳನ್ನು ಮಾರಾಟ ಮಾಡಿರುವುದಾಗಿ ತಿಳಿದುಬಂದಿದೆ. ಹಲವಾರು ಮಂದಿಯ ಆಧಾರ್‌ಗಳನ್ನು ಹೀಗೆ ಬಳಸಿ ಸಾವಿರಾರು ಸಿಮ್ ಕಾರ್ಡ್ಗಳನ್ನು ಈ ವ್ಯಕ್ತಿ ಮಾರಾಟ ಮಾಡಿರುವುದಾಗಿ ತಿಳಿದುಬಂದಿದೆ. ಹೆಚ್ಚಿನ ವಿಚಾರಣೆಗೆ ಅಬ್ದುಲ್ ರೋಷನ್‌ನನ್ನು ಮಲಪುರಂ ಸೈಬರ್ ಪೊಲೀಸರು ಬಂಧಿಸಿ ಮಲಪುರಂಗೆ ಕರೆದೊಯ್ದಿದ್ದಾರೆ. ಮಡಿಕೇರಿ ನಗರ ಠಾಣೆಯಲ್ಲಿ ಅಬ್ದುಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಬ್ದುಲ್‌ನೊಂದಿಗೆ ಮತ್ತಿಬ್ಬರು ಅವನ ಸಹಚರರಿದ್ದರು ಎಂಬುದಾಗಿಯೂ ಮಾಹಿತಿ ದೊರಕಿದ್ದು, ತನಿಖೆ ನಡೆಯುತ್ತಿದೆ.

೨೦೨೨ ರಿಂದಲೇ ಅನ್ಯರ ಆಧಾರ್ ಬಳಸಿ ಸಿಮ್ ಕಾರ್ಡ್ ಮಾರಾಟ

೨೦೨೨ರಲ್ಲಿ ಕೋವಿಡ್ ಸಂದರ್ಭದಲ್ಲಿ ಸುಲಭವಾಗಿ ಗ್ರಾಹಕರಿಗೆ ಸಿಮ್ ಕಾರ್ಡ್ ದೊರಕುವ ಉದ್ದೇಶದಿಂದ ಹಲವಾರು ಟೆಲಿಕಾಮ್ ಸಂಸ್ಥೆಗಳAತೆ ಬಿ.ಎಸ್.ಎನ್.ಎಲ್ ಕೂಡ ಪಿ.ಒ.ಎಸ್ ಯಂತ್ರಗಳನ್ನು ಸುಲಭವಾಗಿ ಸಿಮ್ ವಿತರಕರಿಗೆ ನೀಡುವ ಸೌಲಭ್ಯ ಒದಗಿಸಿತ್ತು. ಸಿಮ್ ವಿತರಕರಾಗಲು ವಿತರಕರ ಆಧಾರ್, ಕೆ.ವೈ.ಸಿ ಅಗತ್ಯವಿದ್ದು ಇವುಗಳನ್ನು ನೀಡುವ ಸಂದರ್ಭ ವಿತರಕ ಸಂಸ್ಥೆ ಪರಿಶೀಲನೆ ನಡೆಸುತ್ತದೆ. ಆದರೆ ಪರಿಶೀಲನಾ ಕ್ರಮದಲ್ಲಿನ ಕೊರತೆಯನ್ನು ಗುರುತಿಸಿದ ಆರೋಪಿ ಇತರರ ಆಧಾರ್ ಕಾರ್ಡ್ ಬಳಸಿ ಪಿ.ಒ.ಎಸ್ ಖರೀದಿಸಲು ಪ್ರಾರಂಭಿಸಿದ್ದಾನೆ. ಈ ರೀತಿ ಹಲವರ ಆಧಾರ್‌ಗಳನ್ನು ಬಳಿಸಿ ಸಾವಿರಾರು ಸಿಮ್‌ಗಳನ್ನು ಮಾರಾಟ ಮಾಡಿರುವುದಾಗಿ ತಿಳಿದುಬಂದಿದೆ. ಅಬ್ದುಲ್ ರೋಷನ್, ಈ ಹಿಂದೆ ಮಡಿಕೇರಿಯಲ್ಲಿ ಅಂಗಡಿಯೊAದನ್ನು ನಡೆಸುತ್ತಿದ್ದರು. ಈ ಸಂದರ್ಭ ಅಲ್ಲಿಗೆ ಸಿಮ್ ಪೋರ್ಟ್, ಹೊಸ ಸಿಮ್ ಖರೀದಿಗೆಂದು ಬರುತ್ತಿದ್ದ ಗ್ರಾಹಕರ ಆಧಾರ್‌ಗಳನ್ನೇ ಬಳಸಿ ಬಿ.ಎಸ್.ಎನ್.ಎಲ್‌ನಿಂದ ಪಿ.ಒ.ಎಸ್ ಸಿಸ್ಟಮ್‌ಗಳನ್ನು ಖರೀದಿಸಿದ್ದಾನೆಂದು ಹೇಳಲಾಗುತ್ತಿದೆ. ಮನೋಜ್ ಅವರ ಆಧಾರ್ ಮಾಹಿತಿಯೂ ಇದೇ ರೀತಿ ಲಭ್ಯವಾಗಿರುವುದಾಗಿ ತಿಳಿದುಬಂದಿದೆ.

ಅಬ್ದುಲ್‌ಗೂ ಕೇರಳದ ವಂಚಕನಿಗೂ ಏನು ಸಂಬAಧ..?

ಅಬ್ದುಲ್, ಅನ್ಯರ ಆಧಾರ್ ಬಳಸಿ ಬಿ.ಎಸ್.ಎನ್.ಎಲ್‌ನ ಅಧಿಕೃತ ಪಿ.ಒ.ಎಸ್ ಸಿಸ್ಟಮ್‌ಗಳನ್ನು ಬಳಸಿಯೇ ಸಿಮ್‌ಗಳನ್ನು ಮಾರಾಟ ಮಾಡುತ್ತಿದ್ದ. ಇಂತಹದ್ದೆ ಸಿಮ್‌ವೊಂದನ್ನು ಬಳಸಿ ಕೇರಳದ ಮಲಪುರಂನಲ್ಲಿ ವಂಚಕನೋರ್ವ ಅಮಾಯಕರಿಂದ ೧ ಕೋಟಿಗೂ ಮಿಗಿಲಾಗಿ ಹಣ ದುಪ್ಪಟ್ಟಾಗುವ ಆಮಿಷವೊಡ್ಡಿ ದೋಚಿದ್ದಾನೆ. ಸಿಮ್ ಖರೀದಿದಾರರು ವಂಚನೆ ಮಾಡಿದರೆ, ಮಾರಾಟಗಾರರು ಹೊಣೆಯಾಗುವುದಿಲ್ಲ. ಆದರೆ, ಇಲ್ಲಿ ಸಂಶಯಾಸ್ಪದ ವಿಷಯವೇನೆಂದರೆ, ಕೇರಳದಲ್ಲಿ ವಂಚನೆ ನಡೆಸಿದ ವ್ಯಕ್ತಿಯ ಸಿಮ್‌ಗೆ ಅಬ್ದುಲ್, ಮನೋಜ್ ಅವರ ಆಧಾರ್ ಬಳಸಿ ಖರೀದಿಸಿದ್ದ ಪಿ.ಒ.ಎಸ್ ನಿಂದಲೇ ರೀಚಾರ್ಜ್ ಮಾಡಿರುವುದಾಗಿ ಕೇರಳದ ಪೊಲೀಸರು ಪತ್ತೆ ಹಚ್ಚಿದ್ದು, ವಂಚನೆಯ ಉದ್ದೇಶದಿಂದಲೇ ಅಬ್ದುಲ್, ಅನ್ಯರ ಆಧಾರ್‌ನಲ್ಲಿ ಸಿಮ್‌ಗಳನ್ನು ಮಾರಾಟ ಮಾಡಿರಬಹುದೆಂಬುದಾಗಿ ಸಂಶಯ ಸೃಷ್ಟಿಯಾಗಿದೆ.