ಮಡಿಕೇರಿ, ಮೇ ೯: ಇತ್ತೀಚೆಗೆ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆ ಫಲಿತಾಂಶ ಪಟ್ಟಿಯಲ್ಲಿ ಸ್ಥಾನ ಹೆಚ್ಚಿಸಿಕೊಂಡಿದೆ. ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ೮ನೇ ಸ್ಥಾನ ಪಡೆದಿದ್ದ ಕೊಡಗು ಈ ಬಾರಿ ೪ನೇ ಸ್ಥಾನ ಪಡೆದಿದೆ.
ಉಡುಪಿ ಜಿಲ್ಲೆ ಶೇ. ೯೪ ಫಲಿತಾಂಶದೊAದಿಗೆ ರಾಜ್ಯದಲ್ಲಿ ಮೊದಲ ಸ್ಥಾನ ಹಾಗೂ ದಕ್ಷಿಣ ಕನ್ನಡ ಶೇ. ೯೨.೧೨ ಫಲಿತಾಂಶದೊAದಿಗೆ ಎರಡನೇ ಸ್ಥಾನ ಪಡೆದಿದೆ. ಕೊಡಗು ಹಾಗೂ ಶಿವಮೊಗ್ಗ ಶೇ. ೮೮.೬೭ ಫಲಿತಾಂಶ ಪಡೆದಿದೆಯಾದರೂ ಪರೀಕ್ಷೆ ಬರೆದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿವಮೊಗ್ಗ ೩ನೇ ಸ್ಥಾನ, ಕೊಡಗು ೪ನೇ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ ಶೇ. ೩೫ರ ಫಲಿತಾಂಶ ಮಾತ್ರ ಪಡೆದಿದ್ದು, ಕೊನೆಯ ಸ್ಥಾನದಲ್ಲಿದೆ.
ಈ ಬಾರಿ ರಾಜ್ಯದಲ್ಲಿ ಮಾರ್ಚ್ ೨೫ ರಿಂದ ಏಪ್ರಿಲ್ ೬ರ ತನಕ ಒಟ್ಟು ೨೭೫೦ ಪರೀಕ್ಷಾ ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು. ಏಪ್ರಿಲ್ ೧೫ ರಿಂದ ೨೪ರ ತನಕ ೩೫ ಶೈಕ್ಷಣಿಕ ಜಿಲ್ಲೆಗಳ ೨೩೭ ಮೌಲ್ಯಮಾಪನಾ ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯ ನಡೆದಿದ್ದು, ಒಟ್ಟು ೬೧,೧೬೦ ಮೌಲ್ಯ ಮಾಪಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದರು. ಇದರ ಫಲಿತಾಂಶವನ್ನು ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ.
ಈ ಬಾರಿ ಒಟ್ಟು ೮,೫೯,೯೬೭ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೬,೩೧,೨೦೪ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಒಟ್ಟಾರೆಯಾಗಿ ಶೇ. ೭೩.೪೦ ರಷ್ಟು ಫಲಿತಾಂಶ ಬಂದಿದೆ. ೨೦೨೨-೨೩ನೇ ಸಾಲಿನಲ್ಲಿ ಶೇ. ೮೩.೮೯ ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ. ೧೦ ರಷ್ಟು ಕುಸಿತ ಕಂಡಿರುವುದು ವಿಶೇಷವಾಗಿದೆ. ಈ ಬಾರಿಯೂ ಬಾಲಕಿಯರೇ ಎಂದಿನAತೆ ಮೇಲುಗೈ ಸಾಧಿಸಿದ್ದಾರೆ.
ಮಡಿಕೇರಿ, ಮೇ ೯: ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕೊಡಗಿನ ಹಲವಾರು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದಾರೆ. ಮೊದಲ ೧೧ ಸ್ಥಾನಗಳಲ್ಲಿ ೯ ವಿದ್ಯಾರ್ಥಿನಿಯರೇ ಸ್ಥಾನ ಪಡೆದುಕೊಂಡಿದ್ದು, ಮೊದಲ ೩ ಸ್ಥಾನಗಳನ್ನೂ ವಿದ್ಯಾರ್ಥಿನಿಯರೇ ಪಡೆದುಕೊಂಡಿದ್ದಾರೆ. ಕುಶಾಲನಗರದ ಫಾತಿಮಾ ಶಾಲೆಯ ಈರ್ವರು ಜಿಲ್ಲೆಗೆ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡರೆ, ಗೋಣಿಕೊಪ್ಪ ಲಯನ್ಸ್ ಶಾಲೆಯ ವಿದ್ಯಾರ್ಥಿನಿ ತೃತೀಯ ಸ್ಥಾನ ಗಳಿಸಿದ್ದಾರೆ.
(ಮೊದಲ ಪುಟದಿಂದ) ಪರೀಕ್ಷೆಗೆ ಹಾಜರಾದ ೪,೩೬,೧೩೮ ಬಾಲಕರ ಪೈಕಿ ೨,೮೭,೪೧೬ ಮಂದಿ ಉತ್ತೀರ್ಣರಾಗಿ ಶೇ. ೬೫.೯೦ ಫಲಿತಾಂಶ ಬಂದಿದೆ. ೪,೨೩,೮೨೯ ಬಾಲಕಿಯರ ಪೈಕಿ ೩,೪೩,೭೮೮ ಮಂದಿ ತೇರ್ಗಡೆಯಾಗಿದ್ದು, ೮೧.೧೧ ರಷ್ಟು ಸಾಧನೆ ಮಾಡಿದ್ದಾರೆ. ನಗರಪ್ರದೇಶ ದಲ್ಲಿ ಶೇ. ೭೨.೮೩ ಹಾಗೂ ಗ್ರಾಮೀಣ ಭಾಗದಲ್ಲಿ ಶೇ. ೭೪.೧೭ ರಷ್ಟು ಫಲಿತಾಂಶ ಬಂದಿರುವುದೂ ವಿಶೇಷವಾಗಿದೆ.
ಕೊಡಗು ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ ಒಟ್ಟು ೬೧೨೩ ವಿದ್ಯಾರ್ಥಿ ಗಳಲ್ಲಿ ೫೪೨೯ ಮಂದಿ ತೇರ್ಗಡೆ ಹೊಂದಿದ್ದಾರೆ. ೩೧೪೬ ಬಾಲಕರ ವಿಭಾಗದಲ್ಲಿ ೨೯೭೭ ಮಂದಿ, ಬಾಲಕಿಯರಲ್ಲಿ ೩೧೪೬ ಮಂದಿ ಪರೀಕ್ಷೆ ಬರೆದಿದ್ದಾರೆ. ಇವರಲ್ಲಿ ೨೫೫೧ ಬಾಲಕರು, ೨೮೭೮ ಬಾಲಕಿಯರು ಉತ್ತೀರ್ಣರಾಗಿದ್ದಾರೆ. ೫೯೦೫ ಮಂದಿ ಮೊದಲ ಬಾರಿಗೆ ಪರೀಕ್ಷೆ ಬರೆದವರಾಗಿದ್ದು, ೨೧೮ ಮಂದಿ ಮರು ಪರೀಕ್ಷೆ ಬರೆದವರಾಗಿದ್ದಾರೆ.
ಪೂರ್ವ ತಯಾರಿಯಿಂದ ಸಾಧನೆ : ಡಿಡಿಪಿಐ ವಿವರಣೆ
ಫಲಿತಾಂಶದ ಕುರಿತು ಮಾಧ್ಯಮ ಗಳೊಂದಿಗೆ ತಮ್ಮ ಕಚೇರಿಯಲ್ಲಿ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ರಾದ ಎಂ. ಚಂದ್ರಕಾAತ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಐದರೊಳಗೆ ಸ್ಥಾನ ಗಳಿಸುವ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರ ಸಭೆ ನಡೆಸಿ, ಶಿಕ್ಷಕರಿಗೆ ವಿಷಯವಾರು ತರಬೇತಿಗಳನ್ನು ಹಮ್ಮಿಕೊಂಡು ಹೆಚ್ಚು ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸುವ ಮೂಲಕ ಸಿದ್ಧತೆ ನಡೆಸಲಾಗಿತ್ತು. ಮುಖ್ಯ ಶಿಕ್ಷಕರು, ಶಿಕ್ಷಕರು, ಜಿಲ್ಲಾಧಿಕಾರಿಗಳು, ಎಸ್ಪಿ, ಸಿಇಓ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಬಾರಿ ಪರೀಕ್ಷೆಯಲ್ಲಿ ಮೊದಲ ಬಾರಿಗೆ ಪ್ರತಿಯೊಂದು ಕೊಠಡಿಯಲ್ಲಿ ವೆಬ್ಕ್ಯಾಮೆರಾ ಅಳವಡಿಸಿ ವಿದ್ಯಾರ್ಥಿಗಳ ಚಲನವಲನ ಗಮನಿಸುವುದರೊಂದಿಗೆ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲಾಗಿತ್ತು ಎಂದು ಅವರು ತಿಳಿಸಿದರು. ಈ ಸಂದರ್ಭ ಎಸ್ಎಸ್ಎಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎಂ. ಮಹದೇವಸ್ವಾಮಿ ಹಾಜರಿದ್ದರು.