ಮಡಿಕೇರಿ, ಮೇ ೯: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಗುರುವಾರ ಸಂಜೆ ೪ ರಿಂದ ಒಂದಷ್ಟು ಬಿರುಸಿನ ಮಳೆ ಸುರಿಯಿತು. ದಿಢೀರ್ ಮೋಡ ಆವರಿಸುವದರೊಂದಿಗೆ ಸುಮಾರು ಅರ್ಧ ಗಂಟೆಗಳ ಕಾಲ ಧಾರಾಕಾರವಾಗಿ ಮಳೆ ಸುರಿಯಿತು. ಇದರ ನಡುವೆ ನಗರದ ಸುದರ್ಶನ ಅತಿಥಿ ಗೃಹ ಮಾರ್ಗದಲ್ಲಿ ನಿಂತಿದ್ದ ಕಾರೊಂದರ ಮೇಲೆ ಮರ ಬಿದ್ದು, ಕಾರು ಜಖಂಗೊAಡ ಘಟನೆ ನಡೆದಿದೆ. ಮರ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು.