ಮಡಿಕೇರಿ, ಮೇ ೯: ಮಳೆಗಾಲ ದಲ್ಲಿ ಸಂಭವಿಸಬಹುದಾದ ಅನಾ ಹುತ ತಪ್ಪಿಸಬೇಕೆಂಬ ಉದ್ದೇಶದಿಂದ ಆರಂಭಗೊAಡ ‘ಜರ್ಮನ್ ಟೆಕ್ನಾ ಲಜಿಯ’ ತಡೆಗೋಡೆ ಇದೀಗ ಮಳೆ ನೀರಿಗೆ ಭಯಪಡಬೇಕಾದ ಸ್ಥಿತಿಗೆ ತಲುಪಿದೆ. ರೂ. ೭ ಕೋಟಿ ವೆಚ್ಚದ ಈ ಯೋಜನೆಗೆ ಬೃಹತ್ ಟಾರ್ಪಲ್ ಇದೀಗ ಆಸರೆಯಾಗಿದ್ದು, ‘ಲೇಟೆಸ್ಟ್ ಟೆಕ್ನಾಲಜಿಗೆ’ ಹಳೆ ಮಾದರಿಯ ಪರಿಹಾರೋಪಾಯ ಗತಿ ಎಂಬA ತಾಗಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ರುವ ಜಿಲ್ಲಾಡಳಿತ ಭವನದ ಎದುರಿನ ಬರೆಗೆ ಅಡ್ಡಲಾಗಿ ನಿರ್ಮಿಸಿದ್ದ ತಡೆ ಗೋಡೆ ಈಗಾಗಲೇ ತೆರವುಗೊಂಡು ಮರುನಿರ್ಮಾಣ ಕಾರ್ಯ ಪ್ರಗತಿ ಯಲ್ಲಿದ್ದು, ಬಿರುಬಿಸಿಲಿನಿಂದ ಕಂಗೆ ಟ್ಟಿದ್ದ ಜಿಲ್ಲೆಯಲ್ಲಿ ಮಳೆರಾಯನ ದರ್ಶನ ಆಗಿ ಮುಂಗಾರು ಬಿರುಸು ಪಡೆಯುವ ಹೊಸ್ತಿಲಿನಲ್ಲಿ ಮುಂಜಾಗ್ರತ ವಾಗಿ ಟಾರ್ಪಲ್ ಮುಚ್ಚಿ ಕ್ರಮಕೈಗೊಳ್ಳ ಲಾಗಿದೆ. ೨ ಮಳೆಗಾಲ ಕಳೆದು ೩ನೇ ಮಳೆಗಾಲಕ್ಕೆ ಕಾಲಿಟ್ಟರೂ ಮುಕ್ತಾಯ ಕಾಣದ ತಡೆಗೋಡೆಗೆ ಟಾರ್ಪಲ್ ಆಸರೆಯಾಗಿದ್ದು, ಮಳೆ ನೀರು ನುಗ್ಗದಂತೆ ಬಿರುಸಿನ ಕೆಲಸ ನಡೆದಿದೆ.

೨೦೧೯ರಲ್ಲಿ ನೈಸರ್ಗಿಕ ವಿಕೋಪ ಸಂಭವಿಸಿದ ಸಂದರ್ಭ ಜಿಲ್ಲಾಡಳಿತ ಭವನ ಎದುರಿನ ಬರೆಯಿಂದ ಮಣ್ಣು ಕುಸಿದ ಪರಿಣಾಮ ಜೊತೆಗೆ ಕೆಳಗಿನ ರಸ್ತೆ ರಾಷ್ಟಿçÃಯ ಹೆದ್ದಾರಿ ೨೭೫ ಹಾದುಹೋಗುವ ಹಿನ್ನೆಲೆ ಮುಂದಾಗ ಬಹುದಾದ ಅವಘಡ ತಪ್ಪಿಸಲು ಜರ್ಮನ್ ತಂತ್ರಜ್ಞಾನದ ‘ಆರ್.ಯು. ವಾಲ್’ ಯೋಜನೆಯನ್ನು ಲೋಕೋಪ ಯೋಗಿ ಇಲಾಖೆ ಕೈಗೆತ್ತಿಕೊಂಡಿತ್ತು. ತಾ. ೨೭-೧೧-೨೦೧೯ ರಂದು ಪ್ರಕ್ರಿಯೆ ಆರಂಭಗೊAಡು, ರೂ. ೭ ಕೋಟಿ ಕ್ರಿಯಾಯೋಜನೆ ತಯಾರಿಸಿ ತಾ. ೨೨-೧೧-೨೦೨೦ಕ್ಕೆ ಕಾಮಗಾರಿ ಕಾರ್ಯಾದೇಶ ಗುತ್ತಿಗೆ ಪಡೆದ ಸಂಸ್ಥೆ ಮುಂದಿನ ೧೧ ತಿಂಗಳೊಳಗೆ ಕಾಮ ಗಾರಿ ಮುಕ್ತಾಯಗೊಳಿಸುವ ಗಡುವು ನೀಡಿ ಹಣವನ್ನು ಬಿಡುಗಡೆ ಗೊಳಿಸಲಾಗಿತ್ತು.

ವಿವಾದಿತ ತಡೆಗೋಡೆ

ತ್ವರಿತವಾಗಿ ಆರಂಭಗೊAಡ ತಡೆಗೋಡೆ ಕಾಮಗಾರಿ ೨೦೨೨ರ ಹೊತ್ತಿಗೆ ಪ್ಯಾನಲ್‌ಗಳನ್ನು ಅಳವಡಿಸಿ ಕೆಲಸ ಒಂದು ಹಂತಕ್ಕೆ ಪೂರ್ಣ ಗೊಂಡು ಮೇಲ್ಭಾಗದಲ್ಲಿ ವಾಹನ ನಿಲುಗಡೆ ಉದ್ದೇಶಕ್ಕೆ ಕಾಂಕ್ರಿಟ್ ರಸ್ತೆ ನಿರ್ಮಿಸುವ ಕಾಮಗಾರಿ ಕೈಗೆತ್ತಿ ಕೊಳ್ಳಬೇಕು ಎನ್ನುವಷ್ಟರಲ್ಲಿ ೨೦೨೨ರ ಜುಲೈ ತಿಂಗಳಿನಲ್ಲಿ ಸುರಿದ ಭಾರಿ ಮಳೆ ಸಂದರ್ಭ ತಡೆಗೋಡೆಯ ಅಲ್ಲಲ್ಲಿ ಕಾಣಿಸಿಕೊಂಡ ಉಬ್ಬು, ಬಿರುಕುಗಳು ಆತಂಕ ಸೃಷ್ಟಿಗೆ ಕಾರಣವಾಗಿದ್ದವು.

ಇದಾದ ನಂತರ ಯೋಜನೆ ಕಳಪೆ, ಭ್ರಷ್ಟಾಚಾರ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ, ಗುತ್ತಿಗೆ ಪಡೆದ ಸಂಸ್ಥೆಯ ವಿಳಂಬ, ಕರ್ತವ್ಯದಲ್ಲಿದ್ದ ಸಂಬAಧಪಟ್ಟ ಅಧಿಕಾರಿಯ ಅಮಾ ನತ್ತು. ಹೀಗೆ ಹತ್ತುಹಲವು ವಿವಾದ ವನ್ನು ತಡೆಗೋಡೆ ತನ್ನ ಮೈಮೇಲೆ ಎಳೆದುಕೊಂಡಿತು.

ರಾಷ್ಟಿçÃಯ ಹೆದ್ದಾರಿ ೨೭೫ ಅನ್ನು ಹಾದುಹೋಗುವ ಈ ತಡೆಗೋಡೆ ಯಲ್ಲಿ ೨೦೨೨ರಲ್ಲಿ ಸಂಭವಿಸಿದ್ದ ಉಬ್ಬು, ಬಿರುಕಿಗೆ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ಕಾರಣ ಎಂದು ಮೇಲ್ನೋ ಟಕ್ಕೆ ಸಾಬೀತಾಗಿತ್ತು. ನಂತರ ಅಳವಡಿ ಸಿದ್ದ ಪ್ಯಾನಲ್‌ಗಳನ್ನು ಕಳಚಿ, ತಡೆ ಗೋಡೆಗೆ ವಿಶಾಲವಾದ ಟಾರ್ಪಲ್ ಹಾಕಿ ಜರ್ಮನ್ ತಂತ್ರಜ್ಞಾನಕ್ಕೆ ಅಧಿ ಕಾರಿಗಳು ಸವಾಲು ಹಾಕಿದ್ದರು. ಆದರೆ, ಮಳೆಯ ಆರ್ಭಟಕ್ಕೆ ಪ್ಲಾಸ್ಟಿಕ್‌ನಿಂದ ನೀರು ಸೋರಿಕೆಯಾಗಿ ಬರೆಯೊಳಗೆ ನುಗ್ಗಿ ತಡೆಗೋಡೆ ಯೋಜನೆ ಅಸಾಧ್ಯ ಎಂಬ ಪರಿಸ್ಥಿತಿಗೆ ತಲು ಪಿತ್ತು. ಈ ನಡುವೆಯೂ ಗುತ್ತಿಗೆ ಪಡೆದ ಸಂಸ್ಥೆ ಮೂಲಕ ತಡೆಗೋಡೆ ಕೆಲಸ ಆಮೆಗತಿಯಲ್ಲಿ ಸಾಗುತಿತ್ತು.

ಕಾಂಗ್ರೆಸ್ ಮುಖಂಡ ತೆನ್ನೀರ ಮೈನಾ ಈ ಯೋಜನೆಯಲ್ಲಿ ಅವ್ಯ ವಹಾರ ನಡೆದಿದೆ ಹಾಗೂ ಕಳಪೆ ಗುಣಮಟ್ಟದಲ್ಲಿ ಕೂಡಿದೆ ಎಂದು ಆರೋಪಿಸಿ ಇಲಾಖೆ ಅಧಿಕಾರಿ ವಿರುದ್ಧ ಲೋಕಾಯುಕ್ತ ಸೇರಿದಂತೆ ಸಂಬA ಧಪಟ್ಟ ಇಲಾಖೆಗೆ ದೂರು ನೀಡಿ ದ್ದರು. ಇತ್ತೀಚಿಗಷ್ಟೆ ಕರ್ನಾಟಕ ವಿಧಾನಸಭಾ ಅರ್ಜಿ ಸಮಿತಿ ಸದ ಸ್ಯರು ಭೇಟಿ ನೀಡಿ ವಾಸ್ತವ ಚಿತ್ರಣ ಪಡೆದುಕೊಂಡಿದ್ದರು.

ಈ ವರ್ಷ ಮತ್ತೆ ತಡೆಗೋಡೆಗೆ ಮಳೆಯ ಭಯ ಕಾಡುತ್ತಿರುವ ಕಾರಣ ಈಗಾಗಲೇ ಪ್ಲಾಸ್ಟಿಕ್ ಟಾರ್ಪಲ್ ಹೊದಿಸಲಾಗಿದ್ದು, ಕಾಮಗಾರಿ ಕಥೆ ಮುಂದೇನು? ಎಂಬ ಪ್ರಶ್ನೆ ಉದ್ಭವಿ ಸುವಂತೆ ಮಾಡಿರುವುದಂತೂ ಸತ್ಯ.

ಟಿ ಹೆಚ್.ಜೆ. ರಾಕೇಶ್